ದಕ್ಷಿಣ ಭಾರತದ ಸ್ಟಾರ್ ನಟನ ಚಿತ್ರವನ್ನೇ ತಿರಸ್ಕರಿಸಿದ ಸಮಂತಾ ಅವರು, ಕಾರಣ ಏನ್ ಗೊತ್ತೇ

ಜ್ಯೂನಿಯರ್ ಎನ್.ಟಿ.ಆರ್ ಅವರು ರಾಜಮೌಳಿ ಅವರ ಜೊತೆ ಥ್ರಿಬಲ್ ಆರ್ ಸಿನಿಮಾ ಮಾಡಿದ ನಂತರ ಕಥೆಯ ಆಯ್ಕೆಯ ಬಗ್ಗೆ ಭಾರಿ ಜಾಗೃತರಾಗಿದ್ದಾರೆ. ಥ್ರಿಬಲ್ ಆರ್ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಅದರ ಜೊತೆಗೆ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಾಣ ಮಾಡಿದೆ. ಹೀಗಾಗಿ ಜ್ಯೂನಿಯರ್ ಎನ್.ಟಿ.ಆರ್ ಅವರು ತಮ್ಮ ಯಶಸ್ಸಿನ ಹಾದಿ ಹೀಗೆ ಸುಗಮವಾಗಿರಬೇಕು ಎಂಬ ಉದ್ದೇಶದಿಂದ ತಮ್ಮ ಮುಂದಿನ ಚಿತ್ರದ ಬಗ್ಗೆ ತುಂಬಾ ಜಾಗರೂಕವಾಗಿ ಹೆಜ್ಜೆ ಇಡುತ್ತಿದ್ದಾರೆ. ಅದರಂತೆ ಜ್ಯೂನಿಯರ್ ಎನ್ಟಿಆರ್ ಅವರು ತಮ್ಮ ಮೂವತ್ತನೇ ಚಿತ್ರವನ್ನು ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರೊಟ್ಟಿಗೆ ಮಾಡುತ್ತಿದ್ದಾರೆ.

ಈ ಚಿತ್ರದ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು, ಸಖತ್ ಕ್ರೇಜ಼್ ಹುಟ್ಟು ಹಾಕಿದೆ. ಇನ್ನೂ ಕೂಡ ಟೈಟಲ್ ಫಿಕ್ಸ್ ಅಗದ ಈ ಸಿನಿಮಾಗೆ ಯಾರು ನಾಯಕಿ ಆಗ್ಬೋದು ಅಂತ ಎಲ್ಲರಿಗೂ ಕುತೂಹಲ ಕಾಡಿತ್ತು. ಒಂದು ಮೂಲದ ಪ್ರಕಾರ ಅಚ್ಚರಿಯ ಸುದ್ದಿಯೊಂದು ಹೊರ ಬಿಧ್ದಿದೆ‌. ಅದೇನಪ್ಪಾ ಅಂದರೆ ಜ್ಯೂನಿಯರ್ ಎನ್.ಟಿ.ಆರ್ ಅವರ ಈ 30ನೇ ಹೊಸ ಚಿತ್ರಕ್ಕೆ ಆಪಲ್ ಬ್ಯೂಟಿ ಸಮಂತಾ ಅವರು ಆಯ್ಕೆ ಆಗಿದ್ರಂತೆ. ಸಮಂತಾ ಅವರನ್ನ ನಿರ್ದೇಶಕ ಕೊರಟಾಲ ಶಿವ ಅವರು ಭೇಟಿ ಆಗಿ ಮಾತುಕತೆ ಕೂಡ ನಡೆದಿದ್ದಂತೆ. ಈ ಹಿಂದೆ ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ ಜನತಾ ಗ್ಯಾರೇಜ್ ಸಿನಿಮಾದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಜೋಡಿಯಾಗಿ ಇದೇ ಸಮಂತಾ ಅವರನ್ನ ಆಯ್ಕೆ ಮಾಡಿಕೊಂಡಿದ್ರು‌.

ಈ ಜನತಾ ಗ್ಯಾರೇಜ್ ಸಿನಿಮಾ ಕೂಡ ಸೂಪರ್ ಹಿಟ್ ಆಗಿ ತಾರಕ್ ರಾಮ್ ಮತ್ತು ಸಮಂತಾ ಅವರ ಜೋಡಿ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಂತೆ ಈ ಸನಿಮಾದಲ್ಲಿಯೂ ಕೂಡ ತಾರಕ್ ರಾಮ್ ಜೊತೆ ಸಮಂತಾ ಅವರು ನಟಿಸಿದರೆ ಕಮಾಲ್ ಮಾಡಲಿದೆ ಎಂದು ಆಲೋಚನೆ ಮಾಡಿದ್ದರು. ಆದರೆ ಕೊರಟಾಲ ಶಿವ ಅವರ ಯೋಚನೆಗೆ ಸಮಂತಾ ಅವರು ತಣ್ಣೀರೆರಚಿದ್ದಾರೆ. ಹೌದು ಕೊರಟಾಲ ಶಿವ ಅವರು ತಮ್ಮ ಈ ಹೊಸ ಚಿತ್ರದಲ್ಲಿ ನಟಿಸಲು ಎರಡೂವರೆ ಕೋಟಿ ಆಫರ್ ಮಾಡಿದ್ದರು. ಆದರೆ ನಟಿ ಸಮಂತಾ ಅವರು ನಾಲ್ಕು ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ.

ಹಾಗಾಗಿ ಜ್ಯೂನಿಯರ್ ಎನ್.ಟಿ.ಆರ್ ಅವರ ಸಿನಿಮಾ ಅಂತ ಗೊತ್ತಿದ್ರೂ ಕೂಡ ಸಮಂತಾ ಅವರು ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ಇರೋದು ಅಚ್ಚರಿ ಮೂಡಿಸಿದೆ. ಪುಷ್ಪ ಚಿತ್ರದ ನಂತರ ನಟಿ ಸಮಂತಾ ಅವರು ದೇಶದೆಲ್ಲೆಡೆ ಅಪಾರ ಜನಪ್ರಿಯತೆ ಸಿಕ್ಕಿದೆ. ಅದರ ಜೊತೆಗೆ ಆಕೆಯ ಕಾಲ್ ಶೀಟ್ ಗಾಗಿ ನಿರ್ಮಾಪಕರು, ನಿರ್ದೇಶಕರು ಕಾತುರದಲ್ಲಿ ಕಾಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕ್ರೇಜ಼್ ಪಡೆದುಕೊಂಡಿರುವ ನಟಿ ಸಮಂತಾ ಅವರು ಸದ್ಯದ ಮಟ್ಟಿಗೆ ಸೌತ್ ಸಿನಿ ದುನಿಯಾದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಜೊತೆಗೆ ತಮ್ಮ ಸಂಭಾವನೆಯನ್ನ ಕೂಡ ಏರಿಕೆ ಮಾಡಿಕೊಂಡು ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹಿಟ್ ಜೋಡಿ ಆಗಿರೋ ಸಮಂತಾ ಮತ್ತು ಜ್ಯೂನಿಯರ್ ಮತ್ತೇ ಒಂದಾಗಲಿದ್ದಾರೆ ಅನ್ನೋ ಅಭಿಮಾನಿಗಳ ಆಸೆ ಇದೀಗ ನಿರಾಸೆಗೊಂಡಿದೆ.

Leave a Reply

%d bloggers like this: