ದಕ್ಷಿಣ ಭಾರತದ ಖ್ಯಾತ ನಟನ ಹಾಲಿವುಡ್ ಚಿತ್ರಕ್ಕೆ 1600 ಕೋಟಿ ಬಜೆಟ್

ತಮಿಳು ಚಿತ್ರರಂಗದಲ್ಲಿ ಆಲ್ ರೌಂಡರ್ ಆಗಿ ತಮಿಳು ಸಿನಿ ಪ್ರೇಕ್ಷಕರು ಮತ್ತು ಭಾರತೀಯ ಚಿತ್ರರಂಗದ ಎಲ್ಲಾ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ನಟ ಅಂದರೆ ಧನುಷ್. ಇಷ್ಟು ವರ್ಷಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ಧನುಷ್ ಇದೀಗ ಹಾಲಿವುಡ್ ನಲ್ಲಿಯೂ ಕಮಾಲ್ ಮಾಡಲು ಹೊರಟಿದ್ದಾರೆ. ಧನುಷ್ ಅವರು ಇಂಗ್ಲೀಷ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಸದ್ಯಕ್ಕೆ ಧನುಷ್ ಮತ್ತೆ ಸುದ್ದಿಯಾಗಿದ್ದಾರೆ. ಧನುಷ್ ಅವರು ಸಖತ್ ಸುದ್ದಿಯಾಗಿದ್ದು ಅಂದ್ರೆ ಅದು ಅಸುರನ್ ಚಿತ್ರದ ಸಂಧರ್ಭದಲ್ಲಿ. ಯಾಕಂದ್ರೆ ಅಸುರನ್ ಸಿನಿಮಾದಲ್ಲಿ ಧನುಷ್ ಅವರ ಮನೋಜ್ಞ ನಟನೆಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಧನುಷ್ ಅವರು ಇಂಗ್ಲೀಷಿನಲ್ಲಿ ದಿ ಗ್ರೇ ಮ್ಯಾನ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪೋಸ್ಟರ್ ನಲ್ಲಿ ಧನುಷ್ ಕ್ಲಾಸ್ ಅಂಡ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ದಿ ಗ್ರೇ ಮ್ಯಾನ್ ಚಿತ್ರವನ್ನ ಆಂಥೋನಿ ಮತ್ತು ಜೋ ರಸ್ಸೋ ನಿರ್ದೇಶನ ಮಾಡಿದ್ದು, ಈ ಚಿತ್ರಕ್ಕೆ ನೆಟ್ ಫ್ಲಿಕ್ಸ್ ಬಂಡವಾಳ ಹೂಡಿದೆ. ಮೂಲಗಳ ಪ್ರಕಾರ ಈ ಸಿನಿ‌ಮಾಗೆ ಸರಿ ಸುಮಾರು ಇನ್ನೂರು ಮಿಲಿಯನ್ ಅಂದರೆ ಬರೋಬ್ಬರಿ 1600 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಚಿತ್ರದ ಪ್ರಮುಖ ಸನ್ನಿವೇಶ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಅಂತಾನೇ 319 ಕೋಟಿ ವೆಚ್ಚ ಮಾಡಲಾಗಿದೆಯಂತೆ. ಈ ದಿ ಗ್ರೇ ಮ್ಯಾನ್ ಸಿನಿಮಾ ನಟ ಧನುಷ್ ಸಿನಿ ವೃತ್ತಿ ಜೀವನದ ಬಹುದೊಡ್ಡ ಬಜೆಜ್ ಸಿನಿಮಾ ಎಂದು ಹೇಳಲಾಗುತ್ತಿದೆ. ಧನುಷ್ ಅವರೊಟ್ಟಿಗೆ ಈ ಸಿನಿಮಾದಲ್ಲಿ ಕ್ರಿಸ್ ಇವಾನ್ಸ್, ರಯಾನ್ ಗೋಸ್ಲಿಂಗ್ ಸೇರಿದಂತೆ ದಿಗ್ಗಜ ಕಲಾವಿದರು ದಿ ಗ್ರೇ ಮ್ಯಾನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎಲ್ಲವೂ ಅಂದುಕೊಂಡಂತೆಯಾದರೆ ಈಗಾಗಲೇ ಅನೌನ್ಸ್ ಮಾಡಿದಂತೆ ಈ ಸಿನಿಮಾ ಇದೇ ಜುಲೈ 22ರಂದು ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.

Leave a Reply

%d bloggers like this: