ದಕ್ಷಿಣ ಭಾರತದ ಈ ಒಂದೇ ಚಿತ್ರಕ್ಕೆ ಬರೊಬ್ಬರಿ 20 ಕೋಟಿ ಸಂಭಾವನೆ ಪಡೆದ ನಟಿ

ಯಾರೂ ಒಪ್ಪಿಕೊಳ್ಳದ ಪಾತ್ರ ಒಪ್ಪಿಕೊಂಡ ಬಾಲಿವುಡ್ ಬ್ಯೂಟಿ ನಟಿ ಊರ್ವಶಿ ರೌಟೆಲಾ ಈ ಚಿತ್ರಕ್ಕಾಗಿ ಬರೋಬ್ಬರಿ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದಾರಂತೆ. ಹಾಗಾದರೆ ಯಾವುದು ಈ ಸಿನಿಮಾ. ಇದರ ರಿಯಲ್ ಕಹಾನಿ ಏನೆಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೆಲವು ದಿನಗಳ ಹಿಂದೆಯಷ್ಟೆ ಜುಲೈ 28ರಂದು ದೇಶಾದ್ಯಂತ ಬಿಡುಗಡೆಯಾದ ತಮಿಳಿನ ಪ್ಯಾನ್ ಇಂಡಿಯಾ ಸಿನಿಮಾ ಪಂಚ ಭಾಷೆಗಳಲ್ಲಿ ರಿಲೀಸ್ ಆದ ಸರವಣ ಅವರ ದಿ ಲೆಜೆಂಡ್ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ದಿ ಲೆಜೆಂಡ್ ಸಿನಿಮಾ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜೊತೆಗೆ ಇದೀಗ ಹೊಸದೊಂದು ಚರ್ಚೆಯನ್ನ ಹುಟ್ಟು ಹಾಕಿದೆ‌. ಹೌದು ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ.

ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ದಿ ಲೆಜೆಂಡ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಇಡೀ ತಂಡ ಬೆಂಗಳೂರಿಗೆ ಆಗಮಿಸಿತ್ತು. ಚಿತ್ರದ ಹೀರೋ ಕಮ್ ಪ್ರೊಡ್ಯೂಸರ್ ಸರವಣನ್, ಬಾಲಿವುಡ್ ಬ್ಯೂಟಿ ನಟಿ ಊರ್ವಶಿ ರೌಟೇಲ, ರೈ ಲಕ್ಷ್ಮಿ ಸೇರಿದಂತೆ ನಿರ್ದೇಶಕ ಜೆ.ಡಿ.ಜೆರ್ರಿ ಕೂಡ ಬಂದು ಚಿತ್ರದ ಬಗ್ಗೆ ಮಾತನಾಡಿ ಹೋಗಿದ್ದರು. ಅಂದು ಕನ್ನಡದ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿ ಕಾರಣ ದಿ ಲೆಜೆಂಡ್ ಸಿನಿಮಾಗೆ ಕರ್ನಾಟಕದಲ್ಲಿ ನಿರೀಕ್ಷೆಗೆ ತಕ್ಕಂತೆ ರೆಸ್ಪಾನ್ಸ್ ಸಿಕ್ಕಿಲ್ಲ.

ಇದೊಂದು ಕಡೆಯಾದರೆ ಇನ್ನೊಂದು ಕಡೆ ಇದೀಗ ನಟಿ ಊರ್ವಶಿ ರೌಟೇಲಾ ಅವರು ಈ ಚಿತ್ರದಲ್ಲಿ ನಟಿಸುವುದಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಹೌದು ಮಾಡೆಲ್ ಕಮ್ ನಟಿಯಾಗಿರುವ ಊರ್ವಶಿ ರೌಟೇಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ. ದಿ ಲೆಜೆಂಡ್ ಸಿನಿಮಾದಲ್ಲಿ ನಟಿಸಲು ಊರ್ವಶಿ ಅವರಿಗೆ ಅಪ್ರೋಚ್ ಮಾಡುವ ಮುನ್ನ ಬಾಲಿವುಡ್ ನ ಅನೇಕ ಸ್ಟಾರ್ ನಟಿಯರಿಗೆ ಅಪ್ರೋಚ್ ಮಾಡಲಾಗಿತ್ತಂತೆ. ಸರವಣನ್ ಅವರು ಹೀರೋ ಅಂದಿದ್ದಕ್ಕೆ ಅವರೆಲ್ಲರು ಈ ಚಿತ್ರ ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದರಂತೆ. ಅದರಲ್ಲಿಯೂ ಬಾಲಿವುಡ್ ಸ್ಟಾರ್ ನಟಿ ಶ್ರದ್ದಾ ಕಪೂರ್ ಅವರನ್ನ ದಿ ಲೆಜೆಂಡ್ ಸಿನಿಮಾದಲ್ಲಿ ನಟಿಸಲು ಆಫರ್ ನೀಡಿದಾಗ ಅವರು ಸರವಣನ್ ಅವರೇ ಹೀರೋ ಅಂದಾಗ ಒಪ್ಪದೇ ರಿಜೆಕ್ಟ್ ಮಾಡಿದ್ರಂತೆ.

ಹಾಗಾಗಿ ನಿರ್ಮಾಪಕ ಸರವಣ ಅವರು ಅವರೆಲ್ಲರಿಗಿಂತ ಮಿಗಿಲಾಗಿ ಬಾಲಿವುಡ್ ಬ್ಯೂಟಿ ಕಮ್ ಮಾಡೆಲ್ ಸುಂದರಿ ಊರ್ವಶಿ ಅವರನ್ನೇ ನಾಯಕಿಯನ್ನಾಗಿ ಕರೆ ತಂದು ದಿ ಲೆಜೆಂಡ್ ಸಿನಿಮಾದಲ್ಲಿ ಸರವಣ ಊರ್ವಶಿ ರೌಟೇಲಾ ಮತ್ತು ರೈ ಲಕ್ಷ್ಮಿ ಅವರೊಟ್ಟಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನಪ್ಪಾ ಅಂದರೆ ನಟಿ ಊರ್ವಶಿ ರೌಟೇಲಾ ಅವರು ಈ ಚಿತ್ರಕ್ಕಾಗಿ ಎಷ್ಟು ಸಂಭಾವನೆ ಪಡೆದಿರಬೇಕು ಅನ್ನೋದು. ಮೂಲಗಳ ಪ್ರಕಾರ ಊರ್ವಶಿ ರೌಟೇಲಾ ಸಾಮಾನ್ಯವಾಗಿ ಅವರು ಪಡೆಯುವ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆಯನ್ನ ಈ ಲೆಜೆಂಡ್ ಚಿತ್ರದಲ್ಲಿ ನಟಿಸಲು ಪಡೆದಿದ್ದಾರಂತೆ. ಅಂದರೆ ಬರೋಬ್ಬರಿ 20 ಕೋಟಿ ಸಂಭಾವನೆಯನ್ನ ಊರ್ವಶಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಊರ್ವಶಿ ರೌಟೇಲಾ ಕನ್ನಡದಲ್ಲಿ ಎಪಿ ಅರ್ಜುನ್ ಅವರ ಐರಾವತ ಸಿನಿಮಾದಲ್ಲಿ ಡಿ ಬಾಸ್ ಅವರೊಟ್ಟಿಗೆ ನಟಿಸಿದ್ದರು‌. ಇದೀಗ ದಿ ಲೆಜೆಂಡ್ ಸಿನಿಮಾ ಕನ್ನಡದಲ್ಲಿಯೂ ಕೂಡ ರಿಲೀಸ್ ಆದ ಕಾರಣ ಕನ್ನಡಕ್ಕೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ.

Leave a Reply

%d bloggers like this: