ಹೆಸರಿಗೆ ಮಾತ್ರ ದಕ್ಷಿಣ ಭಾರತದ ದೊಡ್ಡ ಖ್ಯಾತ ನಟಿ, ಆದ್ರೆ ಯಾವ ಹೋಟೆಲ್ ನಲ್ಲಿ ಈ ನಟಿಗೆ ರೂಮ್ ಕೊಡುವುದಿಲ್ಲ

ದಕ್ಷಿಣ ಭಾರತದ ಈ ಖ್ಯಾತ ನಟಿಗೆ ಉಳಿದುಕೊಳ್ಳಲು ಯಾವುದೇ ಕಾರಣಕ್ಕೂ ಈ ನಗರದಲ್ಲಿ ಹೋಟೆಲ್ ರೂಮ್ ದೊರೆಯುವುದಿಲ್ಲ.ಈ ಸಿಟಿಯಲ್ಲಿ ಹೋಟೆಲ್ ಮಾಲಿಕರು ಈ ನಟಿಗೆ ರೂಂ ನೀಡಲು ನಿರಾಕರಿಸುತ್ತಾರಂತೆ..!ಸಾಮಾನ್ಯವಾಗಿ ಸ್ಟಾರ್ ಸೆಲೆಬ್ರಿಟಿಗಳು ನಮ್ಮ ಹೋಟೆಲ್ ನಲ್ಲಿ ಉಳಿದುಕೊಂಡರೆ ನಮ್ಮ ಹೋಟೆಲ್ ಗೆ ಒಳ್ಳೆಯ ಹೆಸರು ಪ್ರಚಾರದ ಜೊತೆಗೆ ಉತ್ತಮ ವ್ಯವಹಾರ ವ್ಯಾಪರ ಕೂಡ ಆಗುತ್ತದೆ ಎಂದು ಬಹುತೇಕರು ಅಂದುಕೊಳ್ಳುತ್ತಾರೆ.ಆದರೆ ಮುತ್ತಿನ ನಗರಿ ಹೈದರಾಬಾದ್ ನಗರದ ಫೈವ್ ಸ್ಟಾರ್ ಹೋಟೆಲ್ ಮಾಲೀಕರು ಇದಕ್ಕೆ ತದ್ವಿರುದ್ದ.ಅಷ್ಟಕ್ಕೂ ಈ ನಟಿ ಯಾರು.ಯಾವ ಕಾರಣಕ್ಕಾಗಿ ಈ ನಟಿಗೆ ಹೋಟೆಲ್ ರೂಂ ನೀಡಲು ನಿರಾಕರಿಸುತ್ತಾರೆ ಎಂಬ ಕಾರಣ ಕೇಳಿದರೆ ನಿಮಗೆ ನಿಜಕ್ಕೂ ಕೂಡ ಆಶ್ಚರ್ಯಕ್ಕೆ ಒಳಗಾಗುತ್ತೀರಿ.ಹೌದು ಕೆಲವೊಮ್ಮೆ ನಾವು ನಡೆದುಕೊಳ್ಳುವ ರೀತಿ,ನೀತಿ,ನಡವಳಿಕೆ ವ್ಯಕ್ತಿತ್ವಗಳು ನಮ್ಮ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ನಟಿ ಸಾಕ್ಷಿ ಯಾಗಿದ್ದಾರೆ.

ದಕ್ಷಿಣ ಭಾರತದ ಸುಪ್ರಸಿದ್ದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ನಟಿ ನಯನಾತಾರಾ ಅವರೇ ಈ ಈ ಸಂಗತಿಗೆ ಕಾರಣವಾಗಿರುವುದು.ನಟಿ ನಯನಾತಾರಾ ಅವರಿಗೆ ಯಾವ ಸ್ಟಾರ್ ನಟನಿಗೂ ಕಮ್ಮಿ ಇಲ್ಲದ ಸಂಭಾವನೆ,ಫ್ಯಾನ್ ಫಾಲೋವರ್ಸ್ ಇದ್ದಾರೆ.ಅಂತೆಯೇ ಅವರ ನಟನೆಯ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ.ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರಾದ ನಯನಾತಾರ ಅವರು ಮುಂಗೋಪದ ಸ್ವಭಾವದವರಂತೆ.ಅವರಿಗೆ ಯಾವುದಾದರು ವಿಚಾರದಲ್ಲಿ ಅಸಮಾಧಾನ ಆದರೆ,ಅವರು ತಕ್ಷಣ ಆಕ್ರಮಣಕಾರಿಯಾಗಿ ಪ್ರತಿಕ್ರಿಯೆ ನೀಡುತ್ತಾರಂತೆ.ಭಾವೋದ್ರೇಗಕ್ಕೆ ಒಳಗಾಗುವ ನಟಿ ಕೈಗೆ ಸಿಕ್ಕ ವಸ್ತುಗಳನ್ನ ಬಿಸಾಡಿ ರಂಪಾಟ ಮಾಡುತ್ತಾರಂತೆ.

ಹೀಗೆ ಸಿನಿಮಾವೊಂದರ ಶೂಟಿಂಗ್ ಮುಗಿಸಿ ಹೈದರಾಬಾದ್ ನ ಫೈವ್ ಸ್ಟಾರ್ ಒಂದರಲ್ಲಿ ಉಳಿದುಕೊಂಡಿದ್ದ ನಟಿ ನಯನಾತಾರಾ ವೈಯಕ್ತಿಕ ಕಾರಣಗಳಿಂದ ಅಸಮಾಧಾನಗೊಂಡು ಆ ಹೋಟೆಲ್ ರೂಂ ನಲ್ಲಿದ್ದ ಅತ್ಯಂತ ಐಷಾರಾಮಿ ದುಬಾರಿ ಬೆಲೆಯ ವಸ್ತುಗಳನ್ನು ಹೊಡೆದಾಕಿದ್ದರಂತೆ.ಇವರ ಈ ವ್ಯಕ್ತಿತ್ವ ಕಂಡು ಹೋಟೆಲ್ ಮಾಲೀಕರು ಇಂದಿಗೂ ಕೂಡ ನರನಾತಾರಾ ಅವರಿಗೆ ರೂಂ ನಿರಾಕರಿಸುತ್ತಾರಂತೆ.ಎಷ್ಟೋ ಬಾರಿ ನಟಿ ನಯನಾತಾರ ಅವರು ಹೈದರಾಬಾದ್ ನಲ್ಲಿ ರೂಂ ಸಿಗದೆ ಚೆನ್ನೈಗೆ ಹೋಗಿರುವ ಉದಾಹರಣೆಗಳಿವೆ ಎಂದು ಕೆಲವರು ತಿಳಿಸುತ್ತಾರೆ.

Leave a Reply

%d bloggers like this: