ದಾರಿಯಲ್ಲಿ ಪಕೋಡ ಮಾರಾಟಮಾಡುತ್ತಿದ್ದ ಹುಡುಗ ಸಾವಿರಾರು ಕೋಟಿಗಳ ಒಡೆಯನಾಗಿದ್ದು ಹೇಗೆ ಗೊತ್ತಾ?ರೋಚಕ ಕಥೆ

ರಸ್ತೆ-ಬದಿಗಳಲ್ಲಿ ಪಕೋಡ ಮಾರುತ್ತಾ,ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಮಾಡುತ್ತಿದ್ದಂತಹ ಹುಡುಗ ಇಂದು ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ನಿಂತಿದ್ದಾನೆ.ಜೀವನದಲ್ಲಿ ಏನಾದರು ಸಾಧಿಸಬೇಕು ಎಂದು ಒಮ್ಮೆ ಧೃಡನಿರ್ಧಾರ ಮಾಡಿದರೆ ಏನನ್ನಾದರು ಬೇಕಾದರು ಸಾಧಿಸಬಹುದು.ಅದಕ್ಕೆ ಮಾಡುವ ಮನಸ್ಸು ಇರಬೇಕು ಅಷ್ಟೆ.ಇಂದು ನಮ್ಮ ಮುಂದೆ ಸಾಧಕರಾಗಿ ನಿಂತಿರುವ ಬಹುತೇಕ ಯಶಸ್ವಿ ವ್ಯಕ್ತಿಗಳು ಅವರ ಬಾಲ್ಯದ ದಿನಗಳಲ್ಲಿ ಒಂದೊತ್ತಿನ ಊಟಕ್ಕೂ ಕೂಡ ಕಷ್ಟ ಪಡುತ್ತಿದ್ದವರು.ಅಂತೆಯೇ ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಮೇಲೇರಿದ ವ್ಯಕ್ತಿಗಳಲ್ಲಿ ಧೀರೂಬಾಯಿ ಅಂಬಾನಿ ಕೂಡ ಒಬ್ಬರು.ಇವರು ಮೊದಲು ಜೀವನ ನಿರ್ವಹಣೆಗಾಗಿ ರಸ್ತೆ ಬದಿಗಳಲ್ಲಿ ಸಣ್ಣ ಪುಟ್ಟ ಜಾಗದಲ್ಲೇ ಟೆಂಟ್ ಹಾಕಿಕೊಂಡು ಪಕೋಡ,ಬಜ್ಜಿ ಮಾರುತ್ತಾರೆ.ಕ್ರಮೇಣ ಬದಲಾವಣೆ ಕಂಡುಕೊಂಡು ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಫಿಲ್ ಮಾಡುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.ಹೀಗೆ ಇವರ ಕೆಲಸ ಕಾರ್ಯ ವೈಖರಿ ಮೆಚ್ಚಿ ಅಲ್ಲಿನ ಮೇಲಾಧಿಕಾರಿಗಳು ಅದೇ ಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಹುದ್ದೆ ನೀಡುತ್ತಾರೆ.

ಹೀಗೆ ಮುಂದಿನ ದಿನಗಳಲ್ಲಿ ಧೀರೂಬಾಯಿ ಅಂಬಾನಿ ಅವರು ಫೋರ್ಟ್ ನಲ್ಲಿ ತೈಲ ತುಂಬುವಂತಹ ಘಟಕದಲ್ಲಿ ನಿರ್ವಹಣೆ ಮಾಡುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.ಕೆಲಸ ಕಲಿಯುತ್ತಾ,ಅಲ್ಲಿನ ವ್ಯವಹಾರಗಳನ್ನು ಕರಗತ ಮಾಡಿಕೊಂಡ ಧೀರೂಬಾಯಿ ಅಂಬಾನಿ ಅವರು ಉದ್ಯೋಗದ ಜೊತೆ ಜೊತೆಗೆ ರಯಲ್ ನಾಣ್ಯಗಳನ್ನು ಕೊಳ್ಳು ಮತ್ತು ಮಾರಾಟ ಮಾಡುವಂತಹದಕ್ಕೆ ಶುರು ಮಾಡುತ್ತಾರೆ.ಈ ರಯಲ್ ನಾಣ್ಯಗಳಿಗೆ ಲಂಡನ್ ದೇಶದಲ್ಲಿ ಭಾರಿ ಬೇಡಿಕೆ ಇರುತ್ತದೆ.ಈ ನಾಣ್ಯಗಳನ್ನು ವಿನಿಮಯ ಕಾರ್ಯದಲ್ಲಿ ತೊಡಿಗಿಸಿಕೊಂಡು ಅಪಾರ ಹಣವನ್ನು ಸಂಪಾದಿಸುತ್ತಾರೆ.ಈ ಹಣದಲ್ಲಿ ಮುಂಬೈ ನಗರದಲ್ಲಿ ರಿಲಾಯನ್ಸ್ ಕಮರ್ಷಿಯಲ್ ಕಾರ್ಪೋರೇಶನ್ ಪ್ರಾರಂಭ ಮಾಡುತ್ತಾರೆ.

ತಮ್ಮ ಮೊದಲ ವಾಣಿಜ್ಯ ವ್ಯಾಪಾರ ಆರಂಭ ಮಾಡಿದಾಗ ಯಾವುದೇ ರೀತಿಯ ಹೊಸ ಸಲಕರಣಿಗಳನ್ನು ಖರೀದಿಸದೇ ಕೆಳ ದರ್ಜೆಯ ಕುರ್ಚಿ,ಟೇಬಲ್ ಗಳನ್ನು ಉಪಯೋಗಿಸಿಕೊಂಡು ಕೇವಲ ಹದಿನೈದು ಸಾವಿರ ಬಂಡವಾಳ ತೊಡಗಿಸುತ್ತಾರೆ.ಈ ವ್ಯಾಪಾರ ಉತ್ತಮವಾಗಿ ನಡೆಯುತ್ತಿದ್ದನ್ನು ನೋಡಿಕೊಂಡು ಇದರಲ್ಲಿ ಬಂದಂತಹ ಲಾಭಾಂಶದಲ್ಲಿ ಅಹ್ಮದಾಬಾದ್ ನಲ್ಲಿ ಟೆಕ್ಸ್ ಟೈಲ್ಸ್ ಬಟ್ಟೆ ಜವಳಿ ಗಿರಿಣಿ ಅಂಗಡಿಯನ್ನು ಪ್ರಾರಂಭ ಮಾಡುತ್ತಾರೆ.ಹೀಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಧೀರೂಬಾಯಿ ಅಂಬಾನಿ ಅವರು ಇಂಧನ,ಏರ್ ಲೈನ್ಸ್,ನೆಟ್ ವರ್ಕ್,ರಿಟೇಲ್ ಅಂತಹ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜಗತ್ತಿನಾದ್ಯಂತ ಅಪಾರ ಜನಪ್ರಿಯತೆ ಗಳಿಸುತ್ತಾರೆ.ಇಷ್ಟ ಆದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ.

Leave a Reply

%d bloggers like this: