ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಮತ್ತೊಬ್ಬ ಕಿರುತೆರೆ ನಟಿ

ಕನ್ಯಾಕುಮಾರಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅಪಾರ ಜನ ಮೆಚ್ಚುಗೆ ಪಡೆದಿರುವ ನಟಿ ಇದೀಗ ಸದ್ದಿಲ್ಲದೇ ಸಪ್ತಪದಿ ತುಳಿಯುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಮದುವೆಯ ಸೀಸನ್ ನಲ್ಲಿ ಎಲ್ಲಾ ಕಡೆ ಮದುವೆಗಳು ಅದ್ದೂರಿಯಾಗಿ ನಡೆಯುತ್ತಿವೆ. ಅದರಂತೆ ಕಿರುತೆರೆ ಮತ್ತು ಚಂದನವನದ ಅನೇಕ ನಟ ನಟಿಯರು ಸಿಂಗಲ್ ಲೈಫ್ ನಿಂದ ಮ್ಯಾರೇಜ್ ಲೈಫ್ ಕಡೆ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ಕನ್ನಡ ಕಿರುತೆರೆಯ ಸುಪ್ರಸಿದ್ದ ನಟ ನಟಿಯರು ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ‌. ಅವರ ಸಾಲಿಗೆ ಇದೀಗ ನಟಿ ಸ್ವಾತಿ ಸಹ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಹೌದು ನಟಿ ಸ್ವಾತಿ ಅವರು ಜನಪ್ರಿಯ ಧಾರಾವಾಹಿಗಳಾದ ಶುಭವಿವಾಹ, ಪುಟ್ಟಗೌರಿ ಮದುವೆ, ಗಂಗಾ, ರಂಗನಾಯಕಿ ಅಂತಹ ಅನೇಕ ಧಾರಾವಾಹಿಗಳಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವುದರ ಮೂಲಕ ನಾಡಿನ ಮನೆ ಮನಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿ ಗುರುತಿಸಿಕೊಂಡಿದ್ದಾರೆ. ನಟಿ ಸ್ವಾತಿ ಅವರು ಕೇವಲ ಕಿರುತೆರೆ ಧಾರಾವಾಹಿ ಮಾತ್ರ ಅಲ್ಲದೆ ದಂಡುಪಾಳ್ಯ, ವಾರಸ್ದಾರ, ಬಿಡಲಾರೆ ನಿನ್ನ, ಉಡ ಅಂತಹ ಒಂದಷ್ಟು ಪ್ರಯೋಗಾತ್ಮಕ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಬೆಳ್ಳಿಪರದೆಯಲ್ಲಿಯೂ ಸಹ ಗಮನ ಸೆಳೆದಿದ್ದಾರೆ.

ಸ್ವಾತಿ ಅವರು ಬಣ್ಣದ ಲೋಕಕ್ಕೆ ಆಕಸ್ಮಿಕವಾಗಿ ಎಂಟ್ರಿ ಆದವರು. ಜ್ಯೂವೆಲ್ಲರಿ ಡಿಸೈನ್ ನಲ್ಲಿ ಡಿಪ್ಲೋಮಾ ಪದವಿ ಪಡೆದು ಐಟಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಅಭಿನಯದ ಮುಖಾಂತರ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರೋ ಸ್ವಾತಿ ಅವರು ಈಗ ಸುದ್ದಿಯಾಗಿದ್ದಾರೆ. ಅದು ಕೂಡ ತಾವು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಮೂಲಕ ಅನ್ನೋದು ವಿಶೇಷ. ಹೌದು ಮೈಸೂರಿನ ನಾಗಾರ್ಜುನ ರವಿ ಎಂಬುವವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಈ ಇಬ್ಬರು ಜೋಡಿಗಳ ಮುದುವೆಗೆ ಅವರ ಕುಟುಂಬ ಬಂಧು ವರ್ಗದವರು, ಹಿತೈಷಿಗಳು ಸೇರಿದಂತೆ ಕಲಾವಿದರಾದ ನಂದಿನಿ, ಅನಿಕಾ ಸಿಂಧ್ಯ, ಅಭಿಷೇಕ್ ದಾಸ್ ಸೇರಿದಂತೆ ಅನೇಕರು ಭಾಗವಹಿಸಿ ನವ ಜೋಡಿಗಳಿಗೆ ಶುಭಹಾರೈಸಿದ್ದಾರೆ.

Leave a Reply

%d bloggers like this: