ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಬಿಗ್ ಬಾಸ್ ಶೋನ ವಿಜೇತ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಭಾಗವಹಿಸಿ ಜಯಶೀಲರಾಗಿದ್ದ ಮಾರ್ಡನ್ ರೈತ ಕಮ್ ನಟ ಶಶಿಕುಮಾರ್ ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದ ಚಿಂತಾಮಣಿಯವರಾದ ಶಶಿ ಕುಮಾರ್ ಎಂಎಸ್ಸಿ ಕೃಷಿ ಪದವಿ ಪಡೆದು ಆಧುನಿಕ ಕೃಷಿ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡು ಕೃಷಿ ಮಾಡುವ ಮೂಲಕ ಮಾರ್ಡನ್ ರೈತ ಎನಿಸಿಕೊಂಡಿದ್ದಾರೆ. ಈ ಮಾರ್ಡನ್ ರೈತ ಎಂಬ ಲೇಬಲ್ ಹಾಕಿಕೊಂಡೇ ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿ ಭಾಗವಹಿಸಿ ಬಾಗ್ ಬಾಸ್ ಟ್ರೋಫಿಯನ್ನ ಕೂಡ ಗೆದ್ದು ಬಿಟ್ಟರು. ನಾಡಿನಾದ್ಯಂತ ಮನೆ ಮಾತಾದ ಶಶಿ ಕುಮಾರ್ ಸಿನಿಮಾದಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿಚ್ಚ ಸುದೀಪ್ ಅವರ ಬಗ್ಗೆ ನಕರಾತ್ಮಕವಾಗಿ ಮಾತನಾಡಿದರು ಎಂಬುದರ ಮೂಲಕ ಕೊಂಚ ವಿವಾದಕ್ಕೂ ಕೂಡ ಶಶಿ ಕುಮಾರ್ ಸಿಲುಕಿಕೊಂಡಿದ್ದರು. ಇನ್ನು ಇದೀಗ ಮೆಹಬೂಬಾ ಎಂಬ ಸಿನಿಮಾದಲ್ಲಿ ಶಶಿ ಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಅನೂಪ್ ಆಂಟೋನಿ ನಿರ್ದೇಶನ ಮಾಡಿದ್ದು, ಇದೇ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.

ಇನ್ನು ಇದೆಲ್ಲದರ ನಡುವೆ ಶಶಿ ಕುಮಾರ್ ಅವರು ತಮ್ಮದೇ ಒಂದಷ್ಟು ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಇತರೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಇದೆಲ್ಲದರ ನಡುವೆ ಶಶಿ ಕುಮಾರ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಶಶಿ ಕುಮಾರ್ ಮದುವೆ ಆಗುತ್ತಿರುವ ಹುಡುಗಿ ಸಿನಿಮಾ ಸಂಬಂಧಪಟ್ಟವರು ಎಂದು ಹೇಳಲಾಗುತ್ತಿತ್ತು. ಇದಕ್ಕೆ ಉತ್ತರವಾಗಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ವೊಂದನ್ನ ನೀಡಿದ್ದಾರೆ. ನಟ ಕಮ್ ಮಾರ್ಡನ್ ರೈತ ಶಶಿ ಕುಮಾರ್ ಅವರು ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಹೌದು ದೊಡ್ಡ ಬಳ್ಳಾಪುರದ ಸ್ವಾತಿ ಎಂಬುವರೊಟ್ಟಿಗೆ ಶಶಿ ಕುಮಾರ್ ಅವರು ಅದ್ದೂರಿಯಾಗಿ ಇದೇ ಆಗಸ್ಟ್ 7ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಆಗಸ್ಟ್ 6ರಂದು ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಶಶಿ ಕುಮಾರ್ ಅವರ ಆಪ್ತ ಬಳಗ ಮತ್ತು ಕುಟುಂಬಸ್ಥರು ಸಾಕ್ಷಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಶಶಿ ಕುಮಾರ್ ಅವರು ತಮ್ಮ ಮದುವೆಯ ಒಂದಷ್ಟು ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಇದೀಗ ವೈರಲ್ ಆಗಿದ್ದಾವೆ.

Leave a Reply

%d bloggers like this: