ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಕನ್ನಡದ ಮತ್ತೊಂದು ಕಿರುತೆರೆ ಜೋಡಿ

ಕನ್ನಡ ಕಿರುತೆರೆಯ ಮತ್ತೊಬ್ಬ ಸುಪ್ರಸಿದ್ದ ನಟ ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗುತ್ತಿದ್ದಾರೆ. ಇವರು ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆ ನಡೆದ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನಾನು ಯಾವ ಹುಡುಗಿಯನ್ನ ಲವ್ ಮಾಡ್ತಿಲ್ಲ. ನನಗೆ ಅದರ ಮೇಲೆ ಆಸಕ್ತಿ ಕೂಡಾ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಲವ್ ಕಮ್ ಅರೆಂಜ್ ಮ್ಯಾರೇಜ್ ಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್ ಎಕ್ಸೈಟ್ ಆಗೋವಂತೆ ಮಾಡಿದೆ. ಹೌದು ಕನ್ನಡ ಕಿರುತೆರೆಯ ಸುಪ್ರಸಿದ್ದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಸತ್ಯ ಧಾರಾವಾಹಿಯಲ್ಲಿ ಅಮುಲ್ ಬೇಬಿ ಹಾಗೇ ಇರೋ ಕಾರ್ತಿಕ್ ಎಂಬ ಪಾತ್ರದ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಂದ ‌ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ಅಂದಹಾಗೇ ಕಾರ್ತಿಕ್ ಪಾತ್ರಧಾರಿ ನಟ ಸಾಗರ್ ಬಿಳಿಗೌಡ ಅವರು ಸದ್ಯಕ್ಕೆ ಸ್ಮಾಲ್ ಸ್ಕ್ರೀನ್ ನಲ್ಲಿ ಸಖತ್ ಶೈನ್ ಆಗ್ತಿರೋ ನಟ. ಈಗಾಗಲೇ ಕಿನ್ನರಿ, ಮನಸಾರೆ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಸದ್ಯಕ್ಕೆ ಸತ್ಯ ಧಾರಾವಾಹಿಯಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಗರ್ ಬಿಳಿಗೌಡ ಅವರು ಲಂಡನ್ ನಲ್ಲಿ ಎಂಬಿಎ ಅಧ್ಯಾಯನ ಮಾಡಿ ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಕೂಡ ಮುಗಿಸಿಕೊಂಡಿದ್ದಾರೆ‌. ಏನೇ ಓದಿದ್ರೂ ಸಾಗರ್ ಅವರಿಗೆ ಸೆಳೆದದ್ದು ಮಾತ್ರ ಬಣ್ಣದ ಪ್ರಪಂಚ. ಹಾಗಾಗಿ ಕಿರುತೆರೆಗೆ ಹೆಜ್ಜೆ ಇಟ್ಟು ಹೆಸರೂ ಕೂಡ ಮಾಡಿ ಇದೀಗ ಖ್ಯಾತ ನಟಿಯನ್ನೇ ಮದುವೆ ಆಗಲು ಹೊರಟಿದ್ದಾರೆ. ಸಾಗರ್ ಬಿಳಿಗೌಡ ಅವರನ್ನ ಕೈ ಹಿಡಿಯುತ್ತಿರೋ ಆ ಅದೃಷ್ಟವಂತೆ ಬೇರಾರು ಅಲ್ಲ‌. ಅವರೇ ನಟಿ ಸಿರಿರಾಜು.

ಸಿರಿರಾಜು ಅವರು ಸಹ ಕಿರುತೆರೆ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಅವರ ಎಫ್ಐಆರ್ ಸಿಕ್ಸ್ ಟು ಸಿಕ್ಸ್ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಬಣ್ಣದ ಲೋಕವೇ ಹಾಗೇ ಯಾರನ್ನ ಯಾವಾಗ ಪರಿಚಯಿಸಿ ಸ್ನೇಹ ಪ್ರೀತಿ ಅಂತ ಒಟ್ಟುಗೂಡಿಸುತ್ತೋ ಗೊತ್ತಾಗಲ್ಲ. ಈಗ ನಟ ಸಾಗರ್ ಬಿಳಿಗೌಡ ನಟಿ ಸಿರಿರಾಜು ಅವರೊಟ್ಟಿಗೆ ಪ್ರೀತಿ ಪ್ರೇಮ ಅಂತ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ಎಲ್ಲಾ ರೀತಿಯ ಸಿದ್ದತೆ ನಡೆಸುತ್ತಿದ್ದಾರೆ‌. ಸಾಗರ್ ಬಿಳಿಗೌಡ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಿರಿರಾಜು ಅವರೊಟ್ಟಿಗೆ ಇರೋ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅವರ ಅಭಿಮಾನಿಗಳು ಅಚ್ಚರಿ ಜೊತೆಗೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: