ಡಾಲಿ ಧನಂಜಯ ಅವರ ಬಹು ನಿರೀಕ್ಷಿತ ಹೆಡ್ ಬುಷ್ ಚಿತ್ರ ಬಿಡುಗಡೆ, ಚಿತ್ರ ಹೇಗಿದೆ ಗೊತ್ತಾ

ಹೆಡ್ ಬುಷ್ ಸಿನಿಮಾದ ಮೂಲಕ ಮತ್ತೇ ಫೀಲ್ಡ್ ಗಿಳಿದ ಲೂಸ್ ಮಾದ ಯೋಗಿ! ಇಂದು ಅಂದರೆ ಅಕ್ಟೋಬರ್ 21 ಶುಕ್ರವಾರದಂದು ರಾಜ್ಯಾದ್ಯಂತ ಡಾಲಿ ಧನಂಜಯ್ ಮತ್ತು ಲೂಸ್ ಮಾದ ಯೋಗಿ ಮುಖ್ಯಭೂಮಿಕೆಯ ಹೆಡ್-ಬುಷ್ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ಡಾಲಿ ಧನಂಜಯ್ ಅಭಿಮಾನಿಗಳು ಮತ್ತು ಲೂಸ್ ಮಾದ ಯೋಗಿ ಅಭಿಮಾನಿಗಳಿಗೆ ಆಕ್ಷನ್ ಸಿನಿಮಾ ಪ್ರಿಯರಿಗೆ ಹೆಡ್-ಬುಷ್ ಸಿನಿಮಾ ಮಟನ್ ಊಟದಂತೆ ಮಸ್ತ್ ಮನರಂಜನೆ ನೀಡುತ್ತದೆ ಎಂದು ಹೇಳಬಹುದು. ಹೆಡ್ ಬುಷ್ ಸಿನಿಮಾ ಒಂದು ಭೂಗತ ಲೋಕದಲ್ಲಿ ಮೆರೆದಾಡಿದ್ದ ಜಯರಾಜ್ ಜೀವಾನಾಧಾರಿತ ಕಥೆಯನ್ನ ಹೊಂದಿದೆ. ಜಯರಾಜ್ ಪಾತ್ರದಲ್ಲಿ ನಟಿಸಿರುವ ನಟ ರಾಕ್ಷಸ ಡಾಲಿ ಧನಂಜಯ್ ಅವರ ನಟನೆಗೆ ಅಭಿಮಾನಿಗಳು ಫಿಧಾ ಆಗ್ತಾರೆ.

ಅದರ ಜೊತೆಗೆ ಜಯರಾಜ್ ಸ್ನೇಹಿತ ಗಂಗಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲೂಸ್ ಮಾದ ಯೋಗಿ ಈ ಸಿನಿಮಾದ ಮೂಲಕ ತುಂಬಾ ವರ್ಷಗಳ ನಂತರ ಬ್ರೇಕ್ ಪಡೆಯಲಿದ್ದಾರೆ ಅಂತಾನೇ ಹೇಳ್ಬೋದು. ಲೂಸ್ ಮಾದ ಯೋಗಿ ಗಂಗಾ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಇಷ್ಟ ಆಗ್ತಾರೆ. ಸಿನಿಮಾ 70ರ ದಶಕದಲ್ಲಿ ಇಂದಿರಾಗಾಂಧಿ ಬ್ರಿಗೇಡ್ ಆರಂಭ ಮಾಡಲು ಹೊರಟ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಆಲೋಚನೆಗೆ ದಾರಿ ಆಗುವ ಅವರ ಅಳಿಯ ನಟರಾಜ್ ಭೂಗತ ಲೋಕದಲ್ಲಿದ್ದ ಜಯರಾಜ್ ಗೆ ತಮ್ಮ ಮಾವ ದೇವರಾಜ್ ಅರಸ್ ಅವರನ್ನ ಪರಿಚಯಿಸುತ್ತಾನೆ. ತದ ನಂತರ ನಟರಾಜ್ ಆಶ್ರಯದಲ್ಲಿ ಬೆಂಗ್ಳೂರ್ ಸಿಟಿನಾ ಆಳುವ ಜಯರಾಜ್ ಯಾವ ಮಟ್ಟಿಗೆ ಭೂಗತಲೊಕದ ದೊರೆಯಾಗಿ ಮೆರೆಯುತ್ತಾನೆ ಅನ್ನೋದನ್ನ ಹೆಡ್-ಬುಷ್ ಸಿನಿಮಾದಲ್ಲಿ ನೋಡಬಹುದು. ಅಂದಿನ ಸಿಎಂ ಆಗಿದ್ದ ದೇವರಾಜ್ ಅರಸ್ ಪಾತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ಉತ್ತಮವಾಗಿ ನಟಿಸಿದ್ದಾರೆ.

ಜಯರಾಜ್ ಹೆಂಡತಿಯಾಗಿ ಪಾಯಲ್ ರಜಪೂತ್ ನಟಿಸಿದ್ದು, ಸ್ನೇಹಿತರಾಗಿ ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ, ಸ್ಯಾಮ್ಸನ್ ಪಾತ್ರದಲ್ಲಿ ಬಾಲು ನಾಗೇಂದ್ರ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನು ಕೊತ್ವಾಲ್ ರಾಮಚಂದ್ರ ಪಾತ್ರದಲ್ಲಿ ವಸಿಷ್ಟ ಸಿಂಹ ಸಖತ್ ಆಗಿ ಮಿಂಚಿದ್ದು, ರಘು ಮುಖರ್ಜಿ ನಟರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಮತ್ತು ಶೃತಿ ಹರಿಹರನ್ ಅವರ ಪಾತ್ರಗಳು ಕೂಡ ಗಮನ ಸೆಳೆಯುತ್ತದೆ. ಒಟ್ಟಾರೆಯಾಗಿ ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳು ಪುಸ್ತಕವನ್ನಾಧಾರಿಸಿದ ಈ ಹೆಡ್ ಬುಷ್ ಸಿನಿಮಾಗೆ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಶೂನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಸುನೋಜ್ ವೇಲಾಯುಧನ್ ಛಾಯಾಗ್ರಹಣ ಹೆಡ್ ಬುಷ್ ಸಿನಿಮಾಗೆ ಮತ್ತೊಂದು ಪ್ಲಸ್ ಪಾಯಿಂಟ್ ಅಂತಾನೇ ಹೇಳ್ಬೋದಾಗಿದೆ. ಡಾಲಿ ಧನಂಜಯ್ ಬಂಡವಾಳ ಹೂಡಿ ನಟಿಸಿರುವ ಎರಡನೇ ಸಿನಿಮಾವಾಗಿ ಈ ಹೆಡ್ ಬುಷ್ ಸಿನಿಮಾ ಮೂಡಿ ಬಂದಿದ್ದು, ಮಾಸ್ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

Leave a Reply

%d bloggers like this: