ಡಾಲಿ ಧನಂಜಯ ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ಹೊಸ ನಟಿ

ಸ್ಯಾಂಡಲ್ ವುಡ್ ನಟ ರಾಕ್ಷಸ ಡಾಲಿ ಧನಂಜಯ್ ಅವರ 26ನೇ ಸಿನಿಮಾಗೆ ಹೀರೋಯಿನ್ ಸಿಕ್ಬಿಟ್ರು. ಯಾರ್ ಅಂತ ಗೊತ್ತಾ. ಅದರ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ಕನ್ನಡದಲ್ಲಿ ಸದ್ಯದ ಮಟ್ಟಿಗೆ ಸಖತ್ ಬಿಝೆಯೆಸ್ಟ್ ಬೇಡಿಕೆಯ ನಟ ಅಂದರೆ ಅದು ಡಾಲಿ ಧನಂಜಯ್. ಬಡವ ರಾಸ್ಕಲ್ ಆದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಅವರ ನಿರ್ಮಾಣ ಸಂಸ್ಥೆಯಲ್ಲಿಯೇ ತಯಾರಾಗಿರೋ ಹೆಡ್ ಬುಷ್ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಧನಂಜಯ್ ಅವರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಸಿನಿಮಾಗೆ ತಮಿಳಿನ ಖ್ಯಾತ ನಟಿ ಎಂಟ್ರಿ ಆಗಿದ್ದಾರೆ.

ಹೌದು ಇನ್ನೂ ಹೆಸರಿಡದ ಧನಂಜಯ್ ಅವರ ಹೊಸ ಸಿನಿಮಾಗೆ ತಮಿಳಿನ ನಟಿ ಪ್ರಿಯಾ ಭವಾನಿ ಶಂಕರ್ ಆಯ್ಕೆ ಆಗಿದ್ದಾರೆ. ನಟಿ ಭವಾನಿ ಶಂಕರ್ ಅವರು ಈಗಾಗಲೇ ಓಹ್ ಮನಪೆಣ್ಣೆ, ಬ್ಲಡ್ ಮನಿ, ತಿರುಚಿತ್ರಬಾಲಂ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಭವಾನಿ ಶಂಕರ್ ತೆಲುಗಿನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಧನಂಜಯ್ ಅವರ ಜೊತೆ ಟಾಲಿವುಡ್ ಸ್ಟಾರ್ ನಟ ಸತ್ಯದೇವ್ ಅವರು ಕೂಡ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರ ಕುತೂಹಲ ಉಂಟು ಮಾಡಿದೆ. ಈ ಚಿತ್ರಕ್ಕೆ ಇನ್ನು ಕೂಡ ಶೀರ್ಷಿಕೆ ಅಂತಿಮವಾಗಿಲ್ಲ. ಆಗಲೇ ಈ ಚಿತ್ರದ ಸೌತ್ ಸಿನಿರಂಗದಲ್ಲಿ ಸೌಂಡ್ ಮಾಡುತ್ತಿದೆ.

ಅಂದಹಾಗೇ ಡಾಲಿ ಧನಂಜಯ್ ಮತ್ತು ಸತ್ಯದೇವ್ ಕಾಂಬಿನೇಶನ್ ನಲ್ಲಿ ಈ ಚಿತ್ರವನ್ನ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಈಶ್ವರ್ ಕಾರ್ತಿಕ್ ಅವರು ತೆಲುಗಿನಲ್ಲಿ ಪೆಂಗ್ವಿನ್ ಅನ್ನೋ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರಡಿಯಲ್ಲಿ ಬಾಲಸುಂದರಂ ಮತ್ತು ದಿನೇಶ್ ಸುಂದರಂ ಅವರು ಈ ಒಂದು ಹೊಸ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಕ್ರೈಮ್ ಆಕ್ಷನ್ ಜಾನರ್ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಚರಣ್ ರಾಜ್ ಅವರ ರಾಗ ಸಂಯೋಜನೆ ಇದ್ದು, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ಸುಬ್ಬು ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಡಾಲಿ ಧನಂಜಯ್ ಅವರ ಈ ಹೊಸ ಸಿನಿಮಾ ತಂಡ ಚಿತ್ರೀಕರಣದಲ್ಲಿಯೂ ಕೂಡ ತೊಡಗಿಕೊಂಡಿದೆ.

Leave a Reply

%d bloggers like this: