ಡಾಲಿ ಧನಂಜಯ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತದೆ ಈ ಸುದ್ದಿ

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಟಗರು ಚಿತ್ರದ ನಂತರ ತಮ್ಮ ಸಿನಿ ವೃತ್ತಿ ಬದುಕಿನಲ್ಲಿ ಹೊಸದೊಂದು ತಿರುವನ್ನ ಪಡೆದುಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ ವುಡ್ ಸನ್ಶೇನಲ್ ಬೇಡಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಬಡವ ರಾಸ್ಕಲ್ ಚಿತ್ರದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದ ಧನಂಜಯ್ ಇದೀಗ ಒಂದಷ್ಟು ಚಿತ್ರಗಳಲ್ಲಿ ನಾಯಕ ನಟರಾಗಿ ಮಿಂಚುತ್ತಿದ್ದಾರೆ. ಅವುಗಳ ಪೈಕಿ ಮಾನ್ಸುನ್ ರಾಗ ಸಿನಿಮಾ ಕೂಡ ಒಂದು. ಇದೇ ಮೊಟ್ಟ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರೊಟ್ಟಿಗೆ ಧನಂಜಯ್ ನಾಯಕ ನಟರಾಗಿ ನಟಿಸಿದ್ದಾರೆ. ಈ ಮಾನ್ಸುನ್ ರಾಗ ಸಿನಿಮಾದ ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಕನ್ನಡ ಸಿನಿ ಪ್ರೇಕ್ಷಕರನ್ನ ಮೋಡಿ ಮಾಡಿದೆ. ಮಾನ್ಸುನ್ ರಾಗ ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಪಾರ ವೀಕ್ಷಣೆ ಪಡೆದು ಜನ ಮೆಚ್ಚುಗೆ ಪಡೆದುಕೊಂಡಿದೆ.

ಟ್ರೇಲರ್ ನಲ್ಲಿ ಸಿನಿಮಾದ ಮೇಕಿಂಗ್, ಮಳೆಯಲ್ಲಿ ನಡೆಯುವ ಫೈಟ್ಸ್, ಬ್ಯಾಗ್ರೌಂಡ್ ಮ್ಯೂಸಿಕ್, ಕಣ್ಮನ ಸೆಳೆಯುವ ದೃಶ್ಯ ಸನ್ನಿವೇಶಗಳು ಇದೆಲ್ಲದರದ ಜೊತೆಗೆ ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಿ ಅಭಿನಯಿಸಿರುವ ನಟಿ ರಚಿತಾ ರಾಮ್ ಮತ್ತು ಡಾಲಿ ಧನಂಜಯ್ ಅವರ ಮನೋಜ್ಞ ಅಭಿನಯ ಕಂಡು ಟ್ರೇಲರ್ ನಲ್ಲಿಯೇ ಚಿತ್ರವನ್ನ ನೋಡಲೇಬೇಕು ಎನಿಸುವಂತಹ ಕುತೂಹಲ ಮೂಡಿಸಿ ಮಾನ್ಸುನ್ ರಾಗ ಚಿತ್ರದ ಟ್ರೇಲರ್ ಕನ್ನಡ ಸಿನಿ ಪ್ರೇಕ್ಷಕರನ್ನ ಮೋಡಿ ಮಾಡಿತ್ತು. ಅದರಂತೆ ಈ ಚಿತ್ರ ಇದೇ ಆಗಸ್ಟ್ ತಿಂಗಳ 19ರಂದು ಗ್ರ್ಯಾಂಡ್ ಆಗಿ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಇದೀಗ ಇದೇ ಮಾನ್ಸುನ್ ರಾಗ ಸಿನಿಮಾತಂಡ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಚಿತ್ರದ ಕೆಲವು ತಾಂತ್ರಿಕ ಕೆಲಸ ಕಾರ್ಯಗಳು ಬಾಕಿ ಉಳಿದುಕೊಂಡಿದೆ ಎಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಮಾನ್ಸುನ್ ರಾಗ ಚಿತ್ರದಲ್ಲಿ ಅನೋಮಾರ್ಪಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆಯಂತೆ. ಈ ಅನೋಮಾರ್ಪಿಕ್ ತಂತ್ರಜ್ಞಾನವನ್ನ ಚಿತ್ರದಲ್ಲಿ ಅಳವಡಿಸಿಕೊಳ್ಳುವುದರಿಂದ ಸಿನಿಮಾ ಪ್ರೇಕ್ಷಕರಿಗೆ 3ಡಿಯಲ್ಲಿ ನೋಡಿದಂತೆ ಅನುಭವ ಆಗುತ್ತದೆಯಂತೆ. ಈ ಹಿಂದೆ ರಾಜಮೌಳಿ ಅವರ ಥ್ರಿಬರ್ ಆರ್ ಚಿತ್ರದಲ್ಲಿ ಈ ಅನೋಮಾರ್ಪಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಅದೇ ರೀತಿಯಾಗಿ ಮಾನ್ಸುನ್ ರಾಗ ಚಿತ್ರ ಕೂಡ ಉತ್ತಮ ಗುಣಮಟ್ಟ ನೀಡುವುದಕ್ಕಾಗಿ ಅನೋಮಾರ್ಪಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅದಲ್ಲದೇ ಈ ಮಾನ್ಸುನ್ ರಾಗ ಸಿನಿಮಾದ ರೀ ರೆಕಾರ್ಡಿಂಗ್ ಕೆಲಸಗಳು ಕೂಡ ಬಾಕಿ ಉಳಿದಿರುವುದರಿಂದ ಚಿತ್ರವನ್ನು ಆಗಸ್ಟ್19ಕ್ಕೆ ಬಿಡುಗಡೆ ಮಾಡುವುದಕ್ಕೆ ಕಷ್ಟ ಸಾಧ್ಯ ಎಂಬುದನ್ನ ಅರಿತು ಚಿತ್ರತಂಡ ರಿಲೀಸ್ ಡೇಟ್ ಅನ್ನು ಪೋಸ್ಟ್ ಪೋನ್ ಮಾಡಿದೆ.

ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಮಾನ್ಸುನ್ ಹವಾಮಾನ ಬದಲಾಗಿದೆ. ಅದೇ ರೀತಿಯಾಗಿ ಮಾನ್ಸುನ್ ರಾಗ ಚಿತ್ರದ ಬಿಡುಗಡೆಯ ದಿನಾಂಕ ಕೂಡ ರಿಲೀಸ್ ಆಗಿದೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇವೆ ಎಂದು ಮಾಹಿತಿ ನೀಡುತ್ತಿದ್ದಾರೆ. ಇನ್ನು ಈ ಮಾನ್ಸುನ್ ರಾಗ ಸಿನಿಮಾಕ್ಕೆ ಎಸ್.ರವೀಂದ್ರ ನಾಥ್ ಆಕ್ಷನ್ ಕಟ್ ಹೇಳಿದ್ದು, ನಿರ್ಮಾಪಕ ವಿಖ್ಯಾತ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ತಾರಾಗಣದಲ್ಲಿ ಹಿರಿಯ ನಟಿ ಸುಹಾಸಿನಿ, ಅಚ್ಯುತ್ ಕುಮಾರ್, ಯಶಾ ಶಿವಕುಮಾರ್ ಸೇರಿದಂತೆ ಇನ್ನಿತರ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಮಾನ್ಸುನ್ ರಾಗ ಚಿತ್ರವನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲಾದ ಕಾರಣ ಡಾಲಿ ಧನಂಜಯ್ ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.

Leave a Reply

%d bloggers like this: