ಡಿ ಕೆ ಶಿವ ಕುಮಾರ್ ಅವರ ಐಷಾರಾಮಿ ಮನೆ, ಕಾಲೇಜು, ಕಾಂಪ್ಲೆಕ್ಸ್ ಹೇಗಿದೆ ಗೊತ್ತಾ? ಮೊದಲ ಸಲ ನೋಡಿ

ಕರ್ನಾಟಕ ರಾಜ್ಯ ರಾಜಕಾರಣ ಟ್ರಬಲ್ ಶೂಟರ್, ಕನಕಪುರ ಬಂಡೆ ಎಂದೇ ಕರೆಸಿಕೊಳ್ಳುವ ಕನಕಪುರ ಶಾಸಕ ಮತ್ತು ಕೆ.ಪಿ.ಸಿ.ಸಿ.ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರ ಆಸ್ತಿ ಮೌಲ್ಯ ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ರಾಜಕೀಯ, ಸಿನಿಮಾ ಥಿಯೇಟರ್, ಕೃಷಿ, ಉದ್ಯಮ ಇತ್ತೀಚೆಗೆ ಸೂಪರ್ ಮಾರ್ಕೆಟ್ ಉದ್ಯಮ ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ತೊಡಗಿಸಿಕೊಂಡು ವರ್ಷದಿಂದ ವರ್ಷಕ್ಕೆ ತನ್ನ ಆದಾಯದ ಮೂಲವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಬೆಳೆದಿದ್ದಾರೆ. ಸ್ವತಃ ಅವರೇ ಹೇಳಿಕೊ ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಡಿ.ಕೆ.ಶಿವಕುಮಾರ್ ಅವರು ಕಾಲೇಜು ದಿನಗಳಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿದ್ದರು. ಇದರ ಜೊತೆಗೆ ಅಪರಾಧ ಜಗತ್ತಿನಲ್ಲಿ ನಟೋರಿಯಸ್ ಆಗಿದ್ದವರ ಜೊತೆ ಉತ್ತಮ ಸಂಪರ್ಕ ಹೊಂದುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ಡಿ.ಕೆ.ಶಿವಕುಮಾರ್ ಹಂತ ಹಂತವಾಗಿ ಪ್ರಗತಿ ಕಾಣುತ್ತಾ ಬರುತ್ತಾರೆ.

ಇನ್ನು ಡಿ.ಕೆ‌. ಶಿವಕುಮಾರ್ ಅವರ ಸೋದರ ಡಿ.ಕೆ. ಸುರೇಶ್ ಕೂಡ ಸಂಸದರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಅವರ ಬಗ್ಗೆ ತಿಳಿಯುವುದಾದರೆ ಡಿ‌.ಕೆ.ಶಿ ಅವರು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ದೊಡ್ಡಾಲಳ್ಳಿ ಗ್ರಾಮದ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಗಳಿಗೆ 1962 ರಲ್ಲಿ ಮೇ 15 ರಂದು ಜನಿಸುತ್ತಾರೆ. ಇನ್ನು ಡಿ.ಕೆ.ಶಿವಕುಮಾರ್ ಅವರ ವಿಧ್ಯಾಭ್ಯಾಸವನ್ನು ತಿಳಿಯುವುದಾದರೆ ಬಿ.ಎ.ಮತ್ತು ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1993 ರಲ್ಲಿ ಉಷಾ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಡಿ.ಕೆ.ಶಿವಕುಮಾರ್ ಅವರು ಇದೀಗ ಮೂವರು ಮಕ್ಕಳೊಟ್ಟಿಗೆ ಸುಂದರ ಸಂಸಾರ ನಡೆಸುತ್ತಿದ್ದಾರೆ. ಐಶ್ವರ್ಯ, ಆಭರಣ ಎಂಬ ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಮತ್ತು ಆಕಾಶ್ ಎಂಬ ಪುತ್ರ ಇರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ಮೊದಲ ಪುತ್ರಿ ಐಶ್ವರ್ಯ ಅವರನ್ನು ಮಾಜಿ ಸಿ.ಎಂ.ಎಸ್.ಎಂ.ಕೃಷ್ಣ ಅವರ ಮೊಮ್ಮಗ ಕೆಫೆ ಕಾಫಿ ಡೇ ಮಾಲೀಕರಾದ ಸಿದ್ದಾರ್ಥ್ ಅವರ ಪುತ್ರ ಅಮಾರ್ಥ್ಯ ಅವರೊಟ್ಟಿಗೆ ಅದ್ದೂರಿಯಾಗಿ ಮದುವೆ ಮಾಡುತ್ತಾರೆ.

ಇನ್ನು ಇವರ ಮಗಳು ಐಶ್ವರ್ಯ ಅವರ ಹೆಸರಿನಲ್ಲಿ ಡಿ.ಕೆ.ಶಿ ಅವರು ನೂರಾರು ಕೋಟಿ ಆಸ್ತಿ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ತಾನೇ ಬೆಂಗಳೂರಿನ ರಾಜಾಜಿನಗರ ಬಳಿ ಬೃಹತ್ ಸೂಪರ್ ಮಾರ್ಕೆಟ್ ಅನ್ನು ಆರಂಭಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು 2018 ರ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ತಮ್ಮ ಬಳಿ 850 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದರು. ಅಂದರೆ ಇವರು ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿಯರ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಇವರ ಒಡೆತನದಲ್ಲಿ ಸಿನಿಮಾ ಮಂದಿರಗಳು, ಇಂಜಿನಿಯರಿಂಗ್ ಕಾಲೇಜುಗಳು, ಪ್ರತಿಷ್ಟಿತ ಅಪಾರ್ಟ್ ಮೆಂಟ್ ಗಳಿವೆ.

Leave a Reply

%d bloggers like this: