‘ಡಿ ಬಾಸ್’ ಅವರನ್ನು ಮದುವೆಯಾಗಬೇಕಿದ್ದ ರಕ್ಷಿತಾ ಪ್ರೇಮ್ ಅವರನ್ನು ಮದುವೆಯಾದ್ರು.. ಅಸಲಿ ನಿಜ ಏನು ಗೊತ್ತಾ?

ಚಂದನವನದ ಕ್ರೇಜಿ಼ ಕ್ವಿನ್ ರಕ್ಷಿತಾ ದರ್ಶನ್ ಮದುವೆ ಆಗದಿದ್ದದ್ದು ಯಾಕೆ ಗೊತ್ತಾ..! ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಜೋಡಿಗಳಿವೆ. ಅದೇ ರೀತಿಯಾಗಿ ಚಂದನವನದಲ್ಲಿ ಒಂದು ಜಮಾನದಲ್ಲಿ ಚಾಲೇಂಜಿಂಗ್ ಸ್ಟಾರ್ ದರ್ಶನ್ ಮತ್ತು ರಕ್ಷಿತಾ ಅವರದ್ದು ಕೂಡ ಭರ್ಜರಿ ಕ್ಯೂಟ್ ಜೊಡಿಯಾಗಿತ್ತು. ಈ ತಾರಾ ಜೋಡಿಗಳ ಸಿನಿಮಾ ಅಂದಾಕ್ಷಣ ಕನ್ನಡ ಸಿನಿ ಪ್ರೇಕ್ಷಕರು ಕೂಡ ಮುಗಿ ಬಿದ್ದು ಚಿತ್ರ ಮಂದಿರಗಳತ್ತ ಬರುತ್ತಿದ್ದರು. ಅಷ್ಟರ ಮಟ್ಟಿಗೆ ಈ ಜೋಡಿ ಮೋಡಿ ಮಾಡಿತ್ತು. ಚಾಲೇಂಜಿಂಗ್ ಸ್ಟಾರ್ ದರ್ಶನ್ ಮತ್ತು ಕ್ರೇಜಿ಼ ಕ್ವೀನ್ ರಕ್ಷಿತಾ ಇಬ್ಬರು ಕೂಡ ಕಲಾಸಿ ಪಾಳ್ಯ, ಮಂಡ್ಯ, ಅಯ್ಯ, ಸೇರಿದಂತೆ ಒಟ್ಟಿಗೆ ನಟಿಸಿದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು‌. ಇನ್ನೊಂದು ಸ್ವಾರಸ್ಯಕರ ವಿಚಾರ ಅಂದರೆ ಈ ಜೋಡಿ ಕೇವಲ ಬೆಳ್ಳಿ ತೆರೆ ಮೇಲೆ ಮಾತ್ರ ಅಲ್ಲ ನಿಜ ಜೀವನದಲ್ಲಿಯೂ ಕೂಡ ಜೋಡಿಯಾಗಬೇಕಾಗಿತ್ತಂತೆ‌. ಅದಕ್ಕೆ ಅವಕಾಶ ಕೂಡ ಒದಗಿ ಬಂದಿತ್ತಂತೆ‌. ಆದರೆ ಇದಕ್ಕೆ ನಟಿ ರಕ್ಷಿತಾ ಅವರೇ ಒಪ್ಪಲಿಲ್ಲವಂತೆ.

ಹೌದು ನಟ ದರ್ಶನ್ ಅವರು ನಾಯಕ ನಟರಾಗಿ ಮಿಂಚುವುದಕ್ಕಿಂತ ಮುಂಚೆ ಕ್ಯಾಮರಮ್ಯಾನ್ ಆಗಿ ರಕ್ಷಿತಾ ಅವರ ತಂದೆ ಗೌರಿಶಂಕರ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅಂದಿನ ಕಾಲದಲ್ಲಿ ರಕ್ಷಿತಾ ಅವರ ತಂದೆ ಗೌರಿ ಶಂಕರ್ ಬೇಡಿಕೆಯ ಪ್ರಸಿದ್ದ ಛಾಯಾಗ್ರಾಹಕರಾಗಿದ್ದರು. ಆ ಸಂಧರ್ಭದಲ್ಲಿ ದರ್ಶನ್ ಅವರು ಸಹ ಇವರ ಬಳಿ ಅಸಿಸ್ಟೆಂಟ್ ಆಗಿ ಇದ್ದ ಕಾರಣ ಗೌರಿಶಂಕರ್ ಅವರು ದರ್ಶನ್ ಅವರ ವ್ಯಕ್ತಿತ್ವ ಗುಣ ಚೆನ್ನಾಗಿ ಅರಿತಿದ್ದರು. ಹಾಗಾಗಿ ತನ್ನ ಮಗಳು ರಕ್ಷಿತಾಳನ್ನ ದರ್ಶನ್ ಗೆ ಕೊಟ್ಟು ಮದುವೆ ಮಾಡಬೇಕು ಎಂದು ಅಂದುಕೊಂಡಿದ್ದರಂತೆ. ಈ ವಿಚಾರವನ್ನು ಗೌರಿ ಶಂಕರ್ ಮಗಳು ರಕ್ಷಿತಾ ಅವರ ಬಳಿಯೂ ಕೂಡ ಹೇಳಿದ್ದರಂತೆ. ಆದರೆ ಆಗತಾನೇ ಅಪ್ಪು ಸಿನಿಮಾದಲ್ಲಿ ನಟಿಸಿದ್ದ ರಕ್ಷಿತಾ ಅವರಿಗೆ ಸಿನಿಮಾರಂಗದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬ ಕನಸಿದ್ದ ಕಾರಣ ರಕ್ಷಿತಾ ದರ್ಶನ್ ಅವರನ್ನ ಮದುವೆ ಆಗುವ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲವಂತೆ.

ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಅಪ್ಪು ಸಿನಿಮಾದಲ್ಲಿ ನಟಿಸಿದ ರಕ್ಷಿತಾ ಅವರು ತನ್ನ ಮೊದಲ ಚಿತ್ರದಲ್ಲೇ ಯಶಸ್ಸು ಕಾಣುತ್ತಾರೆ‌. ಅಪ್ಪು ಚಿತ್ರ ಸೂಪರ್ ಹಿಟ್ ಆಗಿದ್ದೇ ತಡ ರಕ್ಷಿತಾ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಹುಡುಕಿಕೊಂಡು ಬರುತ್ತವೆ. ಅಂತೆಯೇ ರಕ್ಷಿತಾ ಕನ್ನಡ ಮಾತ್ರ ಅಲ್ಲದೆ ತೆಲುಗಿನಲ್ಲಿಯೂ ಕೂಡ ನಟಿಸುತ್ತಾರೆ. ಕನ್ನಡದ ಬಹು ಬೇಡಿಕೆಯ ನಟಿಯಾಗಿ ಮಿಂಚುವ ರಕ್ಷಿತಾ ಅದೇ ಸಮಯದಲ್ಲಿ ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಅಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ ಪ್ರೇಮ್ ಅವರ ಪರಿಚಯವಾಗುತ್ತದೆ. ಈ ಪ್ರೇಮ್ ಅವರ ಪರಿಚಯ, ಗೆಳೆತನವಾಗಿ ಪ್ರೀತಿಗೆ ತಿರುಗಿ ಮದುವೆ ಕೂಡ ಆಗುತ್ತಾರೆ. ಇತ್ತ ನಟಿ ರಕ್ಷಿತಾ ಅವರು ಟಾಪ್ ಸ್ಟಾರ್ ನಟಿಯಾಗಿ ಮಿಂಚಿ, ಇದೀಗ ತನ್ನ ಮುದ್ದಾದ ಮಗನೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇತ್ತ ದರ್ಶನ್ ಕೂಡ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಭಾರಿ ಬೇಡಿಕೆಯ ಜನಪ್ರಿಯ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ.

Leave a Reply

%d bloggers like this: