ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಮನೆಗೆ ಮಹಾಲಕ್ಷ್ಮಿ ಆಗಮನ

ಹೌದು ಇಂಡಿಯನ್ ಪ್ರೀಮೀಯರ್ ಲೀಗ್ ಕ್ರಿಕೆಟಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿರುವ ರಾಬಿನ್ ಉತ್ತಪ್ಪ ಅವರು ಈಗಾಗಲೇ ಒಂದು ಗಂಡು ಮಗುವಿಗೆ ತಂದೆ ಆಗಿದ್ದಾರೆ. ಇದೀಗ ಎರಡನೇಯದಾಗಿ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ರಾಬಿನ್ ಉತ್ತಪ್ಪ ಅವರು 2006 ರಲ್ಲಿ ಮೊದಲನೇ ಬಾರಿಗೆ ಭಾರತದ ಪರ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಮೂಲಕ ಭಾರತೀಯ ಕ್ರಿಕೆಟ್ ಗೆ ಲಗ್ಗೆ ಇಟ್ಟರು. 2007 ರಲ್ಲಿ ಟಿಟ್ವೆಂಟಿ ವಿಶ್ವಕಪ್ ಗೆ ಎಂಟ್ರಿ ಕೊಟ್ಟ ರಾಬಿನ್ ಉತ್ತಪ್ಪ ಅವರು ಒಟ್ಟು ಭಾರತದ ಪರ 46 ಏಕದಿನ ಮತ್ತು 13 ಟಿಟ್ವೆಂಟಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ರಾಬಿನ್ ಉತ್ತಪ್ಪ ಅವರು 26ರ ಸರಾಸರಿಯಲ್ಲಿ ಒಟ್ಟು 934 ರನ್ ಗಳಿಸಿದ್ದು, ಟಿಟ್ವೆಂಟಿ ಪಂದ್ಯಗಳಲ್ಲಿ 249 ರನ್ ಕಲೆ ಹಾಕಿದ್ದಾರೆ.

ಭಾರತೀಯ ಕ್ರಿಕೆಟ್ ನಲ್ಲಿ ಹೆಸರು ಮಾಡಿರುವ ರಾಬಿನ್ ಉತ್ತಪ್ಪ ಅವರು ವೃತ್ತಿಪರ ಟೆನಿಸ್ ಆಟಗಾರ್ತಿ ಶೀತಲ್ ಅವರನ್ನ 2016 ರಲ್ಲಿ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಶೀತಲ್ ಅವರು ತಮ್ಮ ಒಂಭತ್ತನೇ ವಯಸ್ಸಿನಲ್ಲಿಯೇ ಟೆನಿಸ್ ಆಡಲು ಪ್ರಾರಂಭಿಸಿದರು. ಒಂಭತ್ತನೇ ವಯಸ್ಸಿನಲ್ಲಿ ಪ್ರಾರಂಭವಾಗಿ ಟೆನಿಸ್ ಕ್ರೀಡೆ ಅವರ ಮೂವತ್ಮೂರನೇ ವಯಸ್ಸಿನಲ್ಲಿ ಸ್ವಯಂ ಪ್ರೇರಿತವಾಗಿ ವಿದಾಯ ತಿಳಿಸಿದರು. ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರೀಯರಾಗಿರುವ ಶೀತಲ್ ಅವರು ಈಗಾಗಲೇ ಒಂದು ಗಂಡು ‌ಮಗುವಿಗೆ ತಾಯಿಯಾಗಿ ದ್ದಾರೆ. ಇದೀಗ ಮತ್ತೊಮ್ಮೆ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಎರಡನೇ ಬಾರಿಗೆ ತಾಯ್ತನ ಅನುಭವಿಸಿದ್ದಾರೆ. ಶೀತಲ್ ಅವರು ಕೆಲವು ತಿಂಗಳ ಹಿಂದೆ ಗರ್ಭಿಣಿಯಾಗಿದ್ದಾಗ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದರು.

ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇನ್ನು ರಾಬಿನ್ ಉತ್ತಪ್ಪ ಅವರು ಸದ್ಯಕ್ಕೆ ಕ್ರಿಕೆಟ್ ಯಿಂದ ಅಂತರ ಕಾಯ್ದುಕೊಂಡು ತಮ್ಮ ಕುಟುಂಬದೊಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಅದರಂತೆ ಇದೀಗ ತಾವು ಹೆಣ್ಣು ಮಗುವಿಗೆ ತಂದೆಯಾಗಿರುವ ಸಂತಸದ ಸುದ್ದಿಯನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಪತ್ನಿ ಶೀತಲ್ ಮತ್ತು ತಮ್ಮ ಮಗನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಉತ್ತಪ್ಪ ಅವರು ನಮ್ಮ ಜೀವನದಲ್ಲಿ ಪ್ರವೇಶ ಮಾಡಿದ ಬಾಲ ದೇವತೆಯನ್ನ ನಿಮಗೆ ಪರಿಚಯಿಸಲು ಸಂತಸವಾಗಿದೆ. ಈ ಮಗುವಿಗೆ ಟ್ರಿನಿಟಿ ಥಿಯಾ ಎಂದು ನಾಮಕರಣ ಮಾಡಿದ್ದೇವೆ ಎಂದು ಭಾವನಾತ್ಮಕ ನುಡಿಗಳನ್ನು ಬರೆದುಕೊಂಡಿದ್ದಾರೆ. ರಾಬಿನ್ ಉತ್ತಪ್ಪ ಅವರು ಹೆಣ್ಣು ಮಗುವಿಗೆ ತಂದೆಯಾದ ಹಿನ್ನೆಲೆ ಕ್ರಿಕೆಟ್ ಕ್ಷೇತ್ರದ ಗಣ್ಯರು ಮತ್ತು ಅವರ ಅಭಿಮಾನಿಗಳು, ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.

Leave a Reply

%d bloggers like this: