ಕ್ರಿಕೆಟ್ ಇಂದ ಚಿತ್ರರಂಗಕ್ಕೆ ಮತ್ತೊಬ್ಬ ಟೀಮ್ ಇಂಡಿಯಾ ಆಟಗಾರ

ಭಾರತ ತಂಡದ ಖ್ಯಾತ ಕ್ರಿಕೆಟಿಗ ಈಗ ಬಾಲಿವುಡ್ ಸಿನಿಮಾದಲ್ಲಿ ಸಖತ್ ಮಿಂಚಿಂಗ್! ಇತ್ತೀಚೆಗೆ ಭಾರತ ತಂಡದ ಕ್ರಿಕೆಟಿಗರು ಅದ್ಯಾಕೋ ಏನೋ ಈ ಸಿನಿಮಾ ನಟನೆ, ಜಾಹೀರಾತು ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲಿನಿಂದಾನೂ ಈ ಬಾಲಿವುಡ್ ಮತ್ತು ಕ್ರಿಕೆಟ್ ಲೋಕಕ್ಕೆ ಒಂದು ಬಿಟ್ಟಿರಲಾರದ ಸಂಬಂಧವಿದೆ. ಇನ್ನು ಈಗ ಸಿನಿಮಾದಲ್ಲಿ ನಟಿಸಿರೋ ಈ ಕ್ರಿಕೆಟಿಗ ಯಾರು, ಆ ಸಿನಿಮಾ ಯಾವುದು ಹೀಗೆ ಅದರ ಒಂದಷ್ಟು ಮಾಹಿತಿಗಳು ಇಲ್ಲಿವೆ. ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರೇ ಇದೀಗ ಹಿಂದಿ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿಯಲ್ಲಿ ನಾಯಕರಾಗಿ ಆಡುತ್ತಿದ್ದಾರೆ ಶಿಖರ್ ಧವನ್. ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಸೇರಿದಂತೆ ಹಾರ್ಧಿಕ್ ಪಾಂಡ್ಯ ತಂಡ ಈಗಾಗಲೇ ಆಸ್ಟ್ರೇಲಿಯಾದಲ್ಲಿದೆ.

ಶಿಖರ್ ಧವನ್ ಕ್ರಿಕೆಟ್ ನಲ್ಲಿ ಇದುವರೆಗೆ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್ ಗಳಿಸಿದ್ದಾರೆ. ಇವರ ಸರಾಸರಿ 40.61 ರಷ್ಟಿದೆ. ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಅವರು ಒಬ್ಬ ಆಲ್ ರೌಂಡರ್ ಆಗಿ ಗಮನ ಸೆಳೆದಿದ್ದಾರೆ ಅನ್ನಬಹುದು. ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿರುವ ಶಿಖರ್ ಧವನ್ ಇದೀಗ ಸತ್ರಂ ರಮಣಿ ಅವರು ನಿರ್ದೇಶನ ಮಾಡಿರುವ ಡಬಲ್ ಎಕ್ಸಲ್ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಈ ಡಬಲ್ ಎಕ್ಸಲ್ ಸಿನಿಮಾ ದಡೂತಿ ದೇಹವೊಂದಿರುವ ಇಬ್ಬರು ಮಹಿಳೆಯರ ಕಥೆಯಾಗಿದೆ. ತಮ್ಮ ಅತಿಯಾದ ದೇಹದ ತೂಕ ಅವರನ್ನ ಯಾವ ರೀತಿ ಭಾದಿಸುತ್ತದೆ, ಸಮಾಜ ಅವರನ್ನ ಹೇಗೆ ನೋಡುತ್ತದೆ, ಇದೆಲ್ಲದರ ನಡುವೆ ಆ ಇಬ್ಬರು ಮಹಿಳೆಯರು ತಮ್ಮ ಆಸೆ ಆಕಾಂಕ್ಷೆಗಳನ್ನ ಹೇಗೆ ಪೂರೈಸಿಕೊಳ್ತಾರೆ ಅನ್ನೋದನ್ನ ಈ ಡಬಲ್ ಎಕ್ಸ್ ಸಿನಿಮಾದಲ್ಲಿ ಕಾಣಬಹುದಾಗಿದೆ.

ಇನ್ನು ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಅವರು ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡಬಲ್ ಎಕ್ಸಲ್ ಸಿನಿಮಾದ ಪಾತ್ರಕ್ಕಾಗಿ ಈ ಇಬ್ಬರೂ ನಟಿಯರು ಕೂಡ ತಮ್ಮ ತೂಕವನ್ನ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಶಿಖರ್ ಧವನ್ ನಾಯಕ ನಟರಲ್ಲ. ವಿಶೇಷ ಅತಿಥಿ ಪಾತ್ರದಲ್ಲಿ ಶಿಖರ್ ಧವನ್ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದಲ್ಲಿ ಶಿಖರ್ ಧವನ್ ಯಾವ ರೂಪದಲ್ಲಿ ಇರಲಿದ್ದಾರೆ ಅನ್ನೋದನ್ನ ಹುಮಾ ಖುರೇಷಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರೋ ಫೋಟೋ ನೋಡಿದರೆ ಗೊತ್ತಾಗುತ್ತದೆ. ಇನ್ನು ಡಬಲ್ ಎಕ್ಸಲ್ ಸಿನಿಮಾವನ್ನ ಗುಲ್ಶನ್ ಕುಮಾರ್, ಅಂಡ್ ಮುದಸ್ಸರ್ ಅಜೀಜ್ ಟಿ ಸೀರಿಸ್ ಸಹಯೋಗದಲ್ಲಿ ನಿರ್ಮಾಣ ಮಾಡಿದ್ದು, ಇದೇ ಅಕ್ಟೋಬರ್ 14ರಂದು ಡಬಲ್ ಎಕ್ಸಲ್ ಸಿನಿಮಾ ಬಿಡುಗಡೆ ಆಗಲಿದೆ.

Leave a Reply

%d bloggers like this: