ಕ್ರಿಕೆಟ್ ಆಯ್ತು ಈಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಧೋನಿ ಅವರು, ಬೇಸರಗೊಂಡ ಕನ್ನಡಿಗರು

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಇದೀಗ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗಂತ ಎಂಎಸ್ ಧೋನಿ ಸಿನಿಮಾರಂಗಕ್ಕೆ ಬಂದು ನಟನೆಗೆ ಸಿದ್ದವಾಗಿಲ್ಲ. ಆದರೆ ಒಂದು ಹೊಸ ಹೆಜ್ಜೆ ಅಂತೂ ಇಟ್ಟಿದ್ದಾರೆ. ಅದೇನು ಅನ್ನೋದನ್ನ ಈ ಲೇಖನದಲ್ಲಿ ಮುಂದೆ ಓದಿ. ಈ ಕ್ರಿಕೆಟ್ ಕ್ಷೇತ್ರ ಮತ್ತು ಬಣ್ಣದ ಲೋಕಕ್ಕೆ ಅವಿನಾಭಾವ ಸಂಬಂಧ ಇದ್ದೇ ಇದೆ. ಯಾಕಂದ್ರೆ ಕ್ರಿಕೆಟ್ ಕ್ಷೇತ್ರದ ಒಂದಷ್ಟು ಮಂದಿ ಬಾಲಿವುಡ್ ನಟಿಯರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಇನ್ನು ಅದೇ ರೀತಿಯಾಗಿ ಈ ಕ್ರಿಕೆಟ್ ಕ್ಷೇತ್ರದ ಒಂದಷ್ಟು ಆಟಗಾರರು ತಮ್ಮ ವೃತ್ತಿಯ ಜೊತೆಗೆ ಉಪ ವೃತ್ತಿಯಾಗಿ ವಿವಿಧ ಬಿಝೆನೆಸ್ ಕೂಡ ಮಾಡ್ತಾ ಇರ್ತಾರೆ. ಜೊತೆಗೆ ವಿವಿಧ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಸಹ ಮಾಡಿದ್ದಾರೆ.

ಅದರಂತೆ ಇದೀಗ ಮಹೇಂದ್ರ ಸಿಂಗ್ ಧೋನಿ ಅವರು ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಈ ಮೂಲಕ ಬಣ್ಣದ ಪ್ರಪಂಚಕ್ಕೆ ತೆರೆದುಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆಯಷ್ಟೆ ಧೋನಿ ಅವರ ಜೀವನಾಧಾರಿತ ಸಿನಿಮಾ ಕೂಡ ಆಗಿತ್ತು. ಆ ಚಿತ್ರ ಉತ್ತಮ ಮೆಚ್ಚುಗೆ ಪಡೆದು ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನ ಕೂಡ ಕಂಡಿತ್ತು. ಇದೀಗ ಸ್ವತಃ ಧೋನಿ ಅವರೇ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಅವರ ಸಿನಿಮಾ ನಿರ್ಮಾಣ ಸಂಸ್ಥೆಯ ಹೆಸರು ಎಂಎಸ್ ಧೋನಿ ಎಂಟರ್ಟೈನ್ಮೆಂಟ್. ಈ ಕಂಪನಿಯು ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಹೆಸರಿನಲ್ಲಿದೆ. ಇನ್ನು ಧೋನಿ ಅವರ ಎಂಎಸ್ ಧೋನಿ ಎಂಟರ್ಟನ್ಮೆಂಟ್ ಪ್ರೊಡಕ್ಷನ್ ಹೌಸ್ ನಲ್ಲಿ ಪ್ರಾರಂಭವಾಗಿ ತಮಿಳು, ತೆಲುಗು ಮತ್ತು ಮಲೆಯಾಳಂ ಹೀಗೆ ಮೂರು ಭಾಷೆಗಳಲ್ಲಿ ಮಾತ್ರ ಸಿನಿಮಾ ತಯಾರು ಮಾಡುತ್ತಾರಂತೆ.

ತಮಿಳಿನಲ್ಲಿ ವಿಶೇಷ ಯಾಕಂದ್ರೆ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಪ್ರತಿನಿಧಿಸುತ್ತಿರುತ್ತಾರೆ. ಹಾಗಾಗಿ ಧೋನಿ ಅವರಿಗೆ ತಮಿಳು ಸಿನಿಮಾ ನಿರ್ಮಾಣ ಮಾಡಲು ವಿಶೇಷ ಆಸ್ಥೆ ವಹಿಸಿದ್ದಾರೆ. ಇನ್ನು ಧೋನಿ ಅವರ ಈ ಪ್ರೊಡಕ್ಷನ್ ಹೌಸ್ ಜೊತೆಗೆ ಬೇರೆ ನಿರ್ಮಾಣ ಸಂಸ್ಥೆಗಳು ಕೂಡ ಕೈ ಜೋಡಿಸಿ ದಿ ಹಿಡನ್ ಹಿಂದೂ, ರೋರ್ ಆಫ್ ದಿ ಲಯನ್, ಬ್ಲೇಜ್ ಟು ಗ್ಲೋರಿ ಅಂತಹ ಕೆಲವು ವೆಬ್ ಸೀರಿಸ್ ಗಳನ್ನ ನಿರ್ಮಾಣ ಮಾಡಿದೆ. ಇದೀಗ ಧೋನಿ ಅವರ ಸಂಸ್ಥೆಯೇ ಸ್ವತಂತ್ರವಾಗಿ ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡೋದಕ್ಕೆ ಹೆಜ್ಜೆ ಇಟ್ಟಿದೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಕ್ಷೇತ್ರದ ನಂತರ ಸಿನಿಮಾರಂಗಕ್ಕೂ ಕೂಡ ಎಂಟ್ರಿ ಆಗಿದ್ದಾರೆ. ಇದೀಗ ಈ ಸುದ್ದಿ ಕನ್ನಡಿಗರನ್ನು ಕೆರಳಿಸಿದ್ದು ಎಲ್ಲಾ ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ಯಾಕೆ ಮಾಡುತ್ತಿಲ್ಲ ಯಾಕೆ ಈ ಕಡೆಗಣನೆ ಎಂದು ಕನ್ನಡ ಸಿನಿರಸಿಕರು ಧೋನಿ ಅವರ ಈ ನಡೆ ವಿರುದ್ಧ ಸಿಟ್ಟಾಗಿದ್ದಾರೆ.