ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ 11 ಕೋಟಿ ಬೆಲೆಯ ಕಾರು ಖರೀದಿಸಿದ ಮುಖ್ಯಮಂತ್ರಿ

ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕೂಡ ಕೋಟಿ ಕೋಟಿ ದುಂದು ವೆಚ್ಚ ಮಾಡಿದ ಮುಖ್ಯಮಂತ್ರಿ. ಮುಖ್ಯ ಮಂತ್ರಿಗಳ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಪರಿಣಾಮ ಕೋವಿಡ್ ನಿಯಂತ್ರಣಕ್ಕಾಗಿ ತಿಂಗಳುಗಳ ಕಾಲ ಲಾಕ್ಡೌನ್ ಮಾಡಲಾಗಿತ್ತು. ಇದರ ಪರಿಣಾಮ ವಾಣಿಜ್ಯ ಚಟುವಟಿಕೆಗಳು ಸ್ಥಬ್ದವಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೀಡಾಗುವಂತಾಯಿತು. ಅದರಲ್ಲಿಯೂ ಕೂಡ ದಿನದ ಕೂಲಿ ಕಾರ್ಮಿಕರಿಗೆ ಒಂದೊಪ್ಪತ್ತಿನ ಊಟಕ್ಕೂ ಕೂಡ ಪರದಾಡುವಂತಾಗಿತ್ತು. ಸರ್ಕಾರ ಇಂತಹ ಸಂಧರ್ಭದಲ್ಲಿ ಬಡ-ಬಗ್ಗರಿಗೆ ಯಾವುದೇ ರೀತಿಯಾಗಿ ತುರ್ತು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿಲ್ಲ.ಆದರೆ ಸರ್ಕಾರಿ ಅಧಿಕಾರಿಗಳು ಓಡಾಡಲು ನೂತನ ಕಾರುಗಳ ಖರೀದಿಗಾಗಿ ಬರೋಬ್ಬರಿ ಹನ್ನೊಂದು ಕೋಟಿಗೂ ಅಧಿಕ ಹಣವನ್ನು ವ್ಯಯ ಮಾಡಲಾಗಿದೆ.

ಹೌದು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಆಗಿರುವ ಕೆ.ಚಂದ್ರಶೇಖರ್ ರಾವ್ ಅವರು ನೂತನವಾಗಿ ನೇಮಕವಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ದುಬಾರಿ ಬೆಲೆಯ ಐಷಾರಾಮಿ ಕಾರ್ನಿವಲ್ ಕಾರುಗಳನ್ನು ನೀಡಲಾಗಿದೆ.ಜನರ ಸೇವೆ ಮಾಡುವ ಜನ ಸೇವಕರಿಗೆ ಬರೋಬ್ಬರಿ ಹನ್ನೊಂದು ಕೋಟಿ ಹಣವನ್ನು ಕೇವಲ ಓಡಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.ಈ ಒಂದು ಕಾರ್ನಿವಲ್ ಕಾರಿನ ಬೆಲೆ ಸರಿ ಸುಮಾರು 25.30 ಲಕ್ಷ .ರೂ.ಗಳಾಗಿದೆ. ತೆಲಂಗಾಣದ ಮುಖ್ಯಮಂತ್ರಿಗಳ ಅಣತಿಯಂತೆ ಒಟ್ಟು ಮೂವತ್ತೆರಡು ಕಾರ್ನಿವಲ್ ಕಾರುಗಳನ್ನು ಖರೀದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೋವಿಡ್ ಸಂಕಷ್ಟ ನಿಭಾಯಿಸಲು ತೆಲಂಗಾಣ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ ನಲವತ್ತು ಸಾವಿರ ಕೋಟಿ ಸಾಲಯಿದೆ.ಇದರ ಬೆನ್ನಲ್ಲೆ ಮತ್ತೊಂದಷ್ಟು ಸಾಲದ ಹೊರೆ ಹೊರಿಸಿಲುವ ಮುಖ್ಯಮಂತ್ರಿಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಗರು ತರಾಟೆಗೆ ತೆಗೆದುಕೊಂಡಿದ್ದಾರೆ.ಆದರೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಹೈದರಾಬಾದ್ ನಲ್ಲಿರುವ ಗೃಹ ಕಚೇರಿಯ ಮುಂಭಾಗದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ನೀಡಿರುವ ಹೊಸ ಕಾರ್ನಿವಲ್ ಕಾರಿನ ಚಾಲನೆಗೆ ಹಸಿರು ನಿಶಾನೆ ತೋರಿದ್ದಾರೆ.ಈ ವಿಚಾರವಾಗಿ ಪ್ರತಿಪಕ್ಷಗಳು ಸೇರಿದಂತೆ ತೆಲಂಗಾಣ ರಾಜ್ಯದ ಜನರು ಕೆ.ಚಂದ್ರಶೇಖರ್ ರಾವ್ ಅವರ ಈ ಆರ್ಥಿಕ ಪರಿಜ್ಞಾನ ಇಲ್ಲದ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: