ಕೂಲ್ ಕ್ಯಾಪ್ಟನ್ MS ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ ಬಿಸಿಸಿಐ. ಈ ಬಾರಿ ಭಾರತಕ್ಕೆ ವರ್ಲ್ಡ್ ಕಪ್ ಫಿಕ್ಸ್

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ ಬಿಸಿಸಿಐ. ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಳೆದ ವರ್ಷವಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದರಿಂದ ಕ್ರಿಕೆಟ್ ಪ್ರೇಮಿಗಳಿಗೆ ಬೇಸರವಾಗಿದ್ದೂ ಸುಳ್ಳಲ್ಲ.2019 ರ ವಿಶ್ವಕಪ್ ನಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಅಪಾರ ನಿರೀಕ್ಷೆ ಇಟ್ಟುಕೊಂಡಿತ್ತು.ಆದರೆ ಸೆಮಿ ಫೈನಲ್ಸ್ ಪಂದ್ಯದಲ್ಲಿ ಕ್ರೀಜ಼್ ನಲ್ಲಿದ್ಧ ಮಹೇಂದ್ರ ಸಿಂಗ್ ಧೋನಿ ಯಾವಾಗ ವಿಕೆಟ್ ಒಪ್ಪಿಸಿದರೋ ಆಗ ಭಾರತದ ಕನಸು ಭ್ರಮ ನಿರಶನ ಆಗಿದ್ದು ಸುಳ್ಳಲ್ಲ. 2019 ರ ಈ ವಿಶ್ವಕಪ್ ಟೂರ್ನಿ ಮುಗಿದ ನಂತರ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಭಾರತದ ಕ್ರಿಕೆಟ್ ತಂಡದಿಂದ ಹೊರಬಂದರು.ಇದಾದ ಬಳಿಕ ರನ್ ಬ್ಲಾಸ್ಟರ್ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿ ನೇತೃತ್ವ ವಹಿಸಿಕೊಂಡರು.ಇದಾದ ಬಳಿಕ ಭಾರತ ತಂಡ ಯಾವುದೇ ಕಪ್ ಗೆದ್ದಿರಲಿಲ್ಲ.

ಇದರ ನಡುವೆ ಇತ್ತೀಚೆಗೆ ತಾನೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವ ಕಪ್ ಪಂದ್ಯದ ನಾಯಕ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದಾರೆ.ಇದರ ಬೆನ್ನಲ್ಲೇ ಭಾರತ ತಂಡಕ್ಕೆ ಮುಖ್ಯ ತರಬೇತುದಾರರಾಗಿದ್ದ ರವಿಶಾಸ್ತ್ರಿ ಅವರ ಸೇವಾ ಅವಧಿ ಮುಗಿಯಲಿದ್ದು,ಕೋಚ್ ಆಗಿ ಮುಂದುವರಿಸಲು ಆಸಕ್ತಿ ಇರದ ಕಾರಣ ರವಿಶಾಸ್ತ್ರಿ ಅವರ ಸ್ಥಾನಕ್ಕೆ ಪರ್ಯಾಯವಾಗಿ ಕೋಚ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.ಇದರ ಬೆನ್ನಲ್ಲೇ ಬಿ ಸಿ.ಸಿ.ಐ ಮಹತ್ವದ ನಿರ್ಧಾರವನ್ನು ಪ್ರಕಟಗೊಳಿಸಿದೆ.ಈ ಟಿ-20 ವಿಶ್ವಕಪ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ.ಹೌದು ಈ ಟಿ-20 ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಈಗಾಗಲೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಈ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸುತ್ತಿರುವ ಆಟಗಾರರನ್ನು ತಿಳಿಯುವುದಾದರೆ ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೋಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಉಳಿದಂತೆ ತಂಡದಲ್ಲಿ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೆಜಾ, ಜಸ್ಪ್ರಿತ್ ಭುಮ್ರಾ, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ರಾಹುಲ್ ಚಾಹರ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಸೇರಿದಂತೆ ವಿಕೆಟ್ ಕೀಪರ್ ಹಾಗಿ ರಿಷಬ್ ಪಂಥ್ ತಂಡದಲ್ಲಿ ಇದ್ದಾರೆ.ಮೆಂಟರ್ ಆಗಿ ಟೀಂ ಇಂಡಿಯಾ ಮಾಜಿ ನಾಯಕಿ ಕಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಕಾರ್ಯನಿರ್ವಹಿಸಲಿದ್ದಾರೆ.