ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಒಟ್ಟು ಆಸ್ತಿ ಎಷ್ಟು ಗೊತ್ತಾ? ಅತೀ ಶ್ರೀಮಂತ ಪಕ್ಷ ಯಾವುದು ಗೊತ್ತಾ? ನೋಡಿ ಒಮ್ಮೆ

ದೇಶದ ಈ ರಾಷ್ಟ್ರೀಯ ಪಕ್ಷದಲ್ಲಿ ಎಷ್ಟು ಕೋಟಿ ಮೌಲ್ಯ ಇದೆ ಗೊತ್ತಾ…! ಪ್ರಸ್ತುತ ಭಾರತ ದೆಶದಲ್ಲಿ ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷ ಆಡಳಿತರೂಢ ಪಕ್ಷವಾಗಿ ಆಡಳಿತ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶವನ್ನು ಮುನ್ನೆಡೆಸುತ್ತಿದೆ. ಇತ್ತೀಚಿನ ದಿನಮಾನಗಳಲ್ಲಿ ರಾಜಕಾರಣ ಎಂಬುದು ಜನ ಸೇವೆ ಅಂದರೆ ಹಾಸ್ಯಾಸ್ಪದವಾಗಿ ಕಾಣುವುದು ಮಾತ್ರ ಸತ್ಯ. ಯಾಕೆಂದರೆ ರಾಜಕಾರಣ ಇದೀಗ ಸೇವಾ ಕ್ಷೇತ್ರವಾಗಿ ಉಳಿದಿಲ್ಲ. ಅದು ಉದ್ಯಮವಾಗಿ ಪರಿವರ್ತನೆ ಆಗಿದೆ. ಉದ್ಯಮಿಗಳು ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಮೇಲೆ ರಾಜಕೀಯ ಕ್ಷೇತ್ರ ಕೂಡ ಒಂದು ರೀತಿಯ ಕಮರ್ಷಿಯಲ್ ಬಿಸಿ಼ನೆಸ್ ಆಗಿದೆ. ಅಷ್ಟರ ಮಟ್ಟಿಗೆ ಹಣದ ಹೊಳೆ ಹರಿಯುತ್ತಿದೆ ರಾಜಕೀಯದಲ್ಲಿ. ಇಂದು ದೇಶದಲ್ಲಿರುವ ಅನೇಕ ರಾಜಕೀಯ ನಾಯಕರು ಕೋಟಿ ಕೋಟಿ ರೂ.ಗಳ ಒಡೆಯರಾಗಿದ್ದಾರೆ.

ಯಾವುದೇ ಒಂದು ರಾಷ್ಟ್ರೀಯ ಪಕ್ಷದಲ್ಲಿ ಒಬ್ಬ ಅಭ್ಯರ್ಥಿಗೆ ಟಿಕೆಟ್ ಸಿಗಬೇಕಾದರೆ, ಆ ಅಭ್ಯರ್ಥಿ ಎಷ್ಟೆಲ್ಲಾ ಹರ ಸಾಹಸ ಪಡಬೇಕು ಎಂಬುದು ಈಗ ಜಗಜ್ಜಾಹಿರಾಗಿರುವ ವಿಚಾರ ಸಂಗತಿ. ಹಣವಿಲ್ಲದೆ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಅನೇಕ ಮುತ್ಸದ್ದಿ ಸಜ್ಜನ ರಾಜಕಾರಣಿಗಳ ನೋವಿನ ಮಾತುಗಳು. ಭಾರತೀಯ ಚುನಾವಣಾ ಆಯೋಗ ತಿಳಿಸಿರುವ ಪ್ರಕಾರ ದೇಶದಲ್ಲಿ 2858 ನೋಂದಾಯಿಸಿದ ರಾಜಕೀಯ ಪಕ್ಷಗಳಿದ್ದು, ಅವುಗಳಲ್ಲಿ ಎಂಟು ರಾಷ್ಟ್ರೀಯ ಪಕ್ಷಗಳಾಗಿವೆಯಂತೆ. ಜೊತೆಗೆ 54 ಪ್ರಾದೇಶಿಕ ಪಕ್ಷಗಳಿದ್ದು, ನೋಂದಾಯಿತವಲ್ಲದ 2796 ರಾಜಕೀಯ ಪಕ್ಷಗಳು ನಮ್ಮ ಭಾರತ ದೇಶದಲ್ಲಿವೆಯಂತೆ.

ನಮ್ಮ ಭಾರತ ದೇಶದಲ್ಲಿ ಇಷ್ಟೊಂದು ರಾಜಕೀಯ ಪಕ್ಷ ಇದೆ ಅಂದ ಮೇಲೆ. ಈ ರಾಜಕೀಯ ಪಕ್ಷಗಳಲ್ಲಿ ಅತಿ ಹೆಚ್ಚು ಸಂಪನ್ಮೂಲ ಹೊಂದಿರುವ ಪಕ್ಷ ಯಾವುದು. ಯಾವ ಪಕ್ಷ ಅತಿ ಹೆಚ್ಚು ದೇಣಿಗೆಯನ್ನ ಪಡೆಯುತ್ತಿದೆ. ಎಷ್ಟು ಕೋಟಿ.ರೂ. ಆಸ್ತಿ ಮೌಲ್ಯ ದೇಣಿಗೆಯನ್ನ ಹೊಂದಿದೆ ಎಂದು ತಿಳಿಯೋಣ. ಯಾವುದೇ ಒಂದು ರಾಜಕೀಯ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಅದಕ್ಕೆ ಹಣಕಾಸಿನ ಸಂಪನ್ಮೂಲ ಅತ್ಯಗತ್ಯವಾಗಿರುತ್ತದೆ. ಅದು ವ್ಯಕ್ತಿ ಸಂಪನ್ಮೂಲ, ಆರ್ಥಿಕ ಕ್ರೋಡಿಕರಣ ಹೀಗೆ ಒಂದಷ್ಟು ಪೂರಕವಾಗಿ ಇದ್ದೇ ಇರಬೇಕಾಗುತ್ತದೆ. ಅಂತೆಯೇ ನಮ್ಮ ಭಾರತ ದೇಶದಲ್ಲಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಪ್ರಭಾವಿ ಪಕ್ಷವಾಗಿ ಹೊರ ಹೊಮ್ಮಿದೆ.

ಈಗಾಗಲೇ ಭಾರತ ದೇಶದ ಬಹುತೇಕ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದು, ಅಪಾರ ಜನ ಬೆಂಬಲ ಪಡೆದು ಆಡಳಿತ ನಡೆಸುತ್ತಿದೆ. ಭಾರತದ ಭೂಪಟ ಸಂಪೂರ್ಣವಾಗಿ ಕೇಸರಿಮಯವಾಗಿ ಮಾಡಲು ಮೋದಿ ಮತ್ತು ಅಮಿತ್ ಶಾ ಪಣ ತೊಟ್ಟವರಂತೆ ಎಲ್ಲಾ ಚುನಾವಣೆಗಳಲ್ಲಿ ಜಯಭೇರಿ ಸಾಧಿಸುತ್ತಾ ಬರುತ್ತಿದ್ದಾರೆ. ಇದೀಗ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಯು 2019-20 ರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಣೆಯ ಆಧಾರದ ಮೇಲೆ ವರದಿಯೊಂದನ್ನ ತಿಳಿಸಿದೆ. ಈ ವರದಿಯಲ್ಲಿ ಭಾರತೀಯ ಜನತಾ ಪಕ್ಷ 4847.78 ಕೋಟಿ ರೂ.ಗಳ ಆಸ್ತಿ ಮೌಲ್ಯವನ್ನೊಂದಿದೆಯಂತೆ.

698.3 ಕೋಟಿ ಆಸ್ತಿ ಮೌಲ್ಯ ಹೊಂದುವ ಮೂಲಕ ಬಿ.ಎಸ್. ಪಿ.ಪಕ್ಷ ನಂತರದ ಸ್ಥಾನವನ್ನ ಪಡೆದಿದೆ. ಕಾಂಗ್ರೆಸ್ ಪಕ್ಷ 588.16 ಕೋಟಿ ರೂ.ಆಸ್ತಿ ಮೌಲ್ಯವನ್ನೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರಿಗೂ ತಲುಪುವ ತನಕ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.