ಕಮರ್ಷಿಯಲ್ ಸಿನಿಮಾಗಳ ನಡುವೆ ಮನಗೆದ್ದ ಕನ್ನಡದ ಕಲಾತ್ಮಕ ಸಿನಿಮಾ ನಾಳೆ ಚಿತ್ರಮಂದಿರಗಳ್ಲಲಿ ಬಿಡುಗಡೆ

ಇತ್ತೀಚೆಗೆ ಸಿನಿಮಾ ಅಂದರೆ ಸಾಕು ಅದೊಂದು ಹಣ ಮಾಡುವ ಉದ್ಯಮ ಅಂತಾನೇ ಹಾಗೋಗಿದೆ. ಅದಕ್ಕೆ ಸಿನಿ ಪ್ರೇಕ್ಷಕರ ಅಭಿರುಚಿಯೂ ಕೂಡ ಕಾರಣವಾಗಿದೆ ಅಂದರೆ ತಪ್ಪಾಗಲಾರದು. ಆದರೆ ಹತ್ತರಲ್ಲಿ ಒಂದೆರಡು ಸಿನಿಮಾಗಳು ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಆಚರಣೆ ಕಲೆಗಳ ಬಗ್ಗೆ ಸಿನಿಮಾ ಮಾಡಿದಾಗ ಅವುಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಅಂತದ್ದೇ ಒಂದು ಪ್ರಯತ್ನವನ್ನು ಗೂಗ್ಲಿ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಅವರು ತಾವೇ ಸ್ವತಃ ಒಡೆಯರ್ ಮೂವೀಸ್ ಎಂಬ ನಿರ್ಮಾಣ ಸಂಸ್ಥೆಯಡಿ ಡೊಳ್ಳು ಎಂಬ ಕಲಾತ್ಮಕ ಸಿನಿಮಾ ಮಾಡಿದ್ದಾರೆ. ಡೊಳ್ಳು ಸಿನಿಮಾ ಸಂಪೂರ್ಣ ಕಲಾತ್ಮಕ ಸಿನಿಮಾ ಅಂತಾನೇ ಹೇಳೋಕ್ಕಾಗಲ್ಲ. ಈ ಚಿತ್ರದಲ್ಲಿ ನಮ್ಮ ನಾಡಿನ ಜಾನಪದ ಕಲೆಗಳಲ್ಲಿ ಒಂದಾಗಿರೋ ಡೊಳ್ಳು ನೃತ್ಯ ಕಲೆ ಇಂದು ನಶಿಸಿ ಹೋಗುತ್ತಿದೆ. ಈ ಒಂದು ಡೊಳ್ಳು ನೃತ್ಯ ಕಲಾವಿದರ ಬದುಕು ಮತ್ತು ಇದರ ಮಹತ್ವವನ್ನು ತಿಳಿಸುವಂತಹ ಪ್ರಧಾನ ಕಾರ್ಯವನ್ನು ಮುಖ್ಯವಾಗಿಟ್ಟುಕೊಂಡು ಡೊಳ್ಳು ಚಿತ್ರಕಥೆ ಮೂಡಿ ಬಂದಿದೆ.

ಇದರಲ್ಲಿ ಪ್ರೇಮದ ಕಥೆಯ ಜೊತೆಗೆ ಡೊಳ್ಳು ನೃತ್ಯ ಮಾಡುತ್ತಿದ್ದ ಗೆಳೆಯರು ಬದುಕು ನಡೆಸುವುದಕ್ಕಾಗಿ ಅಗತ್ಯ ಇರೋ ಉದ್ಯೋಗ ಹರಸಿ ನಗರದ ಕಡೆ ಮುಖ ಮಾಡುವಂತಹ ದೃ಼ಷ್ಟಿಕೋನವನ್ನ ಅದರ ಮಹತ್ವವನ್ನು ಕೂಡ ತಿಳಿಸಲಾಗಿದೆ. ಡೊಳ್ಳು ಸಿನಿಮಾದಲ್ಲಿ ನಾಯಕರಾಗಿ ಕಾರ್ತಿಕ್ ಮಹೇಶ್ ನಟಿಸಿದ್ದು, ಡೊಳ್ಳು ನೃತ್ಯಗಾರನಾಗಿ ನಟಿಸಲು ಒಂದಷ್ಟು ತಿಂಗಳ ಕಾಲ ಅವಿರತ ಶ್ರಮ ಹಾಕಿ ತಾಲೀಮು ನಡೆಸಿದ್ದಾರೆ. ಇದರ ಪರಿಶ್ರಮ ತೆರೆ ಮೇಲೆ ಚೆನ್ನಾಗಿ ಕಾಣುತ್ತಿದೆ. ನಾಯಕಿಯಾಗಿ ನಿಧಿ ಹೆಗಡೆ ನಟಿಸಿದ್ದಾರೆ. ಇನ್ನುಳಿದ ಪ್ರಧಾನ ಪಾತ್ರಗಳಲ್ಲಿ ಚಂದ್ರ ಮಯೂರ್, ಬಾಬು ಹಿರಣಯ್ಯ, ಶರಣ್ಯ ಸುರೇಶ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಡೊಳ್ಳು ಸಿನಿಮಾದ ಚಿತ್ರೀಕರಣ ಹೆಚ್ಚು ಗ್ರಾಮೀಣ ಭಾಗದಲ್ಲಿ ಮಾಡಿರೋದ್ರಿಂದ ಚಿತ್ರದಲ್ಲಿ ಪ್ರಕೃತಿ ಸೊಬಗನ್ನ ಅನುಭವಿಸಬಹುದಾಗಿದೆ. ನಮ್ಮ ನಾಡಿನ ಸಂಸ್ಕೃತಿ, ಆಚರಣೆ, ಕಲೆಗಳನ್ನ ಪುಸ್ತಕಗಳಲ್ಲಿ ಓದಿ ತಿಳಿಯುತ್ತಿದ್ದವರಿಗೆ ಡೊಳ್ಳು ಸಿನಿಮಾದ ಮೂಲಕ ಒಂದಷ್ಟು ನಮ್ಮ ನಾಡಿನ ಜಾನಪದ ಕಲೆ ಸಂಸ್ಕೃತಿಗಳ ಬಗ್ಗೆ ತಿಳಿಯಬಹುದಾಗಿದೆ. ಡೊಳ್ಳು ಸಿನಿಮಾ ಈಗಾಗಲೇ ರಾಷ್ಟ್ರ ಪ್ರಶಸ್ತಿ ಪಡೆದಿದ್ದು, ನೋಡಗರಿಗೆ ಇಷ್ಟವಾಗಿ, ವಿಮರ್ಶಕರಿಂದಲೂ ಕೂಡ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.

Leave a Reply

%d bloggers like this: