ಕಾಮಿಡಿ ಕಿಲಾಡಿಗಳ ಪ್ರವೀಣ್ ಅಸಲಿಗೆ ಮದುವೆಯಾಗಿದ್ದು ಯಾರನ್ನ ಗೊತ್ತಾ?

ಜೀವನದ ತಿರುವನ್ನೇ ಬದಲಾಯಿಸಿದ ಆರ್ಕೆಸ್ಟ್ರಾದಲ್ಲಿ ಮಾಡಿದ ನಟನೆ..! ಕಲಾವಿದರ ಬದುಕು ಬಣ್ಣ ಬಣ್ಣದ ಬೆಳ್ಳಿ ಪರದೆಯಲ್ಲಿ ಮಿಂಚಿದಂತೆ ಇರುವುದಿಲ್ಲ. ಅದರ ಹಿಂದೆ ಕಡು ಕಷ್ಟಗಳು ಕಪ್ಪು ಪರದೆಯ ಹಿಂದೆ ಅವಿತುಕೊಂಡಿರುತ್ತವೆ. ಅಂತೆಯೇ ಇಂದು ಸಿನಿಮಾ,ಧಾರಾವಾಹಿ ಸೇರಿದಂತೆ ಅನೇಕ ಕಲಾವಿದರ ಬದುಕಲ್ಲಿಯೂ ಕೂಡ ಒಂದಲ್ಲ ಒಂದು ರೀತಿ ಯಾಗಿ ಕಷ್ಟದ ದಿನಗಳು ಇದ್ದೇ ಇರುತ್ತದೆ.ಸದ್ಯಕ್ಕೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಅಂದರೆ ಅದು ಕಲರ್ಸ್ ಸೂಪರ್ ನಲ್ಲಿ ಪ್ರಸಾರ ಅಗುತ್ತಿರುವ ಮಜಾಭಾರತ ಹಾಸ್ಯ ಕಾರ್ಯಕ್ರಮ. ವೀಕ್ಷಕರಿಗೆ ಸಖತ್ ಮನರಂಜನೆ ನೀಡುವ ಮೂಲಕ ಈ ಕಾರ್ಯಕ್ರಮ ನಾಡಿನಾದ್ಯಂತ ಅಪಾರ ಜನಮೆಚ್ಚುಗೆ ಪಡೆದುಕೊಂಡಿದೆ.ಅಂತೆರೇ ಈ ಮಜಾಭಾರತ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕೂಡ ಉತ್ತಮ ಹೆಸರು ಸಂಪಾದಿಸಿದ್ದಾರೆ.ಲ್ಯಾಗ್ ಮಂಜು,ಚಿಲ್ಲರ್ ಮಂಜ,ರಾಘವೇಂದ್ರ ಸೇರಿದಂತೆ ಪ್ರವೀಣ್ ಕುಮಾರ್ ಕೂಡ ಒಬ್ಬರು.

ಜ್ಯೂನಿಯರ್ ಸಾಧುಕೋಕಿಲ ಎಂದೇ ಕರೆಸಿಕೊಳ್ಳುವ ನಟ ಪ್ರವೀಣ್ ಕುಮಾರ್ ಕನ್ಪಡದ ಅನೇಕ ಕಲಾವಿದರಂತೆ ಮಿಮಿಕ್ರಿ ಮಾಡುತ್ತಾರೆ. ಅದರಲ್ಲಿಯೂ ಗುಂಗುರು ಕೂದಲು ಹೊಂದಿರುವ ಪ್ರವೀಣ್ ಥೇಟ್ ಸಾಧುಕೋಕಿಲ ಅವರಂತೆಯೇ ಅನುಕರಣೆ ಮಾಡಿ ನಟಿಸುತ್ತಾರೆ.ಹಾಗಾಗಿಯೇ ಅವರನ್ನ ಜ್ಯೂನಿಯರ್ ಸಾಧುಕೋಕಿಲ ಎಂದು ಕರೆಯಲಾಗುತ್ತದೆ. ಹಾಸ್ಯ ನಟರಾದ ಪ್ರವೀಣ್ ಕುಮಾರ್ ಅವರು ಮೂಲತಃ ಗೋಕಾಕ್ ಜಿಲ್ಲೆಯವರು. ಇವರಿಗೆ ಶಾಲಾ ದಿನಗಳಿಂದಲೂ ನಟನೆಯಲ್ಲಿ ಆಸಕ್ತಿ ಇದ್ದರಿಂದ ನಾಟಕದಲ್ಲಿ ಅಭಿನಯಿಸುತ್ತಿರುತ್ತಾರೆ. ಆದರೆ ಎಲ್ಲವೂ ಸರಿಯಾಗಿ ಸಾಗುತ್ತಿದೆ ಎಂಬ ಸಂಧರ್ಭದಲ್ಲಿ ಕಷ್ಟದ ಸಂಕೋಲೆಗಳು ಪ್ರಾರಂಭವಾಗುತ್ತವೆ.ಈ ಸಂಕಷ್ಟದ ಸಮಯ ಅವರನ್ನ ಶಾಲೆಯಿಂದ ದೂರಾಗುವಂತೆ ಮಾಡುತ್ತದೆ.ಅರ್ಧಕ್ಕೆ ಶಾಲೆ ಬಿಟ್ಟು ದುಡಿಯುವ ಕಡೆ ಗಮನವಿಟ್ಟು ಸಂಸಾರದ ಜವಾಬ್ದಾರಿಯನ್ನು ಹೊರುತ್ತಾರೆ.ಇವರ ತಂದೆ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ.ಅಲ್ಲಿ ಕಳ್ಳತನವಾಗಿ ಇವರ ತಂದೆಗೆ ಕೆಲಸ ಇಲ್ಲದಂತಾಗುತ್ತದೆ.

ಆಗ ಆರ್ಥಿಕ ಸಮಸ್ಯೆ ಇವರನ್ನ ಕಾಡುತ್ತದೆ. ಇದರಿಂದಾಗಿ ಪ್ರವೀಣ್ ಪೇಪರ್ ಹಾಕುವುದರಿಂದ ಹಿಡಿದು ಕಾರು ತೊಳೆಯುವುದು,ಮನೆ ಕೆಲಸ,ಸೆಕ್ಯೂರಿಟಿ ಕೆಲಸ ಸೇರಿದಂತೆ ಸಿಕ್ಕ ಸಿಕ್ಕ ಕೆಲಸಗಳನ್ನ ಮಾಡುತ್ತಿರುತ್ತಾರೆ. ಹೀಗೆ ಹೊಟ್ಟೆಪಾಡಿಗಾಡಿ ಒಂದಿಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿದ್ದ ಪ್ರವೀಣ್ ಅವರಿಗೆ ಅದೃಷ್ಟದಂತೆ ಸಿಕ್ಕಿದ್ದು ಅವರ ಊರಿನಲ್ಲಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮ.ಈ ಆರ್ಕೆಸ್ಟ್ರಾದಲ್ಲಿ ಪ್ರವೀಣ್ ಆಯೋಜಕರನ್ನ ಕೇಳಿಕೊಂಡು ಒಂದಷ್ಟು ನಿಮಿಷಗಳ ಕಾಲ ಸೇರಿದ ಜನರನ್ನ ನಕ್ಕು ನಲಿಸುತ್ತಾರೆ.ಇವರ ಹಾಸ್ಯ ಪ್ರಜ್ಞೆ ಪ್ರತಿಭೆ ಕಂಡ ಆರ್ಕೆಸ್ಟ್ರಾ ಆಯೋಜಕರು ತಮ್ಮ ತಂಡದೊಂದಿಗೆ ಕೆಲಸ ಮಾಡುವಂತೆ ತಿಳಿಸುತ್ತಾರೆ.ಅಲ್ಲಿಂದ ಪ್ರವೀಣ್ ಅಲ್ಲಿಯೇ ಕೆಲಸ ಮಾಡುತ್ತಾರೆ. ಹೀಗೆ ಈ ಆರ್ಕೆಸ್ಟ್ರಾದಲ್ಲಿ ಹಾಸ್ಯ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಾ ಸರಿ ಸುಮಾರು 2700 ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರವೀಣ್ ಅವರಿಗೆ ತದ ನಂತರ ಕಾಮಿಡಿ ಕಿಲಾಡಿಗಳ ರಿಯಾಲಿಟಿ ಶೋ ನಲ್ಲಿ ಅವಕಾಶ ದೊರೆಯುತ್ತದೆ.ಅಲ್ಲಿಂದ ಅವರ ಅದೃಷ್ಟದ ಬಾಗಿಲು ತೆರೆದು ಇಂದು ಕರುನಾಡಿನ ಮನೆ ಮನೆಗಳಲ್ಲಿಯೂ ಪ್ರವೀಣ್ ಮನೆ ಮಾತಾಗಿದ್ದಾರೆ.

Leave a Reply

%d bloggers like this: