ಕಾಮಿಡಿ ಕಿಲಾಡಿ ಸಂಜು ಬಸಯ್ಯ ಅವರ ಮುದ್ದಾದ ಜೋಡಿ ನೋಡಿ ಯಾವ ಹೀರೋಯಿನ್ ಗೂ ಕಮ್ಮಿಯಿಲ್ಲ

ನಮಸ್ಕಾರ ಸ್ನೇಹಿತರೆ ಕಾಮಿಡಿ ಕಿಲಾಡಿಯ ಸಂಜು ಬಸಯ್ಯ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಸಂಜು ಬಸಯ್ಯ ಅವರ ಮುದ್ದಾದ ಪ್ರೇಯಸಿಯ ಬಗ್ಗೆ ತಿಳಿಸುತ್ತೇವೆ ಮುಂದೆ ಓದಿ. ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ರಿಯಾಲಿಟಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು ಇದರಿಂದ ಹಲವಾರು ಮಂದಿ ತಮ್ಮ ಬದುಕನ್ನೇ ಕಟ್ಟಿಕೊಂಡಿದ್ದಾರೆ. ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದ ಮೂಲಕ ಹಲವಾರು ಗ್ರಾಮೀಣ ಪ್ರತಿಭೆಗಳು ಹೊರಬಂದಿದ್ದು ಇದೀಗ ಸಿನಿಮಾರಂಗದಲ್ಲಿಯೂ ಕೂಡ ಬಹುಬೇಡಿಕೆಯ ಕಾಮಿಡಿ ಕಲಾವಿದರಾಗಿದ್ದಾರೆ.

ಇದರ ಬೆನ್ನಲ್ಲೇ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಗೆ ಅನುಗುಣವಾಗಿರುವ ಸಂಜು ಬಸಯ್ಯ ಅವರು ಕೂಡ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ ಅಂತ ಹೇಳಬಹುದು. ಹೌದು ಆರಂಭಿಕ ದಿನಗಳಲ್ಲಿ ಸಂಜು ಬಸಯ್ಯ ಅವರ ದೇಹವನ್ನು ನೋಡಿ ಅನೇಕರು ಅವಮಾನ ಮಾಡಿದ್ದರೂ ಕೂಡ ಇದೆಲ್ಲವನ್ನೂ ಮೆಟ್ಟಿನಿಂತು ಇದೀಗ ಉತ್ತಮ ಕಲಾವಿದರಾಗಿ ಬೆಳೆದು ನಿಂತಿದ್ದಾರೆ.ಉತ್ತರ ಕರ್ನಾಟಕದ ಮೂಲದವರಾದ ಸಂಜು ಬಸಯ್ಯ ಆರ್ಕೆಸ್ಟ್ರಾ, ನಾಟಕಗಳಲ್ಲಿ ತಮ್ಮ ಅಭಿನಯದ ಮೂಲಕ ಜನರನ್ನ ಮನರಂಜಿಸುತ್ತಾ ಬರುತ್ತಿದ್ದಾರೆ.

ಹಲವಾರು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಮಿಂಚಿರುವ ಕಲಾವಿದ ಸಂಜು ಬಸಯ್ಯ ಇದೀಗ ಬೆಳ್ಳಿತೆರೆಯಲ್ಲಿಯೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಝೀ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ನಡೆಯುತ್ತಿದ್ದು ಕಳೆದ ವಾರದ ಸಂಚಿಕೆಯಲ್ಲಿ ಸಂಜು ಬಸಯ್ಯ ಅವರು ಒಬ್ಬಾಕೆಯನ್ನು ತಮ್ಮ ಪ್ರೇಯಸಿ ಎಂದು ಎಲ್ಲರಿಗೂ ಪರಿಚಯ ಮಾಡಿದ್ದಾರೆ.ಹೌದು ಈ ಮೂಲಕ ವೇದಿಕೆ ಏರಲಿದ್ದ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಮೂಡಿಸಿರುವ ಸಂಜು ತಮ್ಮ ಪ್ರೇಮಕಥೆಯನ್ನು ಕೂಡ ಹೇಳಿದ್ದಾರೆ.

ಹೌದು ಬಹುಶಃ ಸಂಜು ಬಸಯ್ಯನನ್ನ ಇಷ್ಟ ಪಟ್ಟು ಪ್ರೀತಿ ಮಾಡುತ್ತಿರುವ ಹುಡುಗಿ ಇದ್ದಾಳೆ ಎಂದರೆ ನೀವು ನಂಬಲು ಹಿಂದೆಮುಂದೆ ನೋಡುತ್ತೀರಿ. ಆಕೆ ಕೂಡ ಇದಕ್ಕೆ ಒಪ್ಪಿದ್ದಾಳೆ ಎಂದು ಸಂಜು ಬಸಯ್ಯ ಹೇಳಿದ್ದಾರೆ. ಇನ್ನು ಜಗ್ಗೇಶ್ ಅವರು ಆ ಯುವತಿಗೆ ಇದರ ಬಗ್ಗೆ ಕೇಳಿದಾಗ, ಆ ಯುವತಿ ಕೂಡ ನಾವು ಪ್ರೀತಿಸುತ್ತಿರುವುದು ನಿಜ. ಸಂಜು ಬಸಯ್ಯ ನನಗಿಂತ ಆರು ತಿಂಗಳು ದೊಡ್ಡವನು ಎಂದು ತಮ್ಮ ವಯಸ್ಸಿನ ಬಗ್ಗೆ ಕೂಡ ಹೇಳಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಮದುವೆಯಾಗುತ್ತೇವೆ ಎಂದು ಕೂಡ ಸಂಜು ಬಸಯ್ಯ ಪ್ರೇಯಸಿ ಹೇಳಿದ್ದು, ಜೊತೆಗೆ ಇಬ್ಬರೂ ಕೂಡ ವೇದಿಕೆಯ ಮೇಲೆ ಜೊತೆಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ.

ಇನ್ನು ನಾವು ಪ್ರೀತಿ ಮಾಡುತ್ತಿರುವ ವಿಷಯ ನಮ್ಮ ಮನೆಯವರಿಗೆ ಗೊತ್ತಿಲ್ಲ ಎಂದು ಆ ಯುವತಿ ಹೇಳಿದ್ದು, ಒಟ್ಟಿನಲ್ಲಿ ನಾವು ಮದ್ವೆಯಾಗುವುದು ಖಚಿತ ಎಂದು ಹೇಳಿದ್ದಾರೆ. ಆಕೆಯ ಮಾತನ್ನ ಕೇಳಿದ ನಟ ಜಗ್ಗೇಶ್ ಅವರು, ನಿನ್ನ ಧೈರ್ಯಕ್ಕೆ ನಾನು ಮೆಚ್ಚುತ್ತೇನಮ್ಮ. ನೀವು ಯಾವಾಗ ಮದ್ವೆ ಆಗುತ್ತಿರೋ ಆಗ ಹೇಳಿ ಗೆಸ್ಟ್ ಆಗಿ ನಾನು ನಿಮ್ಮ ಮದುವೆಗೆ ಬಂದೆ ಬರುತ್ತೇನೆ ಎಂದು ಜಗ್ಗೇಶ್ ಅವರು ಹೇಳಿದ್ದಾರೆ. ಒಟ್ಟಾರೆ ಸಂಜು ಬಸಯ್ಯ ಅವರು ವೇದಿಕೆಯ ಮೇಲೆ ತಮ್ಮ ಪ್ರೀತಿಯ ವಿಚಾರವನ್ನು ಹೇಳಿ ಎಲ್ಲರಲ್ಲಿಯೂ ಕೂಡ ಆಶ್ಚರ್ಯ ಮೂಡಿಸಿದ್ದು ಅವರ ಸಹಪಾಠಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: