ಕಾಫಿನಾಡು ಚಂದುಗೆ ಸ್ಪೆಷಲ್ ಗಿಫ್ಟ್ ನೀಡಿದ ಅನುಶ್ರೀ ಅವರು

ಇತ್ತೀಚೆಗೆ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರೋ ವ್ಯಕ್ತಿ ಅಂದ್ರೆ ಅದು ಒನ್ ಅಂಡ್ ಓನ್ಲಿ ಕಾಫಿನಾಡು ಚಂದು. ತಾನೇ ಸ್ವತಃ ಒಂದಷ್ಟು ಪದಗಳನ್ನ ಕಟ್ಕೊಂಡು ವಿಭಿನ್ನವಾಗಿ ಬರ್ಥ್ ಡೇ ವಿಶಸ್ ಮಾಡುತ್ತಾ ತಾನು ಅಪ್ಪು ಶಿವಣ್ಣ ಅವರ ಅಭಿಮಾನಿ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಮಾಡ್ತಾ ನಾಡಿನಾದ್ಯಂತ ಭಾರಿ ಫೇಮಸ್ ಆಗಿದ್ದಾರೆ ಈ ಕಾಫಿನಾಡು ಚಂದು. ಇನ್ಸ್ಟಾಗ್ರಾಮ್ ನಲ್ಲಿ ಸಿನಿಮಾ ಸೆಲೆಬ್ರಿಟಿಗಳಿಗಿಂತ ಹೆಚ್ಚು ಫಾಲೋವರ್ಸ್ ಪಡ್ಕೊಂಡು ಸೊಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಫಿನಾಡು ಚಂದು ಅವರ ಜನಪ್ರಿಯತೆ ಕಂಡು ಈ ಬಾರಿ ಬಿಗ್ ಬಾಸ್ ನಲ್ಲಿ ಖಂಡಿತಾ ಇವ್ರು ಬರ್ತಾರೆ. ಬರ್ಲೇಬೇಕು ಅಂತ ಜನರೇ ಡಿಸೈಡ್ ಮಾಡಿದ್ರು.

ಅದ್ರಂತೆ ಬಿಗ್ ಬಾಸ್ ನಲ್ಲಿ ಕಾಫಿನಾಡು ಚಂದು ಮಸ್ತ್ ಎಂಟರ್ಟೈನ್ಮೆಂಟ್ ನೀಡ್ತಾರೆ ಅಂತಾ ಹೇಳಲಾಗುತ್ತಿತ್ತು. ಆದ್ರೇ ಇದು ಸಾಧ್ಯವಾಗಿಲ್ಲ. ಮೂಲಗಳ ಪ್ರಕಾರ ಬಿಗ್ ಬಾಸ್ ಸೀಸನ್ 9ರಲ್ಲಿ ಕಾಫಿನಾಡು ಚಂದು ಅವರನ್ನ ಕರೆಸೋ ಅವಕಾಶ ಹೆಚ್ಚಾಗಿದೆ. ಬಿಗ್ ಬಾಸ್ ಶೋನಲ್ಲಿ ಕಾಫಿನಾಡು ಚಂದು ಅವರಂತಹ ಮುಗ್ಧ ಪ್ರತಿಭೆಗಳು ಬರೋದ್ ಸೂಕ್ತ ಅಂತ ಹೇಳಲಾಗ್ತಿದೆ. ಇದೆಲ್ಲದರ ನಡುವೆ ಕಾಫಿನಾಡು ಚಂದು ಅವರ ಬಹು ದಿನಗಳ ಕನಸು ಈಗ ಈಡೇರಿದೆ. ಹೌದು ಅಪ್ಪು ಮತ್ತು ಶಿವಣ್ಣ ಅವರ ಅಪ್ಪಟ ಅಭಿಮಾನಿಯಾಗಿರೋ ಕಾಫಿನಾಡು ಚಂದು ಅವರಿಗೆ ಒಮ್ಮೆಯಾದ್ರು ಶಿವಣ್ಣ ಅವರನ್ನ ಭೇಟಿ ಮಾಡಿ ಮಾತಾಡಬೇಕು ಎಂಬುದು ಬಹುದೊಡ್ಡ ಆಸೆಯಾಗಿತ್ತು.

ಈ ಆಸೆಯನ್ನ ಜೀ಼ ಕನ್ನಡ ವಾಹಿನಿ ಈಡೇರಿಸಿದೆ. ರಿಯಾಲಿಟಿ ಶೋ ವೊಂದಕ್ಕೆ ಕಾಫಿನಾಡು ಚಂದು ಅವರನ್ನ ಕರೆಸಿ ಶಿವಣ್ಣ ಅವರನ್ನ ಮುಖಾ ಮುಖಿ ಭೇಟಿ ಮಾಡಿಸಿದೆ. ಅದರ ಶಿವಣ್ಣ ಅವರು ಕಾಫಿನಾಡು ಚಂದು ಅವರೊಟ್ಟಿಗೆ ಆತ್ಮೀಯವಾಗಿ ಮಾತನಾಡಿ ಅವರನ್ನ ಆಲಂಗಿಸಿಕೊಂಡಿದ್ದಾರೆ. ಈ ಮೂಲಕ ಕಾಫಿನಾಡು ಚಂದು ತಮ್ಮ ಕನಸನ್ನ ಈಡೇರಿಸಿಕೊಂಡಿದ್ದಾರೆ. ಅದರ ಜೊತೆಗೆ ನಿರೂಪಕಿ ಅನುಶ್ರೀ ಅವರ ಬರ್ಥ್ ಡೇ ಗೆ ತನ್ನದೇಯಾದ ಶೈಲಿಯಲ್ಲಿ ವಿಶ್ ಮಾಡಿದ್ದ ಚಂದು ಅವರಿಗೆ ನಿರೂಪಕಿ ಅನು ಶ್ರೀ ಅವರು ಸ್ಪೆಷಲ್ ವಾಚ್ ವೊಂದನ್ನ ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೋ ಮತ್ತು ವೀಡಿಯೋ ಇದೀಗ ಸೋಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Leave a Reply

%d bloggers like this: