ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್ ನಟಿ

ಚೊಚ್ಚಲ ಬಾರಿಗೆ ಗರ್ಭಿಣಿ ಆಗಿರೋ ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಇದೀಗ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದ ಬಿಪಾಶಾ ಬಸು ಅವರು ಇದೀಗ ಹೊಸದೊಂದು ಅವತಾರದಲ್ಲಿ ಮಿಂಚಿ ಸಂಭ್ರಮಿಸಿದ್ದಾರೆ. ಹೌದು ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಕುಟುಂಬದ ಸಂಪ್ರದಾಯದಂತೆ ಬೇಬಿ ಶವರ್ ಆಚರಣೆಯನ್ನ ಪಾಲಿಸಿದ್ದಾರೆ. ಈ ಬೇಬಿ ಶವರ್ ಪದ್ದತಿ ಒಂದು ರೀತಿ ನಮ್ಮಲ್ಲಿ ಸೀಮಂತ ಕಾರ್ಯಕ್ರಮ ಮಾಡುವ ಹಾಗೇ. ಮೂಲತಃ ಬಂಗಾಳಿ ಮೂಲದವರಾಗಿರೋ ಬಿಪಾಶಾ ಬಸು ಅವರ ಸಂಪ್ರದಾಯದಲ್ಲಿ ಈ ಒಂದು ಬೇಬಿ ಶವರ್ ಪದ್ದತಿಯನ್ನ ಆಚರಣೆ ಮಾಡಲಾಗುತ್ತದೆ. ಈ ಬೇಬಿ ಶವರ್ ಅಂದ್ರೆ ಬಂಗಾಳಿಯಲ್ಲಿ ಸಾಧ್ ಅಂತಾನೂ ಕರೆಯಲಾಗುತ್ತೆ.

ಈ ಪದ್ದತಿಯಲ್ಲಿ ಗರ್ಭಿಣಿಯರಿಗೆ ಅವರ ಆತ್ಮೀಯರೊಟ್ಟಿಗೆ ಬೆರೆತು ಅವರಿಚ್ಚೆಯ ಉಡುಗೆ ತೊಡುಗೆ ತೊಟ್ಟು ಇಷ್ಟದ ಭೋಜನ ಸವಿಯುವ ಆಚರಣೆಯಂತೆ. ಅದರಂತೆಯೇ ಬಿಪಾಶ ಬಸು ಅವರು ಸಹ ತಮ್ಮ ತಾಯಿ ಮತ್ತು ಅತ್ತೆಯೊಟ್ಟಿಗೆ ಕಾಲ ಕಳೆಯುತ್ತಾ ಇಷ್ಟರ ಊಟ ಸವಿದಿದ್ದಾರೆ. ಈ ಸಂಭ್ರಮಾಚಾರಣೆಯಲ್ಲಿ ಬಿಪಾಶ ಬಸು ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು ಕಂಗೊಳಿಸಿದ್ದಾರೆ. ಈ ಫೋಟೋಗಳನ್ನ ಬಿಪಾಶ ಬಸು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಬೆಂಗಾಲಿ ಭಾಷೆಯಲ್ಲಿ ಧನ್ಯವಾದಗಳು ತಾಯಿ ಎಂದು ಬರೆದುಕೊಂಡಿದ್ದಾರೆ. ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಬಿಪಾಶ ಬಸು ಇದೀಗ ಹಣೆಯಲ್ಲಿ ಕುಂಕುಮ ಮೈತುಂಬಾ ಸೀರೆಯುಟ್ಟು ಈ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚುತ್ತಿರುವ ಬಿಪಾಶ ಬಸು ಅವರನ್ನ ಕಂಡು ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: