ಚಿತ್ರೀಕರಣಕ್ಕೂ ಮೊದಲೇ 100 ಕೋಟಿ ಗಳಿಸಿದ ಶಾರುಖ್ ಖಾನ್ ಅವರ ಹೊಸ ಚಿತ್ರ

ಶೂಟಿಂಗ್ ನಡೆಯುತ್ತಿರೋವಾಗಲೇ ಶಾರುಖ್ ಖಾನ್ ಸಿನಿಮಾಗೆ ನೂರಾರು ಕೋಟಿ ಆಫರ್ ನೀಡಿದ ಓಟಿಟಿ! ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಸಿನಿಮಾಗಳು ಇತ್ತೀಚೆಗೆ ನಿರೀಕ್ಷೆ ಮಟ್ಟಕ್ಕೆ ರೀಚ್ ಆಗ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅವರ ನಟನೆಯ ಬಹುತೇಕ ಸಿನಿಮಾಗಳು ನೆಲಕಚ್ಚಿವೆ. ಆದರೆ ಇದೀಗ ಅವರ ಸಿನಿಮಾವೊಂದು ಇನ್ನೂ ಕೂಡ ಕೊನೆಯ ಹಂತದ ಶೂಟಿಂಗ್ ನಲ್ಲಿದೆ. ಆಗಲೇ ಶಾರುಖ್ ಅವರ ಈ ಚಿತ್ರಕ್ಕೆ ಓಟಿಟಿ ಸಂಸ್ಥೆಯೊಂದು ನೂರಾರು ಕೋಟಿ ಆಫರ್ ನೀಡಿದೆ. ಯಾವುದು ಆ ಸಿನಿಮಾ. ಯಾವ ಕಾರಣಕ್ಕಾಗಿ ಈ ಓಟಿಟಿ ಸಂಸ್ಥೆ ಶಾರುಖ್ ಖಾನ್ ಅವರ ಈ ಸಿನಿಮಾಗೆ ಅಷ್ಟೊಂದು ಮೊತ್ತ ನೀಡುವುದಕ್ಕಾಗಿ ಮುಂದೆ ಬಂದಿದೆ ಅನ್ನೋದನ್ನ ತಿಳಿಯೋಣ. ಎಲ್ಲರಿಗೂ ತಿಳಿಯದಂತೆ ಶಾರುಖ್ ಖಾನ್ ಅವರ ಸಿನಿಮಾಗಳು ಕೆಲವು ವರ್ಷಗಳಿಂದ ಸಕ್ಸಸ್ ಕಂಡಿಲ್ಲ.

ಸಕ್ಸಸ್ ಕಾಣದ ಹೀರೋಗಳ ಸಿನಿಮಾವನ್ನ ಯಾವುದೇ ಓಟಿಟಿ ಖರೀದಿ ಮಾಡಲು ಮುಂದೆ ಬರೋದಿಲ್ಲ. ಆದರೆ ಶಾರುಖ್ ಖಾನ್ ಸಿನಿಮಾ ಕೊಂಡುಕೊಳ್ಳಲು ಮುಂದೆ ಬಂದಿದೆ. ಅದಕ್ಕೆ ಕಾರಣ ಏನಪ್ಪಾ ಅನ್ನೋದಾದ್ರೆ ಡೈರೆಕ್ಟರ್ ಅಟ್ಲೀ ಕುಮಾರ್. ಶಾರುಖ್ ಖಾನ್ ಅವರಿಗೆ ಈಗ ಆಕ್ಷನ್ ಕಟ್ ಹೇಳ್ತಾ ಇರೋದು ತಮಿಳಿನ ಖ್ಯಾತ ಡೈರೆಕ್ಟರ್ ಅಟ್ಲೀ ಕುಮಾರ್. ಸಕ್ಸಸ್ ಫುಲ್ ಡೈರೆಕ್ಟರ್. ಇವರ ನಿರ್ದೇಶನದಲ್ಲಿ ಜವಾನ್ ಅನ್ನೋ ಸಿನಿಮಾ ಮೂಡಿಬರ್ತಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ಲೇಡಿ ಸೂಪರ್ ಸ್ಟಾರ್ ನಟಿ ನಯನಾತಾರಾ ಅವರು ನಟಿಸಿದ್ದಾರೆ. ಈಗಷ್ಟೇ ತೆರೆಕಂಡ ಅವರ ಗಾಡ್ ಫಾದರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

ಇವಿಷ್ಟು ಕಾರಣ ಒಂದು ಕಡೆಯಾದರೆ ಇನ್ನೊಂದು ಕಡೆ ಪ್ರೇಕ್ಷಕರು ಕೋವಿಡ್ ಲಾಕ್ ಡೌನ್ ಆದ ಸಂಧರ್ಭದಲ್ಲಿ ಎತೇಚ್ಚವಾಗಿ ಮನೆಯಲ್ಲಿಯೇ ಕೂತು ಸಿನಿಮಾ ನೋಡೋದಕ್ಕೆ ಅಡಿಕ್ಟ್ ಆಗಿದ್ದಾರೆ. ಇದರಿಂದ ಪ್ರೇಕ್ಷಕರು ಸಿನಿಮಾ ನೋಡಲು ಥಿಯೇಟರ್ ಕಡೆ ಬರುತ್ತಿಲ್ಲ. ಹೀಗಾಗಿ ಓಟಿಟಿಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಜವಾನ್ ಸಿನಿಮಾವನ್ನ ಅಟ್ಲೀ ಕುಮಾರ್ ಅವರು ನಿರ್ದೇಶನ ಮಾಡ್ತಿರೋದು ಮತ್ತು ನಯನಾತಾರ ನಟಿಯಾಗಿರೋದಕ್ಕೆ ಜವಾನ್ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ಶಾರುಖ್ ಖಾನ್ ಅವರ ಸಿನಿಮಾಗಳು ಸೋತ ಬಳಿಕ ಇದೀಗ ಅಟ್ಲೀ ಕುಮಾರ್ ಅವರ ಡೈರೆಕ್ಷನ್ ನಲ್ಲಿ ಬರ್ತಿರೋ ಜವಾನ್ ಸಿನಿಮಾಗಾಗಿ ಅವರ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜವಾನ್ ಸಿನಿಮಾ ವನ್ನ ಓಟಿಟಿ ದಿಗ್ಗಜ ಸಂಸ್ಥೆ ಆಗಿರೋ ಅಮೇಜಾನ್ ಪ್ರೈಮ್ ನವರು ಬರೋಬ್ಬರಿ ನೂರು ಕೋಟಿ ರೂಗೆ ಖರೀದಿ ಮಾಡಿದೆ. ಸದ್ಯಕ್ಕೆ ಜವಾನ್ ಸಿನಿಮಾದ ಅಂತಿಮ ಚಿತ್ರೀಕರಣ ರಾಜಸ್ಥಾನದಲ್ಲಿ ಭರದಿಂದ ಸಾಗುತ್ತಿದೆ.