ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ತಬಲಾ ನಾಣಿ ಮಗಳು.. ನೋಡಿ ಒಮ್ಮೆ ಎಷ್ಟು ಸುಂದರವಾಗಿದ್ದಾಳೆ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟನ ಪುತ್ರಿ ಇದೀಗ ಚಂದನವನದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಆಗುತ್ತಿದ್ದಾರೆ..! ಸಿನಿಮಾ ಕ್ಷೇತ್ರದಲ್ಲಿ ಸಿನಿಮಾ ಹಿನ್ನೆಲೆವುಳ್ಳ ಅನೇಕ ಪ್ರತಿಭಾವಂತ ಕಲಾವಿದರು ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರಲ್ಲಿ ಕೆಲವರನ್ನ ಕಲಾ ಸರಸ್ವತಿ ಕೈ ಹಿಡಿದಿದೆ. ಕೆಲವರಿಗೆ ಸಾಲು ಸಾಲು ಸಿನಿಮಾಗಳ ಸೋಲಿನ ಅನುಭವದ ಬಳಿಕ ಈ ಕ್ಷೇತ್ರ ನಮಗಲ್ಲ ಎಂದು ಬರಿ ಕೈಯಲ್ಲಿ ಹಿಂದಿರುಗಿ ಹೋದವರು ಕೂಡ ಇದ್ದಾರೆ. ಹಾಗಂತ ಸಿನಿಮಾ ಕ್ಷೇತ್ರಕ್ಕೆ ಬರುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಹೌದು ಕನ್ನಡ ಚಿತ್ರರಂಗದ ಅನೇಕ ಹಿರಿಯ ನಟ-ನಟಿಯರ ಮಕ್ಕಳು ಈಗಾಗಲೇ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅದರಂತೆ ಮಠ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹಾಸ್ಯ ನಟ ತಬಲಾನಾಣಿ ಅವರ ಪುತ್ರಿ ಕೂಡ ಸ್ಯಾಂಪಲ್ ವುಡ್ ಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ನಟಿಯಾಗಿ ಅಲ್ಲ. ಗಾಯಕಿ ಆಗಿ ಎಂಬುದು ವಿಶೇಷ.

ಹೌದು ತಬಲಾ ನಾಣಿ ಅವರು ಕಿರುತೆರೆ ಧಾರಾವಾಹಿಯ ಮೂಲಕ ಬಣ್ಣ ಹಚ್ಚಿದರು. ತದ ನಂತರ ಗುರು ಪ್ರಸಾದ್ ನಿರ್ದೇಶನದ ನವರಸ ನಾಯಕ ಜಗ್ಗೇಶ್ ಅಭಿನಯದ ಮಠ ಚಿತ್ರದಲ್ಲಿನಟಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದಲ್ಲಿ ತಮ್ಮ ಮೊಣಚಾದ ನಟನೆ ಮತ್ತು ಕುಡುಕನ ಪಾತ್ರದಲ್ಲಿ ಸಹಜವಾಗಿ ನಟಿಸುವ ಮೂಲಕ ತಬಲಾನಾಣಿ ಅವರು ಕನ್ನಡ ಸಿನಿ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡದಲ್ಲಿ ಅನೇಕ ಯಶಸ್ವಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ನಟ ಲಕ್ಷ್ಮಿ ನಾರಾಯಣ ಉರುಫ್ ತಬಲಾನಾಣಿ ಅವರು ಸುದೀಪ್,ದೃವಸರ್ಜಾ, ಶರಣ್, ಡಾರ್ಲಿಂಗ್ ಕೃಷ್ಣ, ಅಜಯ್ ರಾವ್, ಜಗ್ಗೇಶ್ ಹೀಗೆ ಅನೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಬೇಡಿಕೆಯ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ತಮ್ಮ ಪುತ್ರಿ ಚಿತ್ರ ಅವರನ್ನ ಕೂಡ ತಮ್ಮ ಜೊತೆಗೆ ಕರೆದುಕೊಂಡು ಬರುತ್ತಿದ್ದಾರೆ. ತಬಲಾನಾಣಿ ಅವರ ಪುತ್ರಿ ಚಿತ್ರ ಅವರು ಕಂಠದಾನ ಕಲಾವಿದರಾಗಿ ಒಂದಷ್ಟು ನಟಿಯರಿಗೆ ಧ್ವನಿ ನೀಡಿದ್ದಾರಂತೆ. ತಬಲಾನಾಣಿ ಅವರ ಪುತ್ರಿ ಚಿತ್ರ ಅವರು ನೋಡಲು ಗಮನ ಸೆಳೆಯುವಂತಿದ್ದು, ಚಿತ್ರ ಅವರು ಗಾಯಕಿಯಾಗಿ ಅಥವಾ ನಟಿಯಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಆದರೆ ಚಿತ್ರ ನಟನೆಯತ್ತ ಮುಖ ಮಾಡಿದರೆ ತಂದೆಗೆ ಸಿಕ್ಕ ಹಾಗೆ ಅವಕಾಶ ಸಿನಿ ಪ್ರೇಕ್ಷಕರ ಪ್ರೀತಿ ದೊರೆಯುತ್ತದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Reply

%d bloggers like this: