ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವೀರಪ್ಪನ್ ಮಗಳು.. ಹೇಗಿದ್ದಾಳೆ ನೋಡಿ ಒಮ್ಮೆ

ದಂತಚೋರನ ಪುತ್ರಿ ಈಗ ಕಾಲಿವುಡ್ ನಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕೊಂಡ್ರು ಅನ್ನುವ ಹಾಗೆ ಅನೇಕ ಮಂದಿ ತಮ್ಮ ಅಪ್ಪನೋ ಅಥವಾ ತಮ್ಮ ಅಜ್ಜ ಪೂರ್ವಿಕರು ಮಾಡುತ್ತಿದ್ದಂತಹ ಉದ್ಯೋಗ, ವೃತ್ತಿಗಳನ್ನು ಮುಂದುವರಿಸಿಕೊಂಡು ಬರುತ್ತಾರೆ. ಅವರಿಗೆ ಸ್ವಂತ ನಿರ್ಧಾರದ ನಿಲುವು ಎಂಬುದು ಇರುವುದಿಲ್ಲ. ತಮ್ಮದೇಯಾದ ನಿರ್ಧಾರವನ್ನು ತೆಗೆದುಕೊಂಡು ನಿರ್ಧಿಷ್ಟ ಗುರಿ ಸಾಧಿಸುವಂತಹ ಆಲೋಚನೆ ಅವರಲ್ಲಿ ಇರುವುದಿಲ್ಲ. ಆದರೆ ಕೆಲವರಲ್ಲಿ ಮಾತ್ರ ತಾನು ತಮ್ಮದೇಯಾದ ಸ್ವತಂತ್ರ ದಾರಿ ಕಟ್ಟಿಕೊಳ್ಳಬೇಕು ಎಂಬ ಉಮೇದು ಇರುತ್ತದೆ. ಅಂತಹವರ ಪೈಕಿ ಇದೀಗ ದಂತಚೋರ ವೀರಪ್ಪನ್ ಮಗಳು ಕೂಡ ಒಬ್ಬರಾಗಿದ್ದಾರೆ. ಹೌದು ತಮಿಳು ನಾಡು ಮತ್ತು ಕರ್ನಾಟಕ ಜೋಡಿ ರಾಜ್ಯಗಳಿಗೆ ಮೋಸ್ಟ್ ವಾಂಟೆಟ್ ಆಗಿದ್ದ ವೀರಪ್ಪನ್ ಅರಣ್ಯ ಸಂಪತ್ತನ್ನ ಕರಗಿಸುತ್ತಾ, ತನ್ನ ಗುರಿಗೆ ಅಡ್ಡ ಬಂದವರ ಜೀವ ತೆಗೆದು ನರ ಹಂತಕನಾಗಿ ಬದುಕಿದ್ದವನು.

ಸರಿ ಸುಮಾರು ಮೂವತ್ತಾರು ವರ್ಷಗಳ ಕಾಲ ದರೋಡೆ ಸುಲಿಗೆಯಲ್ಲಿ ತೊಡಗಿಕೊಂಡಿದ್ದ ವೀರಪ್ಪನ್ ಕರ್ನಾಟಕ, ತಮಿಳು ನಾಡು, ಕೇರಳ ರಾಜ್ಯದ ಗಡಿ ಭಾಗಗಳ ಕುರುಚಲು ಭೂಮಿ ಮತ್ತು ಕಾಡುಗಳಲ್ಲಿದ್ದ ಶ್ರೀ ಗಂಧದ ಮರಗಳ ಕಳ್ಳ ಸಾಗಾಣೆಕೆ ಮತ್ತು ಆನೆಗಳನ್ನು ಭೇಟಿ ಯಾಡಿ ಅವುಗಳ ದಂತಗಳನ್ನ ಮಾರಾಟ ಮಾಡುತ್ತಿದ್ದ. ಈತನಿಗೆ ಮದುವೆಯಾಗಿ ಮಕ್ಕಳು ಕೂಡ ಇದ್ದರು‌. ಈತನ ಹೆಂಡತಿಯ ಹೆಸರು ಮುತ್ತು ಲಕ್ಷ್ಮಿ. ವೀರಪ್ಪನ್ ಮತ್ತು ಮುತ್ತು ಲಕ್ಷ್ಮಿ ದಂಪತಿಗಳಿಗೆ ವಿಧ್ಯಾರಾಣಿ ಮತ್ತು ವಿಜಯಲಕ್ಷ್ಮಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವೀರಪ್ಪನ್ ಹಿರಿಯ ಪುತ್ರಿ ವಿಧ್ಯಾರಾಣಿ ಬಿಜೆಪಿ ಪಕ್ಷಕ್ಕೆ ಸೇರಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವಿಧ್ಯಾರಾಣಿ ಅವರು ಹೇಳುವಂತೆ ಅವರ ತಂದೆ ವೀರಪ್ಪನ್ ಅವರಿಗೂ ಕೂಡ ಸಮಾಜ ಸೇವೆ ಮಾಡಬೇಕು ಎಂಬ ಆಸೆ ಇತ್ತಂತೆ.

ಆದರೆ ಅವರು ಅದಕ್ಕೆ ಆಯ್ಕೆ ಮಾಡಿಕೊಂಡ ದಾರಿ ‌ಮಾತ್ರ ಬೇರೆ ಆಗಿತ್ತು ಎಂದು ಹೇಳಿದ್ದರು. ವೀರಪ್ಪನ್ ಅಂದಾಕ್ಷಣ ಇಂದಿಗೂ ಕೂಡ ಒಮ್ಮೆ ಎದೆ ಝಲ್ಲೆನ್ನುತ್ತದೆ. ಅಷ್ಟರ ಮಟ್ಟಗೆ ಅಟ್ಟಹಾಸ ಮೆರೆದಿದ್ದ ಕಾಡುಗಳ್ಳ ವೀರಪ್ಪನ್. ಅದರಂತೆ ಅವರು ಬಿಡಾರ ಹೂಡುತ್ತಿದ್ದ ಸುತ್ತ ಮುತ್ತ ಪ್ರದೇಶಗಳ ಜನರಿಗೆ ಸಹಾಯ ಕೂಡ ಮಾಡಿದ್ದಾರೆ. ಅದಕ್ಕಾಗಿ ಇಂದಿಗೂ ಆ ಭಾಗದ ಜನರು ವೀರಪ್ಪನ್ ಅವರನ್ನ ನೆನೆಯುತ್ತಾರೆ. ವೀರಪ್ಪನ್ ಹಿರಿಯ ಮಗಳು ರಾಜಕೀಯ ರಂಗ ಪ್ರವೇಶ ಮಾಡಿದರೆ, ಕಿರಿಯ ಪುತ್ರಿ ವಿಜಯಲಕ್ಷ್ಮಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೌದು ವಿಜಯಲಕ್ಷ್ಮಿ ಈಗಾಗಲೇ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮಾವೀರನ್ ಪಿಳ್ಳೈ ಎಂಬ ಚಿತ್ರದಲ್ಲಿ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೀರಪ್ಪನ್ ತಂಗಿದ್ದಂತಹ ಸತ್ಯಮಂಗಲ ಕಾಡಿನಲ್ಲಿ ನಡೆಯುತ್ತಿದೆ.

Leave a Reply

%d bloggers like this: