ಚಿತ್ರರಂಗಕ್ಕೆ ಮತ್ತೆ ಪ್ರವೇಶ ಮಾಡಲಿದ್ದಾರೆ ಒಂದು ಕಾಲದಲ್ಲಿ ಬಾಲನಟಿಯಾಗಿ ಮಿಂಚಿದ ಬೇಬಿ ಶಾಮಿಲಿ! ನೋಡಿ ಒಮ್ಮೆ ಈಗ ಹೇಗಿದ್ದಾಳೆ

20 ರ ದಶಕದಲ್ಲಿ ಚಂದನವನದ ಚೆಂದದ ಗೊಂಬೆಯಂತೆ ಮಿಂಚಿದ್ದ ಬಾಲ ನಟಿ ಇದೀಗ ಸ್ಟಾರ್ ನಟಿಯಾಗಿ ಮಿಂಚಲು ಸಾಧ್ಯವಾಗುತ್ತಿಲ್ಲ ಏಕೆ ಗೊತ್ತಾ..! ಕಲಾ ಸರಸ್ವತಿ ಎಲ್ಲರನ್ನ ಆಕರ್ಷಣೆ ಮಾಡುತ್ತಾಳೆ. ಆದರೆ ಅವರಲ್ಲಿ ಕೆಲವರನ್ನ ಮಾತ್ರ ತನ್ನಲ್ಲಿ ಹಿಡಿದಿಟ್ಟುಕೊಂಡು ಅವರನ್ನ ಪೋಷಿಸಿ ತಿದ್ದಿ ತೀಡಿ ಒಬ್ಬ ಉತ್ತಮ ಕಲಾವಿದನಾಗಿ ಮಾಡುತ್ತಾಳೆ. ಅದರಂತೆ ಕಲಾ ಸರಸ್ವತಿ ಅನುಗ್ರಹ ಪಡೆದ ಕಲಾವಿದರು ಕೂಡ ತಮ್ಮ ನಟನಾ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದು ಖ್ಯಾತಿ ಪಡೆಯುತ್ತಾರೆ. ಅದದಂತೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಕಲಾ ಸರಸ್ವತಿ ಒಲಿಸಿಕೊಂಡು ತನ್ನ ಮುದ್ದಾದ ನಟನೆಯ ಮೂಲಕ ದಕ್ಷಿಣ ಭಾರತ ಚಿತ್ರರಂಗದಾದ್ಯಂತ ಅಪಾರ ಪ್ರಸಿದ್ದತೆ ಪಡೆದ ಬಾಲ ನಟಿ ಅಂದರೆ ಅದು ಬೇಬಿ ಶ್ಯಾಮಿಲಿ. ಹೌದು ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಿರ್ದೇಶಕರಾದ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿ ಬಂದ ತಮಿಳಿನ ಅಂಜಲಿ ಚಿತ್ರದ ಮೂಲಕ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ತನ್ನ ಪುಟಾಣಿ ಹೆಜ್ಜೆ ಇಟ್ಟ ಮುದ್ದಾದ ಗೊಂಬೆ ಬೇಬಿ ಶ್ಯಾಮಿಲಿ.

ಈ ಚಿತ್ರದ ಮೂಲಕ ಪ್ರಾದೇಶಿಕ ಭಾಷೆಯ ಎಲ್ಲಾ ಸಿನಿಮಾಗಳಲ್ಲಿಯೂ ಅವಕಾಶ ಪಡೆದುಕೊಳ್ಳಲಾರಂಭಿಸಿದರು. ಬೇಬಿ ಶ್ಯಾಮಿಲಿಗೆ ಅಂಜಲಿ ಸಿನಿಮಾದಲ್ಲಿನ ಮಾನಸಿಕ ಅಸ್ವಸ್ಥ ಪಾತ್ರದ ಅಮೋಘ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸುತ್ತದೆ. ಬೇಬಿ ಶ್ಯಾಮಿಲಿ ಅವರ ತಂದೆ ಬಾಬು ಅವರಿಗೆ ತಾನೊಬ್ಬ ನಟನಾಗಬೇಕು ಎಂದು ಚಿತ್ರರಂಗದ ಸಂಪರ್ಕ ಬೆಳೆಸಿಕೊಂಡರಂತೆ. ಆದರೆ ತಮಗೆ ಆ ಅವಕಾಶ ಸಿಗದ ಕಾರಣ ತನ್ನ ಮಗಳು ಶ್ಯಾಮಿಲಿಗೆ ಅವಕಾಶ ದೊರೆಯುವಂತೆ ಮಾಡಿ ಶ್ರಮ ವಹಿಸುತ್ತಾರೆ. ಅದೃಷ್ಟ ಎಂಬಂತೆ ಮುದ್ದು ಪುಟಾಣಿ ಶ್ಯಾಮಿಲಿಗೆ ಬಣ್ಣದ ಲೋಕ ಕೈ ಹಿಡಿಯುತ್ತದೆ.

ಬೇಬಿ ಶ್ಯಾಮಿಲಿ ಕನ್ನಡದಲ್ಲಿ ಮೊದಲು ನಟಿಸಿದ ಸಿನಿಮಾ ಅಂದರೆ ಸಾಹಸ ಸಾಂಹ ಡಾ.ವಿಷ್ಣು ವರ್ಧನ್ ಅಭಿನಯದ ಮತ್ತೆ ಹಾಡಿತು ಕೋಗಿಲೆ ಸಿನಿಮಾದ ಮೂಲಕ. ಈ ಚಿತ್ರದಲ್ಲಿನ ಅಭಿನಯಕ್ಕೆ ಬೇಬಿ ಶ್ಯಾಮಿಲಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಬೆಸ್ಟ್ ಚೇಲ್ಡ್ ಆಕ್ಟ್ರೆಸ್ ಅವಾರ್ಡ್ ಲಭಿಸುತ್ತದೆ. ಇದಾದ ಬಳಿಕ ಶಾಂಭವಿ, ಭೈರವಿ, ಪೊಲೀಸ್ ಲಾಕಪ್ , ಶ್ವೇತಾಗ್ನಿ, ಚಿನ್ನ ನೀ ನಗುತಿರು, ಚಾಮುಂಡಿ ಹೀಗೆ ಅನೇಕ ಸಿನಿಮಾಗಳಲ್ಲಿ ಅಪಾರ ಜನಪ್ರಿಯತೆ ಗಳಿಸುತ್ತಾರೆ. ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ಶ್ಯಾಮಿಲಿ ತದ ನಂತರ ಸಿನಿಮಾ ನಟನಾವೃತ್ತಿಯನ್ನು ಮುಂದುವರಿಸಲು ನಾಯಕಿಯಾಗಿ 2009 ರಲ್ಲಿ ಸಿದ್ದಾರ್ಥ್ ಅವರೊಟ್ಟಿಗೆ ನಟಿಸಿದರು.

ಆದರೆ ಶ್ಯಾಮಿಲಿ ಅವರನ್ನು ಬಾಲ ನಟಿಯಾಗಿ ಒಪ್ಪಿದ ಸಿನಿ ಪ್ರೇಕ್ಷಕ ನಟಿಯಾಗಿ ಒಪ್ಪಲಿಲ್ಲ. ಸಿನಿಮಾ ಸೋತ ನಂತರ ಉನ್ನತ ಶಿಕ್ಷಣಕ್ಕಾಗಿ ಸಿಂಗಾಪುರ್ ತೆರಳಿ ಐದಾರು ವರ್ಷಗಳ ಕಾಲ ವಾಸವಿದ್ದರು. ತದ ನಂತರ ಮರಳಿ ಪ್ರಯತ್ನ ಮಾಡು ಎಂಬಂತೆ 2016 ರಲ್ಲಿ ವಲ್ಲೀಂತೇಟ್ಟಿಪುಲ್ಲಿಂತೇಟ್ಟಿ ಚಿತ್ರ,ನಂತರದಲ್ಲಿ 2017-18 ರಲ್ಲಿ ವೀರ ಶಿವಾಜಿ, ಅಮ್ಮಮ್ಮಗರಿಲ್ಲು ಸಿನಿಮಾಗಳಲ್ಲಿ ನಟಿಸಿದರು. ತಕ್ಕ ಮಟ್ಟಿಗೆ ಯಶಸ್ಸು ಪಡೆದ ಈ ಚಿತ್ರಗಳ ನಂತರ ಶ್ಯಾಮಿಲಿ ಅವರಿಗೆ ಮತ್ತೆ ಅವಕಾಶ ಸಿಗಲಿಲ್ಲ. ಅಚ್ಚರಿ ಅಂದರೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಒಂದು ಸಿನಿಮಾದಲ್ಲಿ ಶಿವಣ್ಣನ ತಂಗಿಯ ಪಾತ್ರಕ್ಕೆ ಶ್ಯಾಮಿಲಿಯವರನ್ನ ಕೇಳಿದಾಗ ಒಪ್ಪಲಿಲ್ಲವಂತೆ.

ಇದೀಗ ಯಾವ ಸಿನಿಮಾಗಳ ಅವಕಾಶ ಇಲ್ಲದೆ ಶ್ಯಾಮಿಲಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದು ತಮ್ಮ ಒಂದಷ್ಟು ಫೋಟೋಗಳನ್ನ ಶೇರ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: