ಚಿತ್ರರಂಗದಲ್ಲಿ ಯಶಸ್ವಿ ಪಯಣಕ್ಕೆ ಕಾರಣವಾದ ವಿಶೇಷ ವ್ಯಕ್ತಿಗೆ ಧನ್ಯವಾದ ತಿಳಿಸಿದ ಖ್ಯಾತ ನಟಿ ಸಮಂತಾ.. ಯಾರು ಗೊತ್ತಾ?

ಭಾರತೀಯ ಚಿತ್ರರಂಗದಲ್ಲಿ ಹನ್ನೆರಡು ವರ್ಷಗಳ ಯಶಸ್ವಿ ಪಯಣಕ್ಕೆ ಕಾರಣಕರ್ತರಾದ ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ ಸೌತ್ ಸಿನಿಮಾ ರಂಗದ ಆ್ಯಪಲ್ ಬ್ಯೂಟಿ…! ಹೌದು ಇತ್ತೀಚೆಗೆ ಸಿನೆಮಾ ರಂಗದಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾ ಭರ್ಜರಿ ಪೈಪೋಟಿ ಮಾಡುತ್ತಿವೆ. ಅದು ಚಿತ್ರದ ಕಥೆ ಮೇಕಿಂಗ್, ಬಜೆಟ್ ಹೀಗೆ ಎಲ್ಲದರಲ್ಲೂ ಕೂಡ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ಚಿತ್ರದ ನಿರ್ದೇಶಕರು, ನಿರ್ಮಾಪಕರು ಸಿನಿ‌ಮಾಗಳನ್ನು ತಯಾರು ಮಾಡುತ್ತಿದ್ದಾರೆ. ಅದರಂತೆ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳು ಕೂಡ ಹೆಜ್ಜೆ ಇಡುತ್ತಿದ್ದಾರೆ. ಅದರಲ್ಲಿಯೂ ನಟ-ನಟಿಯರಾಗಿ ಅಂತೂ ಸಾಲು ಸಾಲು ಕಲಾವಿದರು ಹೊಸ ಚಿತ್ರಗಳ ಮೂಲಕ ಹೊಸ ಪರಿಚಯ ಆಗುತ್ತಿದ್ದಾರೆ. ಇದು ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿರುವನಟ-ನಟಿ ಇಬ್ಬರಿಗೂ ಭಾರಿ ಪೈಪೋಟಿ ನೀಡಿದಂತಾಗುತ್ತದೆ. ಅದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಇತ್ತೀಚೆಗೆ ಬರುತ್ತಿರುವ ಹೊಸ ಪ್ರತಿಭೆಗಳು ನಟನೆ, ಡ್ಯಾನ್ಸ್, ಫೈಟ್ ಸೇರಿದಂತೆ ಸಿನಿಮಾ ಕ್ಷೇತ್ರಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ಬಂದಿರುತ್ತಾರೆ.

ಇವರ ಮುಂದೆ ಸ್ಟಾರ್ ನಟ-ನಟಿಯರು ತಮ್ಮ ಫಿಟ್ ನೆಸ್ ಕಾಪಾಡಿಕೊಂಡು ಅಪ್ ಡೇಟ್ ಆಗುತ್ತಿರಬೇಕಾಗುತ್ತಿರುತ್ತದೆ. ಅಂತೆಯೇ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ ದಶಕಗಳಿಗಿಂತ ಹೆಚ್ಚು ಕಾಲ ಆದ ನಂತರವೂ ಸಹ ತನ್ನ ಛಾಪನ್ನು ಉಳಿಸಿಕೊಂಡು ಇಂದಿಗೂ ಸಹ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ ದಕ್ಷಿಣ ಭಾರತ ಚಿತ್ರರಂಗದ ಆ್ಯಪಲ್ ಬ್ಯೂಟಿ ಅಂತಾನೇ ಕರೆಸಿಕೊಳ್ಳುವ ನಟಿ ಸಮಂತಾ. ದಶಕಗಳ ಕಾಲ ಸಿನಿಮಾ ರಂಗದಲ್ಲಿ ತಮ್ಮ ಜನಪ್ರಿಯತೆ ಕಾಪಾಡಿಕೊಂಡು ಬೇಡಿಕೆ ಉಳಿಸಿಕೊಳ್ಳುವುದು ಸಾಮಾನ್ಯವಾದ ವಿಷಯವಲ್ಲ. ಆದರೆ ನಟಿ ಸಮಂತಾ ಅವರು ಮಾತ್ರ ಗ್ಲಾಮರ್ ಮತ್ತು ಡಿ ಗ್ಲಾಮರ್ ಅಂತಹ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರ ಮನದಲ್ಲಿ ಗಟ್ಟಿಯಾದ ಸ್ಥಾನ ಪಡೆದುಕೊಂಡಿದದ್ದಾರೆ. 2010 ರಲ್ಲಿ ಏ ಮಾಯಾ ಚೇಸವೇ ಚಿತ್ರದಲ್ಲಿ ನಾಗ ಚೈತನ್ಯ ಅವರೊಟ್ಟಿಗೆ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಂತಾ ಈ ಚಿತ್ರದ ಯಶಸ್ಸಿನ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ.

ಇತ್ತೀಚೆಗೆ ತೆರೆಕಂಡ ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದಲ್ಲಿ ಹ್ಞೂ ಅಂತೀಯಾ ಮಾವ ಹ್ಞೂ ಹ್ಞೂ ಅಂತೀಯಾ ಮಾವ ಎಂಬ ಸ್ಪೆಶಲ್ ಹಾಡಿನಲ್ಲಿ ಗೆಸ್ಟ್ ಅಪಿರಿಯೆನ್ಸ್ ಆಗಿ ಸಖತ್ ಬೋಲ್ಡ್ ಸ್ಟೆಪ್ ಹಾಕುವ ಮೂಲಕ ನಟಿ ಸಮಿತಿ ಅವರು ಸದ್ಯಕ್ಕೆ ಸೌತ್ ಸಿನಿ ರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿ ತಮ್ಮ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಇನ್ನ ನಟಿ ಸಮಂತಾ ಅವರು ಇತ್ತೀಚೆಗೆ ತಾನೇ ಸಿನಿ ವೃತ್ತಿ ಜರ್ನಿಗೆ ಬಂದು ಹನ್ನೆರಡು ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಸಮಿತಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಬಣ್ಣದ ಲೋಕದ ವೃತ್ತಿ ಜೀವನದ ಪಯಣದಲ್ಲಿ ಜೊತೆಯಾದ ನಿಜವಾದ ಅಭಿಮಾನಿಗಳಿಗೆಲ್ಲಾ ತುಂಬಾ ಹೃದಯದ ಧನ್ಯವಾದಗಳು ಹೀಗೆ ನಿಮ್ಮ ಪ್ರೀತಿ ವಿಶ್ವಾಸ ಇರಲಿ ಎಂದು ಬರೆದುಕೊಂಡಿದ್ದಾರೆ. ಅದರಂತೆ ಅವರ ಫ್ಯಾನ್ಸ್ ಕೂಡ ಸಮಂತಾ ಅವರಿಗೆ ಅಭಿನಂದನೆ ತಿಳಿಸಿ ಮುಂದಿನ ಚಿತ್ರಗಳಿಗೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: