ಚಿತ್ರಮಂದಿರಗಳಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕ ನಂತರ ಈಗ ಓಟಿಟಿಯಲ್ಲಿ ಈ ದಿನ ಬಿಡುಗಡೆ ಆಗುತ್ತಿದೆ ಗಾಳಿಪಟ2 ಚಿತ್ರ

ಗಾಳಿಪಟ2 ಸಿನಿಮಾ ಇದೀಗ ಓಟಿಟಿಯಲ್ಲಿ ಬರಲು ಸಜ್ಜಾಗಿದೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಗಾಳಿಪಟ2 ಸಿನಿಮಾ ಆಗಸ್ಟ್ 12ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿ ಸಿನಿಮಾ ಆದ ಕಾರಣ ನಿರೀಕ್ಷೆ ಕೂಡ ತುಸು ಹೆಚ್ಚಾಗಿತ್ತು. ಅದಲ್ಲದೆ ಗಾಳಿಪಟ2 ಸಿನಿಮಾ ದಶಕದ ಹಿಂದೆ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಗಾಳಿಪಟ ಸಿನಿಮಾದ ಎರಡನೇ ಭಾಗ ಅಂತ ವಿಶೇಷವಾದ ಕುತೂಹಲ ಕೂಡ ಇತ್ತು. ಹಾಗಾಗಿ ಗಾಳಿಪಟ2 ಚಿತ್ರದ ಬಗ್ಗೆ ಸಿನಿ ಪ್ರಿಯರಿಗೆ ಅಪಾರವಾದ ನಿರೀಕ್ಷೆ ಇತ್ತು‌. ಅದರಂತೆ ಗಾಳಿಪಟ2 ಸಿನಿಮಾ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು ಮೆಚ್ಚುಗೆ ಪಡೆದುಕೊಂಡಿತು.

ಜೊತೆಗೆ ಒಳ್ಳೆಯ ಕಲೆಕ್ಷನ್ ಮಾಡೋದರ ಜೊತೆಗೆ ಸ್ಯಾಟಲೈಟ್, ಡಿಜಿಟಲ್ ಮತ್ತು ಆಡಿಯೋ ರೈಟ್ಸ್ ಅಂತ ಉತ್ತಮವಾಗಿ ಹಣಕಾಸು ವಹಿವಾಟು ಸಹ ನಡೆಸಿತ್ತು. ಇದರಿಂದಾಗಿ ನಿರ್ಮಾಪಕ ರಮೇಶ್ ರೆಡ್ಡಿ ಕೂಡ ಸಂತಸವಾಗಿದ್ದರು. ಗಾಳಿಪಟ2 ಸಿನಿಮಾದಲ್ಲಿ ಗಣೇಶ್ ಜೊತೆಗೆ ದಿಗಂತ್, ಲೂಸಿಯಾ ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ ಮತ್ತು ರಂಗಾಯಣ ರಘು, ಅನಂತ್ ನಾಗ್ ಸೇರಿದಂತೆ ಬಹುದೊಡ್ಡ ತಾರಾ ಬಳಗ ಇತ್ತು. ಇದೀಗ ಗಾಳಿಪಟ2 ಸಿನಿಮಾ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದಂತೆಯೇ ಓಟಿಟಿ ನಲ್ಲಿಯೂ ಕೂಡ ಮೋಡಿ ಮಾಡಲು ಬರುತ್ತಿದೆ‌. ಹೌದು ಗಾಳಿ ಪಟ2 ಸಿನಿಮಾದ ಓಟಿಟಿ ಹಕ್ಕನ್ನ ಜೀ಼5 ಸಂಸ್ಥೆ ಪಡೆದುಕೊಂಡಿತ್ತು. ಅದರಂತೆ ಇದೇ ಅಕ್ಟೋಬರ್ 5ರಂದು ಜೀ಼5 ನಲ್ಲಿ ಗಾಳಿಪಟ2 ಸಿನಿಮಾ ಪ್ರಸಾರ ಆಗ್ತಿದೆ. ಇದು ಗಣೇಶ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಅಂತ ಹೇಳ್ಬೋದಾಗಿದೆ. ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ2 ಸಕ್ಸಸ್ ನಂತರ ತ್ರಿಬರ್ ರೈಡಿಂಗ್ ಚಿತ್ರದ ಪ್ರಮೋಶನ್ ನಲ್ಲಿ ಬಿಝಿ಼ ಆಗಿದ್ದಾರೆ.

Leave a Reply

%d bloggers like this: