ಚಿತ್ರದ ಅದ್ಬುತ ಯಶಸ್ಸನ್ನು ಸಂಭ್ರಮಿಸೋಕೆ ವಿದೇಶಕ್ಕೆ ಹಾರಿದ ರಕ್ಷಿತ್ ಶೆಟ್ಟಿ ಹಾಗೂ ಟೀಮ್

ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿಬಂದ ಈ 777 ಚಾರ್ಲಿ ಸಿನಿಮಾ ಪಂಚ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿ ಎಲ್ಲೆಡೆ ಅಪಾರ ಮೆಚ್ಚುಗೆ ಗಳಿಸಿತು. ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕ್ಲೈಮ್ಯಾಕ್ಸ್ ನಲ್ಲಿ ಕಣ್ಣೀರಾಕಿ ಹೊರ ಬರುವ ಮಟ್ಟಿಗೆ 777 ಚಾರ್ಲಿ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತು. ವಿಶೇಷವಾಗಿ ಶ್ವಾನದ ನಟನೆಗಾಗಿ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. 777 ಚಾರ್ಲಿ ಸಿನಿಮಾ ಜುಲೈ 29ಕ್ಕೆ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿತು. ಈ ಹಿನ್ನೆಲೆಯಲ್ಲಿ ನಿರ್ಮಾಪಕರಾದ ರಕ್ಷಿತ್ ಶೆಟ್ಟಿ ಓಟಿಟಿಗೆ 777 ಚಾರ್ಲಿ ಸಿನಿಮಾವನ್ನ ನೀಡಿ ಉತ್ತಮ ಆದಾಯವನ್ನು ಕೂಡ ಮಾಡಿಕೊಂಡರು.

ಅದರ ಜೊತೆಗೆ 777 ಚಾರ್ಲಿ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿಯೇ ಬರೋಬ್ಬರಿ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು. ಕನ್ನಡದಲ್ಲಿ ಕೆಜಿಎಫ್2 ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾ ಆಗಿ ನೂರು ಕೋಟಿ ಕ್ಲಭ್ ಸೇರಿದ ಕನ್ನಡದ ಸಿನಿಮಾವಾಗಿ 777 ಚಾರ್ಲಿ ಹೊರ ಹೊಮ್ಮಿತು. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಭಾಂಧವ್ಯದ ಕುರಿತು ಭಾವನಾತ್ಮಕ ಕಥಾಹಂದರ ಹೊಂದಿದ್ದ ಈ 777 ಚಾರ್ಲಿ ಸಿನಿಮಾ ಪ್ರತಿಯೊಬ್ಬರನ್ನ ಕಾಡಿಸಿತ್ತು. ನಟ ರಕ್ಷಿತ್ ಶೆಟ್ಟಿ ಅವರು ಚಿತ್ರ 25ದಿನ ಪೂರೈಸಿದ ಪತ್ರಿಕಾಗೋಷ್ಠಿ ಕರೆದು ತಮ್ಮ ಚಿತ್ರ ಯಶಸ್ವಿಯಾಗಿದ್ದಕ್ಕಾಗಿ ಬಂದಂತಹ ಲಾಭಾಂಶದಲ್ಲಿ ತಮ್ಮ ಚಿತ್ರತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಕೂಡ ಶೇಕಡ 5ರಷ್ಟು ಮೊತ್ತವನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದರು‌.

ಅದರಂತೆ ಇದೀಗ 777 ಚಾರ್ಲಿ ಚಿತ್ರತಂಡ ಥೈಲ್ಯಾಂಡ್ ಪ್ರವಾಸ ಕೈಗೊಂಡು ಚಿತ್ರದ ಯಶಸ್ಸನ್ನ ಸಂಭ್ರಮ ಪಡುತ್ತಿದ್ದಾರೆ. ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿ ನಿರ್ದೇಶಕ ಕಿರಣ್ ರಾಜ್ ಅವರು ಶಾಂತಿ ಮತ್ತು ನಗು ಯಶಸ್ಸಿನ ನಂತರ ಎಂದು ಬರೆದುಕೊಂಡಿದ್ದಾರೆ. ಇನ್ನು 777 ಚಾರ್ಲಿ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ವೂಟ್ ನಲ್ಲಿ ರಿಲೀಸ್ ಆಗಿದ್ದು, ಥಿಯೇಟರ್ ನಲ್ಲಿ 777 ಚಾರ್ಲಿ ಸಿನಿಮಾವನ್ನು ನೋಡದಿದ್ದವರು ನಿಮ್ಮ ಮನೆಯಲ್ಲಿಯೇ ಕೂತು ವೂಟ್ ನಲ್ಲಿ ಚಾರ್ಲಿ ಸಿನಿಮಾವನ್ನು ನೋಡಬಹುದಾಗಿದೆ. ಒಟ್ಟಾರೆಯಾಗಿ ನಟ ರಕ್ಷಿತ್ ಶೆಟ್ಟಿ ಅವರು 777 ಚಾರ್ಲಿ ಚಿತ್ರದ ಯಶಸ್ಸಿನಲ್ಲಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಲಿದ್ದಾರೆ.

Leave a Reply

%d bloggers like this: