ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ ಗಾಡ್ ಫಾದರ್ ಚಿತ್ರ ನಾಲ್ಕು ದಿನದಲ್ಲಿ ಗಳಿಸಿದ್ದೆಷ್ಟು

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರ ಗಾಡ್ ಫಾದರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಕಳೆದ ವಾರ ಅಂದರೆ ಅಕ್ಟೋಬರ್ 5ರಂದು ಅದ್ದೂರಿಯಾಗಿ ವರ್ಲ್ಢ್ ವೈಡ್ ರಿಲೀಸ್ ಆದ ಗಾಡ್ ಫಾದರ್ ಸಿನಿಮಾ ನಿರೀಕ್ಷೆಗೂ ಮೀರಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಆಚಾರ್ಯ ಸಿನಿಮಾದ ಅಟ್ಲರ್ ಪ್ಲಾಫ್ ಆದ ನಂತರ ಚಿರಂಜೀವಿ ಅವರಿಗೆ ಗಾಡ್ ಫಾದರ್ ಸಿನಿಮಾ ಎನರ್ಜಿ ಬೂಸ್ಟ್ ಅಂತಾನೇ ಹೇಳ್ಬೋದು. ಗಾಡ್ ಫಾದರ್ ಸಿನಿಮಾ ದಸರಾ ಹಬ್ಬದ ಸಂಧರ್ಭದಲ್ಲಿ ರಿಲೀಸ್ ಆದ ಕಾರಣ ಎಲ್ಲಾ ಸೆಂಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ‌. ಈ ಗಾಡ್ ಫಾದರ್ ಸಿನಿಮಾಗೆ ಮೋಹನ್ ರಾಜ ಆಕ್ಷನ್ ಕಟ್ ಹೇಳಿದ್ದು, ಪ್ರಮುಖ ತಾರಾಗಣದಲ್ಲಿ ಚಿರಂಜೀವಿ, ಸಲ್ಮಾನ್ ಖಾನ್, ನಯನತಾರಾ, ಸತ್ಯದೇವ್ ನಟಿಸಿದ್ದಾರೆ.

ಈ ಚಿತ್ರ 2019 ರಲ್ಲಿ ತೆರೆಕಂಡ ಮಲೆಯಾಳಂ ಲೂಸಿಫರ್ ಸಿನಿಮಾದ ರೀಮೆಕ್ ಆಗಿದೆ. ಇದೊಂದು ಪೊಲಿಟಿಕಲ್ ಆಕ್ಷನ್ ಡ್ರಾಮಾ ಆಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ. ಬರೋಬ್ಬರಿ ತೊಂಭತ್ತು ಕೋಟಿ ವೆಚ್ಚದಲ್ಲಿ ತಯಾರಾದ ಗಾಡ್ ಫಾದರ್ ಸಿನಿಮಾ ಇದುವರೆಗೆ ಸರಿ ಸುಮಾರು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತೆಲುಗಿನಲ್ಲಿ ಗಾಡ್ ಫಾದರ್ ಸಿನಿಮಾಗೆ ಕೋನಿಡೆಲಾ ಪ್ರೊಡಕ್ಷನ್ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರಾಮ್ ಚರಣ್ ಮತ್ತು ಆರ್.ಬಿ.ಚೌದರಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಮೋಹನ ರಾಜಾ ನಿರ್ದೇಶನ, ಚಿತ್ರಕಥೆ ಮಾಡಿದ್ದು, ಎಸ್ ತಮನ್ ರಾಗ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ಕ್ಯಾಮೆರಾ ಕೆಲಸವನ್ನ ನೀರವ್ ಶಾ ಮಾಡಿದ್ದಾರೆ. ಸದ್ಯಕ್ಕೆ ಆಚಾರ್ಯ ಸಿನಿಮಾ ಮಾಡಿ ಸೋತಿದ್ದ ಚಿರಂಜೀವಿ ಅವರಿಗೆ ಗಾಡ್ ಫಾದರ್ ಸಿನಿಮಾ ಭರ್ಜರಿ ಸಕ್ಸಸ್ ನೀಡಿದೆ ಅಂತ ಹೇಳ್ಬೋದು.

Leave a Reply

%d bloggers like this: