ಚಿನ್ನ, ಬೆಳ್ಳಿ ಯಿಂದ ದುರ್ಗಮ್ಮ ದೇವಿಗೆ ತುಲಾಭಾರ ಮಾಡಿಸಿದ ಜನಾರ್ಧನ್ ರೆಡ್ಡಿ! ಸುಮಾರು ಎಷ್ಟು ಹಣ ಗೊತ್ತಾ? ನೋಡಿ ಒಮ್ಮೆ

ಗಡಿಪಾರಾಗಿದ್ದ ಗಣಿಧಣಿ ಜನಾರ್ಧನ ರೆಡ್ಡಿ ತಮ್ಮ 55 ನೇ ಜನ್ಮದಿನದ ಪ್ರಯುಕ್ತ ಬಳ್ಳಾರಿಯ ದುರ್ಗಮ್ಮ ದೇವಾಲಯದಲ್ಲಿ ದೇವಿಗೆ ತುಲಾಭಾರ ಮಾಡಿಸಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ ಅವರು ರಾಜಕೀಯ ವಿಚಾರಗಳಿಗೆ ಹೊರತು ಪಡಿಸಿ ಇನ್ನಿತರ ಒಂದಲ್ಲ ಒಂದು ವಿಷಯವಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಅಕ್ರಮ ಆಸ್ತಿ ಮಿತಿ ಮೀರಿದ ಆದಾಯ ಗಳಿಕೆ ಆರೋಪದಡಿ ಕಾರಾಗೃಹ ಸೇರಿದ್ದ ಜನಾರ್ದನ ರೆಡ್ಡಿ ಕೆಲವು ವರ್ಷಗಳಿಂದೀಚೆಗೆ ಹೊರ ಬಂದಿದ್ದಾರೆ. ಇನ್ನು ಜೈಲಿನಿಂದ ಹೊರ ಬಂದ ಬಳಿಕ ಅನೇಕ ಧಾರ್ಮಿಕ ಸ್ಥಳಗಳಿಗೆ ಕುಟುಂಬ ಸಮೇತರಾಗಿ ಭೇಟಿ ಕೊಡುತ್ತಿರುವ ಜನಾರ್ದನ ರೆಡ್ಡಿ ಅವರು ತಮ್ಮ ಹರಕೆ ಸೇವೆ ಸಲ್ಲಿ ಸುತ್ತಿದ್ದಾರೆ. ಅದರಂತೆ ತಮ್ಮ ಐವತ್ತೈದನೇ ಹುಟ್ಟು ಹಬ್ಬದ ಪ್ರಯುಕ್ತ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಸಕುಂಟುಂಬ ಸಮೇತರಾಗಿ ಭೇಟಿ ನೀಡಿ ತಾಯಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯದ ರೂಪದಲ್ಲಿ ತುಲಾಭಾರ ಮಾಡಿ ಸೇವೆ ಸಲ್ಲಿಸಿದ್ದಾರೆ.

ಈ ದೇವರ ಕಾರ್ಯ ಸಂಧರ್ಭದಲ್ಲಿ ಜನಾರ್ಧನ ರೆಡ್ಡಿ ಅವರ ಜೊತೆಗೆ ಸ್ನೇಹಿತರಾದ ಸಾರಿಗೆ ಸಚಿವ ಶ್ರೀ ರಾಮುಲು, ಶಾಸಕರಾದ ಸೋಮಶೇಖರ ರೆಡ್ಡಿ ಭಾಗವಹಿಸಿದ್ದರು. ಇನ್ನು ಇತ್ತೀಚೆಗೆ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ
ಸ್ಯಾಂಡಲ್ ವುಡ್ ಹೆಜ್ಜೆ ಇಡುತ್ತಿದ್ದಾರೆ ಎಂಬುದು ಭಾರಿ ಸುದ್ದಿ ಆಗುತ್ತಿದೆ. ಈ ಸಿನಿಮಾಗೆ ಮಾಯಾ ಬಜಾ಼ರ್ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ರಾಧಾಕೃಷ್ಣ ಆಕ್ಶನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ ಪ್ರೋಡಕ್ಷನ್ ಕೆಲಸ ಕಾರ್ಯಗಳು ಸಿದ್ದವಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ ದೈವಭಕ್ತರಾಗಿರುವ ಜನಾರ್ದನ ರೆಡ್ಡಿ ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯ ಮತ್ತು ತನ್ನ ಪುತ್ರನ ಸಿನಿಮಾರಂಗದ ಕನಸಿಗೆ ಒಳ್ಳೇದಾಗಲಿ ಎಂದು ಪ್ರಸಿದ್ದ ಎಲ್ಲಾ ದೇವಾಲಯಗಳಿಗೂ ಬೇಟಿ ನೀಡಿ ದೇವರ ಅನುಗ್ರಹ ಪಡೆಯುತ್ತಿದ್ದಾರೆ. ಸದ್ಯಕ್ಕೆ ಬಿಜೆಪಿ ಪಕ್ಷದಲ್ಲಿರುವ ಜನಾರ್ದನ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ರಾಜಕೀಯವಾಗಿ ಸಕ್ರೀಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂಬುದನ್ನ ಕಾದು ನೋಡಬೇಕಾಗಿದೆ. ಬಳ್ಳಾರಿಯಲ್ಲಂತೂ ಜನಾರ್ಧನ ರೆಡ್ಡಿ ಅವರ ಅಭಿಮಾನಿಗಳಿಗೆ ತಮ್ಮ ನಾಯಕ ಮತ್ತೆ ಹೊಸ ಉತ್ಸಾಹದೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆಸಂತೋಷ ಪಡುತ್ತಿದ್ದಾರೆ.