ಚಿಕ್ಕಣ್ಣನೇ ನನಗೆ ಪರ್ಪೆಕ್ಟ್ ಮ್ಯಾಚ್ ಆಗೋದು: ಖ್ಯಾತ ನಟಿ

ನನಗೆ ಸೂಕ್ತವಾದ ನಟ ಅಂದರೆ ಅದು ಚಿಕ್ಕಣ್ಣ ಮಾತ್ರ ಎಂದು ನಾಚಿ ನಗೆ ಬೀರಿದ ಸ್ಯಾಂಡಲ್ ವುಡ್ ಭರವಸೆಯ ಯುವ ನಟಿ..! ನಟಿಸಾಮಾನ್ಯವಾಗಿ 90 ರ ದಶಕದ ಸಿನಿಮಾಗಳಲ್ಲಿ ಚಿತ್ರದ ನಾಯಕ ನಟ-ನಟಿಯರಿಗೆ ನೀಡುವಂತಹ ಪ್ರಾಧನ್ಯತೆ, ಪ್ರಾಮುಖ್ಯತೆಯನ್ನು ಎಲ್ಲಾ ಪಾತ್ರಗಳಿಗೂ ನೀಡಲಾಗುತ್ತಿತ್ತು.ಪೋಷಕ ಪಾತ್ರಗಳ ಪೋಷಣೆ ಕೂಡ ಅಷ್ಟೇ ಎಚ್ಚರಿಕೆಯಿಂದಾಗಿ ನಿರ್ವಹಣೆ ಮಾಡಲಾಗುತ್ತಿತ್ತು.ಸಿನಿಮಾದ ಕಥೆಯಲ್ಲಿ ಬರುವ ನಾಯಕ-ನಾಯಕಿಯ ಪಾತ್ರಗಳು ಹೆಚ್ಚು ಹಾಸ್ಯ ವ್ಯಕ್ತಿತ್ವವುಳ್ಳ ಪಾತ್ರಗಳಾಗುತ್ತಿರಲಿಲ್ಲ.ಹಾಸ್ಯಕ್ಕೇ ಅಂತಾನೇ ಒಂದಷ್ಟು ಪಾತ್ರಗಳನ್ನು ನಿರ್ದೇಶಕರು ಸೃಷ್ಟಿಸುತ್ತಿದ್ದರು.ಅದರಂತೆ ಆ ಹಾಸ್ಯ ಪಾತ್ರಗಳಿಗೆ ಕೆಲವು ಜೋಡಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು.ಚಿತ್ರಕಥೆಯ ಮಧ್ಯಭಾಗದಲ್ಲಿ ಅಗತ್ಯವಿದ್ದಾಗ ಆ ಹಾಸ್ಯ ನಟರ ಕಾಂಬಿನೇಶನ್ ಪ್ರೇಕ್ಷಕರಿಗೆ ಕಚಗುಳಿ ನೀಡುತ್ತಿತ್ತು.

ಈ ರೀತಿಯ ಸಿನಿಮಾ ಕ್ರಮ ಅಂದಿನ ದಿನಮಾನಗಳಲ್ಲಿ ರೂಢಿಯಲ್ಲಿತ್ತು.ಜೊತೆಗೆ ಹಾಸ್ಯ ಕಲಾವಿದರ ಜೋಡಿಗಳ ಒಂದಷ್ಟು ಕಲಾವಿದರ ದಂಡೇ ಇದ್ದರು.ಉದಾಹರಣೆಗೆ ಎನ್.ಎಸ್.ರಾವ್ ಮತ್ತು ಉಮಾಶ್ರೀ,ದೊಡ್ಡಣ್ಣ ಮತ್ತು ಗಿರಿಜಾ ಲೋಕೇಶ್, ಟೆನ್ನಿಸ್ ಕೃಷ್ಣ ಮತ್ತು ರೇಖಾದಾಸ್,ಸಾಧು ಕೋಕೀಲ ಮತ್ತು ರೇಖಾದಾಸ್,ಕರಿಬಸವಯ್ಯ ಮತ್ತು ಉಮಾಶ್ರೀ ಹೀಗೆ ಸಾಲು ಸಾಲು ಹಾಸ್ಯ ಕಲಾವಿದರ ಜೋಡಿ ಸಿನಿಮಾಗಳಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತಿದ್ದರು.ಆದರೆ ದಶಕಗಳ ನಂತರ ಬಂದ ಸಿನಿಮಾಗಳಲ್ಲಿ ಹೀರೋಗಳೇ ಹಾಸ್ಯ ಮಾಡಲು ಶುರು ಮಾಡಿದರು.ಇಂತಹ ಸಂಪ್ರದಾಯ ಆಗಮನವಾದಾಗ ಹಾಸ್ಯ ಕಲಾವಿದರ ಜಾಗಕ್ಕೆ ಹೀರೋಗಳೇ ಆ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸುವಂತಾಯಿತು.

ಹೀಗಾಗಿ ಈ ರೀತಿಯ ಹಾಸ್ಯ ಕಲಾವಿದರ ಜೋಡಿಯನ್ನು ಈಗಿನ ತಲೆಮಾರಿನ ಸಿನಿಮಾಗಳಲ್ಲಿ ಕಾಣುವುದು ಬಲು ಅಪರೂಪವಾಯಿತು.ಇದಕ್ಕೆ ತದ್ವಿರುದ್ದವಾಗಿ ಬಂದ ಸಿನಿಮಾಗಳಲ್ಲೊಂದಾದ ಚಿತ್ರ ಶರಣ್ ಅಭಿನಯದ ಅಧ್ಯಕ್ಷ ಚಿತ್ರ.ನಂದಕಿಶೋರ್ ನಿರ್ದೇಶನದಲ್ಲಿ ತೆರೆಕಂಡ ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಶನ್ ಸೂಪರ್ ಹಿಟ್ ಆಗಿತ್ತು.ಶರಣ್ ಗೆ ನಾಯಕಿಯಾಗಿ ರಕ್ಷಾ ಕಾಣಿಸಿಕೊಂಡರೆ,ಚಿಕ್ಕಣ್ಣಗೆ ಆರೋಹಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.ಚಿಕ್ಕಣ್ಣ ಮತ್ತು ಆರೋಹಿತಾ ಜೋಡಿ ಅಧ್ಯಕ್ಷ ಸಿನಿಮಾದಲ್ಲಿ ಯಶಸ್ವಿಯಾಗಿತ್ತು.ಸಿನಿ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಕೂಡ ನೀಡಿತ್ತು.

ನಟಿ ಆರೋಹಿತಾ ಅವರಿಗೆ ಅಧ್ಯಕ್ಷ ಸಿನಿಮಾದ ನಂತರ ಯಾವ ಚಿತ್ರಗಳು ಕೂಡ ಹೇಳಿಕೊಳ್ಳುವಷ್ಟು ಹೆಸರು ತಂದುಕೊಡಲಿಲ್ಲ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರದಲ್ಲಿ ಸಾಧುಕೋಕಿಲ ಅವರ ಜೊತೆ ನಟಿಸಿದ ಆರೋಹಿತಾ ಅವರಿಗೆ ಸಾಧುಕೋಕಿಲ ಅವರೊಟ್ಟಿಗೆ ನಟಿಸಿದ್ದು ವಯಸ್ಸಿನ ಅಂತರದ ವಿಚಾರವಾಗಿ ಕೊಂಚ ಸೂಕ್ತ ಅನಿಸಿಲ್ಲವಂತೆ.ನಟಿ ಆರೋಹಿತಾ ಅವರಿಗೆ ದರ್ಶನ್,ಸುದೀಪ್,ಯಶ್,ಗಣೇಶ್ ಹೀಗೆ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಬೇಕು ಎಂಬ ಮಹಾದಾಸೆ ಇದೆಯಂತೆ. ಹಾಸ್ಯನಟರಾದ ರಂಗಾಯಣ ರಘು ಅವರೊಟ್ಟಿಗೆ ತೆರೆ ಹಂಚಿಕೊಳ್ಳಬೇಕು ಎಂಬ ಇಚ್ಚೆ ಕೂಡ ಇದೆಯಂತೆ.

ಹೀಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ನಿರೂಪಕರು ಆರೋಹಿತಾ ಅವರಿಗೆ ಯಾವ ಹಾಸ್ಯ ನಟರೊಂದಿಗೆ ನಟಿಸಲು ಇಷ್ಟ ಪಡುತ್ತೀರಿ ಎಂಬ ಪ್ರಶ್ನೆಗೆ ನಗೆ ಬೀರುತ್ತಾ ನನ್ನ ಹೈಟೂ ಪರ್ಸ್ನಾಲಿಟಿಗೆ ಚಿಕ್ಕಣ್ಣ ಅವರೇ ಸೂಟ್ ಆಗೋದೂ ಅಂತ ಹೇಳಿದ್ದಾರೆ.ಡಾ.ರಾಜ್ ಕುಮಾರ್ ಅವರು ನೆಚ್ಚಿನ ನಟರೆಂದು ಅಭಿಮಾನ ಮೆರೆದ ಆರೋಹಿತಾ ಉತ್ತಮ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ನಮ್ಮಲೇಖನ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

Leave a Reply

%d bloggers like this: