ಚಿಕ್ಕಣ್ಣನವರ ವಿಶೇಷವಾದ ಮನೆ ಹೇಗಿದೆ ನೋಡಿ

ಕಿರಾತಕ,ರಾಜಾಹುಲಿ ಚಿತ್ರದ ಮೂಲಕ ಮನೆಮಾತಾಗಿ ಅಪಾರ ಅಭಿಮಾನಿ ಬಳಗ ಗಳಿಸಿದ ಚಿಕ್ಕಣ್ಣನವರು ಈಗ ಸಿಕ್ಕಾಪಟ್ಟೆ ಬೆಳೆದಿದ್ದಾರೆ.ಯಾವ ಹೀರೋಗೂ ಕಡಿಮೆ ಇಲ್ಲದಂಥ ಅವಕಾಶಗಳು ಚಿಕ್ಕಣ್ಣನವರನ್ನು ಅರಸಿ ಬರುತ್ತವೆ.ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಚಿಕ್ಕಣ್ಣನವರ ಒಂದು ದಿನದ ಸಂಭಾವನೆ ಎಷ್ಟು ಹಾಗೂ ಅವರು ಬಹಳ ಸುಂದರವಾದ ಮನೆಯನ್ನು ಹೊಂದಿದ್ದಾರೆ ಅದು ಹೇಗಿದೆ ನೋಡಿ.

ಚಿಕ್ಕಣ್ಣ ಹುಟ್ಟಿದ್ದು ೧೯೮೬ರಲ್ಲಿ ಮೈಸೂರಿನ ಬಲ್ಲಹಳ್ಳಿಯಲ್ಲಿ.ಚಿಕ್ಕಂದಿನಿಂದಲೇ ನಾಟಕದಲ್ಲಿ ಅಭಿನಯ,ಉದಯ ಟಿವಿಯಲ್ಲಿ ನಿರೂಪಣೆ,ಕಾಮಿಡಿ ಕಿಲಾಡಿಗಳು ಮುಂತಾದ ಕಾರ್ಯಕ್ರಮಗಳಲ್ಲಿ,ಧಾರಾವಾಹಿಗಳಲ್ಲಿ ನಟಿಸಿ ಮಿಂಚಿ ಹಿರಿತೆರೆಗೆ ಬಂದವರು.ಆರಂಭದ ದಿನಗಳಲ್ಲಿ ಇವರ ಸಂಭಾವನೆ ದಿನಕ್ಕೆ 800 ರೂಪಾಯಿ ಇತ್ತಂತೆ.

ಚಿಕ್ಕಣ್ಣನವರಿಗೆ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿದ್ದು ಕಿರಾತಕ ಚಿತ್ರದ ಮೂಲಕವೇ.ಆನಂತರ ಅತಿ‌ ಕಡಿಮೆ ಅವಧಿಯಲ್ಲಿ ಭಾರೀ ಯಶಸ್ಸು ಗಳಿಸಿ ಮನೆಮಾತಾದವರು ಹಿಂತಿರುಗಿ ನೋಡಲೇ ಇಲ್ಲ.ಈಗಾಗಲೇ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಚಿಕ್ಕಣ್ಣನವರು ಮೈಸೂರಿನ ಬಳಿ ಒಂದು ಫಾರ್ಮ್ ಹೌಸ್ ಖರೀದಿಸಿದ್ದಾರೆ.ಅಲ್ಲಿ ಅವರು ಕುರಿ,ಹಸು ಸಾಕಾಣಿಕೆ ಮಾಡುತ್ತಾರೆ. ಅವುಗಳ ಲಾಲನೆ,ಪೋಷಣೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ಈಗ ಚಿಕ್ಕಣ್ಣ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.ಈ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆದಿದ್ದಾರೆ. ಹಾಸ್ಯ ಕಲಾವಿದನಾಗಿ ಬಂದು ಹೋಗುವುದಕ್ಕೆ ಚಿಕ್ಕಣ್ಣ ಒಂದು ದಿನಕ್ಕೆ ನಾಲ್ಕು ಲಕ್ಷ ಸಂಭಾವನೆ ಪಡೆಯುತ್ತಾರೆ.ಚಿಕ್ಕಣ್ಣ ಅವರ ಮುಂದಿನ ಚಿತ್ರಜೀವನದ ಕನಸುಗಳು ಈಡೇರಲಿ ಎಂದು ಹಾರೈಸೋಣ.

Leave a Reply

%d bloggers like this: