ಚರ್ಮದ ಮೊಡವೆಗಳಿಗೆ ಇದಕ್ಕಿಂತ ಪರಿಣಾಮಕಾರಿ ಮನೆಮದ್ದು ಇನ್ನೊಂದಿಲ್ಲ

ಯೌವ್ವನದಲ್ಲಿ ಮೂಡುವ ಮೊಡವೆಗಳು ತಾತ್ಕಾಲಿಕವಾಗಿ ಒಂದಷ್ಟು ದಿನಗಳು ಮಾತ್ರ ಇರುತ್ತವೆ. ಆದರೆ ಕೆಲವರಿಗೆ ಈ ಚರ್ಮದ ಮೇಲೆ ಅದರಲ್ಲಿರೂ ಮುಖದ ಮೇಲೆ ಮೂಡುವ ಗುಳ್ಳೆಗಳು ಬಹು ಧೀರ್ಘ ದಿನಗಳ ಕಾಲ ಉಳಿದು ಬಿಡುತ್ತವೆ. ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಬೇಕು ಎಂಬ ಮಹಾದಾಸೆ ಅಂತೂ ಇದ್ದೇ ಇರುತ್ತೆ. ಆದರೆ ಇಂದಿನ ಆಹಾರ ಕ್ರಮ ಮತ್ತು ಜೀವನಶೈಲಿಯಿಂದಾಗಿ ಇಂದು ಅನೇಕರಿಗೆ ಈ ಚರ್ಮದ ಸಮಸ್ಯೆ ಕಾಡುತ್ತದೆ. ಇನ್ನು ಗುಳ್ಳೆಗಳು ಕೇವಲ ಯೌವ್ವನಸ್ಥರಿಗೆ ಮಾತ್ರ ಕಾಡುವುದಿಲ್ಲ. ಎಲ್ಲಾ ವಯಸ್ಸಿನವರಿಗೂ ಕೂಡ ಕಾಡುತ್ತದೆ. ಇವತ್ತಿನ ಯುವಕ ಯುವತಿಯರು ತಮ್ಮ ಸೌಂದರ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಮುಖ ನಿರ್ಮಲವಾಗಿ, ಕಾಂತಿಯುತವಾಗಿ ಆಕರ್ಷಕವಾಗಿ ಕಾಣಬೇಕು ಅಂತ ಮಾರುಕಟ್ಟೆಗಳಲ್ಲಿ ದೊರೆಯುವ ವಿವಿಧ ರೀತಿಯ ಕಾಸ್ಮೇಟಿಕ್ ಗಳನ್ನ ಬಳಸುತ್ತಾರೆ.

ಅವುಗಳಿಂದ ಅಲ್ಪ ದಿನಗಳವರೆಗೆ ಮಾತ್ರ ನಮ್ಮ ಮುಖ ಸುಂದರವಾಗಿ ಕಾಣುತ್ತದೆ. ಮತ್ತು ಸಣ್ಣ ಪುಟ್ಟ ಗುಳ್ಳೆಗಳಿಗೆ ತಾತ್ಕಾಲಿಕವಾಗಿ ಪರಿಹಾರ ಸಿಗುತ್ತದೆ. ಆಧುನಿಕ ಆಹಾರ ಪದ್ದತಿ ಶೈಲಿಯಿಂದಾಗಿ ಮುಖದ ಚರ್ಮದ ಮೇಲೆ ಸತ್ತ ಜೀವಕೋಶಗಳು ಸಂಗ್ರಹವಾಗುತ್ತದೆ. ಇದು ದಿನಗಳು ಕಳೆದಂತೆ ಗುಳ್ಳೆಗಳ ರೂಪ ಪಡೆದುಕೊಳ್ಳುತ್ತದೆ. ಅದನ್ನ ಚರ್ಮ ವೈದ್ಯರು ಮಿಲಿಯಾ ಎಂದು ಕರೆಯುತ್ತಾರೆ. ಈ ಮಿಲಿಯಾ ಸಮಸ್ಯೆ ಯಾವ ವಯಸ್ಸಿನವರಿಗೂ ಕಾಡಬಹುದು. ಇದಕ್ಕೆ ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ. ಈ ಮುಖದ ಮೇಲಿನ ಗುಳ್ಳೆಗಳು ಕೆಲವು ವ್ಯಕ್ತಿಗಳ ಚರ್ಮದ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರಿಗೆ ಒಂದಷ್ಟು ದಿನಗಳಿದ್ದು, ನಂತರ ಅವೇ ಕಣ್ಮರೆಯಾಗುತ್ತವೆ. ಆದರೆ ಕೆಲವರಿಗೆ ಇವು ಧೀರ್ಘಕಾಲದವರೆಗೆ ಸಮಸ್ಯೆ ಕೊಡುತ್ತದೆ.

ಅಂತಹ ಚರ್ಮದ ಮುಖದ ಮೊಡವೆಗಳ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಇಲ್ಲೊಂದಷ್ಟು ಮಾರ್ಗೋಪಾಯಗಳಿವೆ. ಮೊದಲನೇಯದಾಗಿ ಚರ್ಮಕ್ಕೆ ಅಲೋವೆರಾ ಜೆಲ್ ಬಳಸುವುದರಿಂದ ಅದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗಿರುತ್ತವೆ. ಇವು ಮುಖದ ಮೊಡವೆಗಳ ನಿವಾರಣೆಗೆ ಸಹಕಾರಿಯಾಗುತ್ತವೆ. ಈ ಅಲೋವೆರಾ ಜೆಲ್ ಅನ್ನು ಮುಖದ ಮೊಡವೆಗಳ ಮೇಲೆ ರಾತ್ರಿ ಮಲಗುವ ಮುಂಚೆ ಮಸಾಜ್ ಮಾಡಿ, ನಂತರ ಅದನ್ನ ಶುದ್ದ ನೀರಿನಿಂದ ಸ್ವಚ್ಛಗೊಳಿಸಬೇಕು. ಅದೇ ರೀತಿ ಬಿಳಿ ಗುಳ್ಳೆಗಳು ಆದಾಗ ಅದರ ನಿವಾರಣೆಗೆ ವಿಷಕಾರಿ ಬ್ಯಾಕ್ಟೀರಿಯಾ ಹೋಗಲಾಡಿಸುವ ರೋಗ ನಿರೋಧಕ ಗುಣವನ್ನು ಹೊಂದಿರುವ ಶ್ರೀಗಂಧದ ಜೊತೆಗೆ ರೋಸ್ ವಾಟರ್ ಮಿಶ್ರಣ ಮಾಡಿ ಪ್ರತಿ ನಿತ್ಯ ನಿಮ್ಮ ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಮೊಡವೆ ನಿವಾರಣೆ ಆಗುತ್ತದೆ.