ಚಂದನ್ ಕುಮಾರ್ ಅವರ ವಿಷಯದಲ್ಲಿ ಹೊಸ ನಿರ್ಧಾರ ಕೈಗೊಂಡ ತೆಲುಗು ಕಿರುತೆರೆ ಸಂಘ

ಕನ್ನಡ ಕಿರುತೆರೆ ಮತ್ತು ಪ್ರೇಮ ಬರಹ ಸಿನಿಮಾ ಖ್ಯಾತಿಯ ನಟ ಚಂದನ್ ಇತ್ತೀಚೆಗೆ ತಾನೇ ಕೆಲವು ತಿಂಗಳಿನ ಹಿಂದೆಯಷ್ಟೆ ತೆಲುಗು ಕಿರುತೆರೆಗೆ ಹೆಜ್ಜೆ ಇಟ್ಟು ಟಾಲಿವುಡ್ ನಲ್ಲಿ ಸ್ಟಾರ್ ಆಗುವ ಎಲ್ಲಾ ಭರವಸೆಯನ್ನ ಹುಟ್ಟು ಹಾಕಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಕೆಟ್ಟ ಘಟನೆಯೊಂದು ನಡೆದಿದೆ. ಹೌದು ಕನ್ನಡ ಕಿರುತೆರೆಯ ಜನಪ್ರಿಯ ಲಕ್ಷ್ಮಿ ಬಾರಮ್ಮಾ ಧಾರಾವಾಹಿ ಖ್ಯಾತಿಯ ನಟ ಚಂದನ್ ಅವರ ಮೇಲೆ ಜುಲೈ 30ರಂದು ಹಲ್ಲೆ ನಡೆದಿದೆ‌. ಹಲ್ಲೆ ಮಾಡಿರೋದು ಬೇರಾರು ಅಲ್ಲ ನಟ ಚಂದನ್ ನಟಿಸುತ್ತಿದ್ದ ಸೀರಿಯಲ್ ಟೆಕ್ನಿಶಿಯನ್ಸ್ ಅನ್ನೋದೇ ದುರಂತ. ನಟ ಚಂದನ್ ಕೇವಲ ಕನ್ನಡ ಮಾತ್ರ ಅಲ್ಲದೆ ತೆಲುಗು ಧಾರಾವಾಹಿಯಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡು ತೆಲುಗಿನ ಸಾವಿತ್ರಮ್ಮ ಗಾರಿ ಅಬ್ಬಾಯಿ ಅನ್ನೋ ಧಾರಾವಾಹಿಯಲ್ಲಿ ಚಂದನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದರು.

ಇತ್ತೀಚೆಗೆ ಅಂದ್ರೆ ಮೊನ್ನೆ ಈ ಸೀರೀಯಲ್ ಶೂಟಿಂಗ್ ಆರಂಭ ಆಗಿರುತ್ತೆ. ಹಾಗಾಗಿ ಚಂದನ್ ಕೂಡ ಬೆಂಗಳೂರಿನಿಂದ ಹೈದರಾಬಾದ್ ಗೆ ಹೋಗಿರುತ್ತಾರೆ. ಈ ನಡುವೆ ಚಂದನ್ ಅವರ ತಾಯಿಗೆ ಹಾರ್ಟ್ ಆಪರೇಶನ್ ಆಗಿ ಚೇತರಿಸಿಕೊಳ್ತಿರ್ತಾರೆ. ಇದೇ ಒತ್ತಡ ಭಯದಲ್ಲಿ ಇದ್ದ ಚಂದನ್ ಶೂಟಿಂಗ್ ಹೋಗಿರ್ತಾರೆ. ಶೂಟಿಂಗ್ ನಡುವೆ ಕರೆಂಟ್ ಹೋಗಿ ಕೆಲವು ನಿಮಿಷಗಳ ಕಾಲ ಬಿಡುವು ಸಿಕ್ಕಿರುತ್ತೆ. ಹಾಗಾಗಿ ಚಂದನ್ ಕೂಡ ಟೆನ್ಶನ್ ರಿಲ್ಯಾಕ್ಸ್ ಆಗೋಣ ಅಂತ ಮಲ್ಕೊಂಡಿರ್ತಾರೆ‌. ಐದು ನಿಮಿಷ ಅಂತ ಮಲ್ಗಿದ್ದ ಚಂದನ್ ಅವ್ರಿಗೆ ಕೊಂಚ ಟಯರ್ಡ್ ಆಗಿದ್ರಿಂದ ನಿದ್ದೆ ಬಂದಿರುತ್ತೆ. ಹಾಗಂತ ಚಂದನ್ ಗಾಢವಾಗಿ ನಿದ್ದೆ ಏನೂ ಮಾಡ್ತಿರ್ಲಿಲ್ಲ. ಇದನ್ನ ಕಂಡ ಅಸಿಸ್ಟ್ ಡೈರೆಕ್ಟರ್ ರಂಜಿತ್ ಅನ್ನೋ ಹುಡುಗ ಏಕ ವಚನದಲ್ಲಿ ಏನೋ ಐದು ನಿಮಿಷ ಅಂತ ನಿದ್ದೆನೇ ಮಾಡ್ತಾವ್ನೆ ಅಂತ ಜೋರಾಗಿ ರೇಗಾಡಿದ್ದಾನಂತೆ. ಅದಕ್ಕೆ ಚಂದನ್ ಕೂಡ ಯಾರಿಗಪ್ಪಾ ಹಾಗೆ ಏಕವಚನದಲ್ಲಿ ಬೈತಿದ್ಯ ಬರ್ತಿದಿನಿ ಅಂತ ಸಲುಗೆಯಿಂದ ಮಾತ್ನಾಡಿ ತಳ್ಳಾಡ್ಕೊಂಡಿದ್ದಾರೆ ಅಷ್ಟೆ.

ಇದನ್ನೇ ದೊಡ್ಡ ಅಪರಾಧವೆಂಬಂತೆ ಅಸಿಸ್ಟೆಂಟ್ ಡೈರೆಕ್ಟರ್ ರಂಜಿತ್ ನಾಟಕ ಮಾಡಿ ಡೈರೆಕ್ಟರ್ ಹತ್ರ ಇಲ್ಲ ಸಲ್ಲದ ಸುಳ್ಳುಗಳನ್ನ ಹೇಳಿ ಡೈರೆಕ್ಷನ್ ಅಸೋಸಿಯೇಶನ್ ಕರೆಸಿ ಬೈಯ್ದಿದಲ್ಲದೆ ಹಲ್ಲೆ ಕೂಡ ಮಾಡಿದ್ದಾನೆ. ಇದರಿಂದ ನಟ ಚಂದನ್ ಅವರಿಗೂ ಕೂಡ ಬೇಸರವಾಗಿದೆ. ಹೀಗಾಗಿ ಇನ್ಮುಂದೆ ಈ ಸೀರಿಯಲ್ ನಲ್ಲಿ ಮುಂದುವರಿಯುವುದಿಲ್ಲ ಎಂದು ನಿರ್ಧಾರ ಮಾಡಿದರು. ಇದರ ಬೆನ್ನಲ್ಲೇ ಇದೀಗ ಚಂದನ್ ಅವರು ಸಹಾಯಕ ಸಿಬ್ಬಂದಿಗಳ ಜೊತೆಗೆ ದುರ್ವರ್ತನೆ ತೋರಿದ್ದಾರೆ. ಹಾಗಾಗಿ ಅವರನ್ನ ತೆಲುಗಿನ ಯಾವುದೇ ಧಾರಾವಾಹಿಗಳಲ್ಲಿ ಅವಕಾಶ ನೀಡಬಾರದು. ಚಂದನ್ ಅವರನ್ನ ತೆಲುಗು ಕಿರುತೆರೆ ಮತ್ತು ಡಿಜಿಟವ್ ಪ್ಲಾಟ್ ಫಾರ್ಮ್ ಗಳಿಂದ ಬಹಿಷ್ಕಾರ ಮಾಡಬೇಕು ಎಂದು ತೆಲುಗು ಟಿವಿ ಫೆಡರೇಶನ್ ಮನವಿ ಮಾಡಿದ್ದು, ಅದರಂತೆ ನಿರ್ಮಾಪಕರ ಮಂಡಳಿ ಕೂಡ ಚಂದನ್ ಅವರನ್ನ ತೆಲುಗು ಕಿರುತೆರೆಯಿಂದ ನಿಷೇಧ ಮಾಡಲಾಗಿದೆ. ಈ ಮೂಲಕ ಟಾಲಿವುಡ್ ನಲ್ಲಿ ಉತ್ತಮ ನಟನಾಗಿ ಮಿಂಚಿ ಸ್ಟಾರ್ ಆಗಬಹುದಾದ ಭರವಸೆ ಚಂದನ್ ಅವರಿಗೆ ಕನಸಾಗೇ ಉಳಿದುಕೊಂಡಿದೆ.

Leave a Reply

%d bloggers like this: