ಸಿನೆಮಾದಲ್ಲಿ ಅವಕಾಶ ಸಿಗಬೇಕೆಂದರೆ ಆ ಕೆಲಸ ಮಾಡಬೇಕು ಎಂದು ನಗ್ನ ಸತ್ಯ ಹೇಳಿದ ನಟಿ ಕನ್ನಡತಿ ಅನುಷ್ಕಾ ಶೆಟ್ಟಿ

ಟಾಲಿವುಡ್ ನಲ್ಲೂ ಕೂಡ ಅಡಿಷನ್ ಸಂಧರ್ಭದಲ್ಲಿ ಸೆಕ್ಸ್ಯೂಲ್ ಅರೆಸ್ ಮೆಂಟ್ ಇದೆ ಎಂದು ಹೇಳುವ ಮೂಲಕ ಸುದ್ದಿಯಾದ ತೆಲುಗು ಚಿತ್ರರಂಗದ ಸುಪ್ರಸಿದ್ದ ನಟಿ..! ಬಣ್ಣದ ಲೋಕ ಅದೊಂದು ಮಾಯಾ ಪ್ರಪಂಚ. ಇಲ್ಲಿ ದಿನನಿತ್ಯ ಒಂದಲ್ಲ ಒಂದು ವಿಚಾರವಾಗಿ ಸಿನಿಮಾ ಲೋಕ ಪ್ರಚಾರದಲ್ಲಿ ಇರುತ್ತದೆ. ಚಿತ್ರರಂಗಕ್ಕೆ ಹೊಸ ನಟ-ನಟಿಯರು ಆಗಮನ ಆಗುವುದರಿಂದ ಹಿಡಿದು ಸೂಪರ್ ಸ್ಟಾರ್ ಸಿನಿಮಾಗಳು ಸೂಪರ್ ಹಿಟ್ ಅಥವಾ ಆಕ್ಟರ್ ಪ್ಲಾಪ್ ಆಗುವ ಎಲ್ಲಾ ಸುದ್ದಿಯನ್ನು ಕೂಡ ನೋಡಬಹುದಾಗಿರುತ್ತದೆ. ಒಳ್ಳೆಯ ವಿಚಾರದ ಜೊತೆ ಜೊತೆಗೆ ಒಂದಷ್ಟು ನಕಾರಾತ್ಮಕ ವಿಚಾರಗಳು ಕೂಡ ಕೇಳುತ್ತಿರುತ್ತೇವೆ. ಅದು ಕೇವಲ ಸಿನಿಮಾ ರಂಗ ಮಾತ್ರ ಅಲ್ಲ. ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಸಕಾರಾತ್ಮಕ ವಿಚಾರ ಜೊತೆಗೆ ನಕಾರಾತ್ಮಕ ವಿಚಾರ ಕೂಡ ಇರುತ್ತದೆ. ಬೆಳಕಿನ ನೆರಳಿನ ಹಿಂದೆ ಅವಿತುಕೊಂಡಿದ್ದ ಈ ಕಾಸ್ಟಿಂಗ್ ಕೌಚ್ ಎಂಬ ಕಪ್ಪು ಛಾಯೆಯ ಬಗ್ಗೆ ಟಾಲಿವುಡ್ ಸ್ಟಾರ್ ನಟಿ ಕನ್ನಡತಿ ಅನುಷ್ಕಾ ಶೆಟ್ಟಿ ಅವರು ಇದೀಗ ಒಂದಷ್ಟು ನಗ್ನ ಸತ್ಯ ವನ್ನು ಇದೆ ಎಂದು ಮುಕ್ತವಾಗಿ ತಿಳಿಸಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಮೂಲತಃ ಕರ್ನಾಟಕದ ಮಂಗಳೂರು ಭಾಗದವರು. ಕನ್ನಡದವರಾಗಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದ ಕಾರಣ ಪಕ್ಕದ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಡಬೇಕಾಗುತ್ತದೆ. ಹೌದು ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ ಅವರ ಸೂಪರ್ ಎಂಬ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಅನುಷ್ಕಾ ಶೆಟ್ಟಿ ಅವರಿಗೆ ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಉತ್ತಮ ರೆಸ್ಪಾನ್ಸ್ ಸಿಗುತ್ತದೆ. ಈ ಚಿತ್ರದ ಯಶಸ್ಸು ಇವರಿಗೆ ತೆಲುಗು ಚಿತ್ರರಂಗದ ಖ್ಯಾತ ನಟ ರೊಂದಿಗೆ ನಟಿಸುವ ಅವಕಾಶ ತಂದು ಕೊಡುತ್ತದೆ. ಅದರಂತೆ ಚಿರಂಜೀವಿ, ರವಿತೇಜ, ಪ್ರಭಾಸ್, ವಿಜಯ್ ಅಂತಹ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ದಕ್ಷಿಣ ಭಾರತದ ಸುಪ್ರಸಿದ್ಧ ನಟಿಯಾಗಿ ಮಿಂಚುತ್ತಿರುವ ಅನುಷ್ಕಾ ಶೆಟ್ಟಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ತಮ್ಮ ನಟನೆಯ ಕೆಲಸ ಆಯಿತು ತಮ್ಮ ವೈಯಕ್ತಿಕ ಕೆಲಸವಾಯಿತು ಎಂದು ಯಾವುದೇ ರೀತಿಯ ವಿವಾದಗಳಿಗೆ ತಳುಕು ಹಾಕಿಕೊಳ್ಳದೇ ತಮ್ಮ ನೇರ ನುಡಿ ವ್ಯಕ್ತಿತ್ವದಿಂದ ಹೆಸರಾಗಿರುವ ಅನುಷ್ಕಾ ಶೆಟ್ಟಿ ಅವರು ಇದೀಗ ತಮ್ಮ ಒಂದು ಹೇಳಿಕೆಯಿಂದ ಟಾಲಿವುಡ್ ನಲ್ಲಿ ಹೊಸದೊಂದು ಸಂಚಲನಕ್ಕೆ ಕಾರಣವಾಗಿದ್ದಾರೆ. ಹೌದು ನಟಿ ಅನುಷ್ಕಾ ಶೆಟ್ಟಿ ಅವರು ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ಕಕೌಚ್ ಇರುವುದು ಸತ್ಯ. ಕೇವಲ ತೆಲುಗು ಮಾತ್ರ ಅಲ್ಲ ಇತರೆ ಭಾಷೆಯ ಸಿನಿಮಾ ರಂಗದಲ್ಲಿ ಕೂಡ ಈ ಕಾಸ್ಟಿಂಗ್ ಕೌಚ್ ಇದೆ. ಇದರಿಂದ ಅನೇಕ ಯುವ ನಟಿಯರು ನೋವನ್ನು ಅನುಭವಿಸಿದ್ದಾರೆ. ಇಂತಹ ಅನೇಕ ಘಟನೆಗಳನ್ನು ನಾನು ಕಂಡಿದ್ದೇನೆ ಎಂದು ಹೇಳಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಈ ಹೇಳಿಕೆ ಇದೀಗ ಬಾಲಿವುಡ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

Leave a Reply

%d bloggers like this: