ಸಿನೆಮಾ ರಂಗಕ್ಕೆ ಕಾಲಿಡಲಿದ್ದಾರೆ ಮೀನಾ ಮಗಳು! ಅವರ ಅಮ್ಮನಿಗಿಂತ ಸುಂದರವಾಗಿದ್ದಾಳೆ.. ನೋಡಿ ಒಮ್ಮೆ

ತೊಂಭತ್ತರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನಾಳಿದಂತಹ ಸುಪ್ರಸಿದ್ದ ನಟಿಯರ ಸಾಲಿನಲ್ಲಿ ನಟಿ ಮೀನಾ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಪುಟ್ನಂಜ, ಸಿಂಹಾದ್ರಿಯ ಸಿಂಹ, ಮೈ ಆಟೋಗ್ರಾಫ್ ಅಂತಹ ಸೂಪರ್ ಹಿಟ್ ಸಿನಿಮಾಗಳ ಖ್ಯಾತಿಯ ನಟಿ ಮೀನಾ ಅವರ ಮಗಳು ಇದೀಗ ಹೇಗಿದ್ದಾರೆ ಗೊತ್ತಾ…! ಮೀನಾ ಚಿಕ್ಕ ವಯಸ್ಸಿಗೇನೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ. ಮೀನಾ ಅವರು ತಮಿಳು, ತೆಲುಗು ಮಾತ್ರವಲ್ಲದೆ ಕನ್ನಡ ಸಿನಿ ರಂಗದ ದಿಗ್ಗಜ ನಟರೊಂದಿಗೆ ನಟಿಸಿ ಅಪಾರ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.

ನಟಿ ಮೀನಾ ಅವರು ಸೌತ್ ಸಿನಿ ರಂಗದಲ್ಲಿ ಬೇಡಿಕೆಯ ನಟಿಯಾಗಿ ಉತ್ತುಂಗದಲ್ಲಿ ಇರಬೇಕಾದರೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ. 2009 ರಲ್ಲಿ ಕರ್ನಾಟಕ ಮೂಲದ ವಿದ್ಯಾಸಾಗರ್ ಎಂಬುವರನ್ನ ಮದುವೆ ಆಗುತ್ತಾರೆ. ನಟಿ ಮೀನಾ ಮತ್ತು ವಿದ್ಯಾಸಾಗರ್ ದಂಪತಿಗಳಿಗೆ ನೈನಿಕಾ ಎಂಬ ಹೆಣ್ಣು ಮಗಳಿದ್ದಾಳೆ. ಮೀನಾ ಅವರಿಗೆ ತನ್ನ ಮಗಳು ನೈನಿಕಾ ಅಂದರೆ ಪಂಚಪ್ರಾಣ ಅಂತೆ. ತನ್ನಂತೆ ತನ್ನ ಮಗಳು ಕೂಡ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬುದು ಅವರ ಆಸೆಯಾಗಿದೆಯಂತೆ. ತಾಯಿಯಂತೆ ನೋಡಲು ಸುಂದರವಾಗಿರುವ ನೈನಿಕಾ ಕೂಡ ಭವಿಷ್ಯದಲ್ಲಿ ಚಿತ್ರರಂಗಕ್ಕೆ ಬರಲಿದ್ದಾರೆ.

ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರೂ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಕರ್ನಾಟಕ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: