ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಸುಹಾಸಿನಿ ಮಗಳು.. ನೋಡಿ ಒಮ್ಮೆ ಎಷ್ಟೊಂದು ಸುಂದರವಾಗಿದ್ದಾಳೆ

ದಕ್ಷಿಣ ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟಿ ಕಮ್ ನಿರ್ದೇಶಕಿಯ ಪುತ್ರಿ ಇದೀಗ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಬಗ್ಗೆ ಬಹುತೇಕರಿಗೆ ತಿಳಿದೇ ಇಲ್ಲ. ಹಾಗಾದ್ರೇ ಈ ವಿಚಾರವನ್ನು ನಾವು ನಿಮಗೆ ತಿಳಿಸುವ ಪ್ರಯತ್ನ ಮಾಡ್ತೀವಿ. ಹೌದು 80-90 ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಟಿ ಆಗಿ ಮಿಂತಿದ ನಟಿ ಸುಹಾಸಿನಿ ಅವರ ಮಗಳು ಕೂಡ ಬಣ್ಣದ ಲೋಕದಲ್ಲಿ ಹೆಸರು ಮಾಡಿದ್ದಾರೆ. ಇದಕ್ಕೂ ಮೊದಲು ನಟಿ ಸುಹಾಸಿನಿ ಅವರ ಬಗ್ಗೆ ಒಂದಷ್ಟು ವಿಚಾರವನ್ನ ತಿಳಿಯುವುದಾದರೆ. ನಟಿ ಸುಹಾಸಿನಿ ಅವರು ಮೂಲತಃ ತಮಿಳುನಾಡಿನವರು. ಇವರು 1980 ರಲ್ಲಿ ತೆರೆಕಂಡ ನೆಂಜಥೈ ಕಿಲ್ಲಥೆ ಎಂಬ ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು . ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತದೆ . ಈ ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಇದಾದ ಬಳಿಕ ಸಿಂಧು ಭೈರವಿ ಎಂಬ ಚಿತ್ರದಲ್ಲಿನ ಉತ್ತಮ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸುತ್ತದೆ.

ಇದಾದ ನಂತರ ನಟಿ ಸುಹಾಸಿನಿ ಅವರಿಗೆ ಕೇವಲ ತಮಿಳು ಮಾತ್ರ ಅಲ್ಲದೆ ತೆಲುಗು, ಹಿಂದಿ, ಮಲೆಯಾಳಂ, ಸೇರಿದಂತೆ ಕನ್ನಡದ ಸಿನಿಮಾಗಳಲ್ಲಿ ಸಹ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ . ಕನ್ನಡದಲ್ಲಿ ಡಾ. ವಿಷ್ಣು ವರ್ಧನ್ ಅವರೊಟ್ಟಿಗೆ ಬಂಧನ, ಬೆಂಕಿಯಲ್ಲಿ ಅರಳಿದ ಹೂವು, ಮುತ್ತಿನ ಹಾರ, ಅಮೃತ ವರ್ಷಿಣಿ, ಮಾತಾಡ್ ಮಾತಾಡ್ ಮಲ್ಲಿಗೆ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ಸುಹಾಸಿನಿ ಅವರು. ನಟಿ ಸುಹಾಸಿನಿ ಅವರು ಬರೋಬ್ಬರಿ ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇದೀಗ ಅವರ ಮಗಳು ಅಂದರೆ ಸುಹಾಸಿನಿ ಅವರ ಚಿಕ್ಕಪ್ಪ ನಟ ಕಮಲ್ ಹಾಸನ್ ಅವರ ಪುತ್ರಿ ಅನು ಹಾಸನ್ ಅವರು ಕೂಡ ಬೆಳ್ಳಿ ತೆರೆಯ ಮೇಲೆ ಮಿಂಚಿದ್ದಾರೆ. ಅನು ಹಾಸನ್ ಅವರನ್ನು ಕಂಡರೆ ಸುಹಾಸಿನಿ ಅವರಿಗೆ ಪಂಚಪ್ರಾಣ ಅಂತೆ.

ಆದಕ್ಕಾಗಿ ಅನು ಹಾಸನ್ ಅವರನ್ನ ತಮ್ಮ ಮಗಳಿಗೆ ತಾವೇ ನೋಡಿಕೊಂಡು ಬೆಳೆಸಿದ್ದಾರಂತೆ. ಅನು ಹಾಸನ್ ಅವರಿಗಾಗಿ ನಟಿ ಸುಹಾಸಿನಿ ಅವರು ತಾವೇ ಇಂದ್ರ ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅನು ಹಾಸನ್ ಅವರು ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಕನ್ನಡದಲ್ಲಿ ನಟಿ ಅನು ಹಾಸನ್ ಅವರು ಗೌರಮ್ಮ ಎಂಬ ಸೀರಿಯಲ್ ನಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಗೋಲ್ ಮಾಲ್ ಎಂಬ ಸಿನಿಮಾವನ್ನ ಮಾಡಿದ್ದಾರೆ. ಆದರೆ ಈ ಬಗ್ಗೆ ಬಹುತೇಕರಿಗೆ ತಿಳಿದೇ ಇಲ್ಲ. ಇನ್ನ ನಟಿ ಸುಹಾಸಿನಿ ಅವರು ಖ್ಯಾತ ನಿರ್ದೇಶಕರಾದ ಮಣಿರತ್ನಂ ಅವರನ್ನ ಮದುವೆಯಾಗಿದ್ದು ಇವರಿಗೆ ನಂದನ್ ಎಂಬ ಮಗನಿದ್ದಾನೆ. ಇಂದಿಗೂ ಕೂಡ ನಟಿ ಸುಹಾಸಿನಿ ಅವರು ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ಪೋಷಕ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿರುತ್ತಾರೆ.

Leave a Reply

%d bloggers like this: