ಕೆನಡಾದಿಂದ ಬಂತು ಅನ್ನಪೂರ್ಣೇಶ್ವರಿ ವಿಗ್ರಹ! ಪ್ರಧಾನಿ ಮೋದಿ ಅದನ್ನು ಯೋಗಿ ಆದಿತ್ಯನಾಥ್ ಕೈಗೆ ನೀಡಿದ್ದೇಕೆ ಗೊತ್ತಾ

ಬರೋಬ್ಬರಿ ನೂರು ವರ್ಷಗಳ ಹಿಂದೆ ಬ್ರಿಟೀಷರು ತೆಗೆದುಕೊಂಡು ಹೋಗಿದ್ದ ಅನ್ನಪೂರ್ಣೇಶ್ವರಿ ವಿಶೇಷ ಪ್ರತಿಮೆ ಮತ್ತೆ ಭಾರತಕ್ಕೆ ಸೇರುತ್ತಿದೆ.ಸಾಂಬಾರು ಪಧಾರ್ಥಗಳ ವ್ಯಾಪಾರಕ್ಕೆ ಭಾರತಕ್ಕೆ ಬಂದ ಬ್ರಿಟೀಷರು ತದ ನಂತರ ಭಾರತವನ್ನೇ ಆಳಲು ಆರಂಭಿಸಿ ಸಂಪತ್ತುಭರಿತವಾಗಿದ್ದ ದೇಶವನ್ನ ಲೂಟಿ ಮಾಡಿ ಭಾರತದ ಸಂಪತ್ತು ಬರಿದಾಗುವಂತೆ ಮಾಡಿದ್ದು ಇತಿಹಾಸ.ಬ್ರಿಟೀಷರು ತಮ್ಮ ಆಳ್ವಿಕೆಯಲ್ಲಿ ಭಾರತದಲ್ಲಿದ್ದಂತಹ ಅನೇಕ ಪುರಾಣ ಪ್ರಸಿದ್ದ,ಐತಿಹಾಸಿಕ ಹಿನ್ನೆಲೆಯುಳ್ಳ ಅನೇಕ ದೇವಾಲಯಗಳಲ್ಲಿದ್ದ ವಜ್ರ ವೈಡುರ್ಯ ಒಡವೆಗಳು,ಚಿನ್ನದ ದೇವರ ಮೂರ್ತಿಗಳನ್ನ ತಮ್ಮ ತಮ್ಮ ದೇಶಕ್ಕೆ ರವಾನೆ ಮಾಡುವ ಕೆಲಸಕ್ಕೆ ಮುಂದಾಗಿದ್ದರು.ಆ ಸಂಧರ್ಭದಲ್ಲಿ ಉತ್ತರ ಪ್ರದೇಶದ ಕಾಶಿಯಲ್ಲಿದ್ದ ಅಪೂರ್ವವಾದ ಅನ್ನಪೂರ್ಣೇಶ್ವರಿ ವಿಗ್ರಹವನ್ನು ಬ್ರಿಟೀಷರು ಕೆನಡಾ ದೇಶಕ್ಕೆ ಕೊಂಡ್ಯೋಯ್ದಿದ್ದರು.ಇದೀಗ ಈ ಅನ್ನ ಪೂರ್ಣೇಶ್ವರಿ ಪ್ರತಿಮೆ ಸುಮಾರು ನೂರು ವರ್ಷಗಳ ನಂತರ ಪುನಃ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ.

ಇದೆ ನವೆಂಬರ್ 11 ರಂದು ದೆಹಲಿಗೆ ಈ ಮೂರ್ತಿ ಬರಲಿದ್ದು ಇದನ್ನ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರಿಗೆ ವರ್ಗಾಯಿಸಲಾಗುತ್ತದೆ. ತದ ನಂತರ ಈ ಅನ್ನಪೂರ್ಣೇಶ್ವರಿ ಮೂರ್ತಿಯನ್ನು ಉತ್ತರ ಪ್ರದೇಶದ ಪ್ರಮುಖ ನಗರಗಳಾದ ಸುಕರ್ ಪ್ರದೇಶ,ಸೊರಾನ್,ಕಾನ್ಪುರ ಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಗುತ್ತದೆ.ನಂತರದಲ್ಲಿ ನವೆಂಬರ್ 14 ರಂದು ಅಯೋಧ್ಯೆಯ ಕಾಶಿಗೆ ಈ ಅನ್ನಪೂರ್ಣೇಶ್ವರಿ ಪ್ರತಿಮೆಯನ್ನು ತಲುಪಿಸಲಾಗುತ್ತದೆ. ಬಳಿಕ ನವೆಂಬರ್ 15 ರಂದು ಕಾಶಿಯಲ್ಲಿ ಈ ಪ್ರತಿಮೆಯನ್ನು ಪುನರ್ ಸ್ಥಾಪನೆ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ತಿಳಿಸಿದರು.

ಇನ್ನು ಈ ಬಗ್ಗೆ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಕಿಶನ್ ರೆಡ್ಡಿ ಅವರು 2014 ರಿಂದ ಈಗಿನವರೆಗೆ 42 ಅಪೂರ್ವ ಪ್ರತಿಮೆಗಳನ್ನು ಹಿಂತಿರುಗಿಸಲಾಗದೆ.ಇದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳೊಂದಿಗೆ ಇಟ್ಟುಕೊಂಡಿರುವ ಉತ್ತಮ ಸಂಪರ್ಕ ಸಂಬಂಧ,ಭಾಂಧವ್ಯದಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: