ಬುರ್ಜ್ ಖಲೀಫಾ ಒಳಗೆ ಶಾರುಖ್ ಖಾನ್ ಸಾಹಸ ದೃಶ್ಯ

ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳಾದ ಕಾರಣ ದುಬೈನ ಬುರ್ಜ್‌ ಖಲೀಫಾ ಐಶಾರಾಮಿ ಹೋಟೆಲ್‌ ಮೇಲೆ ವಿಶೇಷ ವಿಡಿಯೋ ಪ್ರಸಾರ ಮಾಡಿದ್ದು ಹಾಗೂ ತಮ್ಮ ಹೊಸ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು ಸಖತ್ ನ್ಯೂಸ್ ಆಗಿದೆ. ಅದೇ ಬುರ್ಜ್‌ ಖಲೀಫಾ ಒಳಗೆ ಶಾರುಖ್ ಖಾನ್ ಹೊಡಿ-ಬಡಿ ಅಂತಿದ್ದಾರೆ.ಹೌದು,ಸಧ್ಯ ದುಬೈನಲ್ಲಿರುವ ಶಾರುಖ್ ಖಾನ್,ವಿಶ್ವದ ಐಶಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಬುರ್ಜ್ ಖಲೀಫಾ ಒಳಗೆ ಚಿತ್ರೀಕರಣ ಮಾಡಲಿದ್ದಾರೆ.ಕಿಂಗ್ ಖಾನ್ ಪ್ರಸ್ತುತ ‘ಪಠಾಣ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಅದರ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದೆ.ದುಬೈನಲ್ಲಿ ಪಠಾಣ್ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು,ದುಬೈನ ರಸ್ತೆಗಳಲ್ಲಿ ಮಾತ್ರವೇ ಅಲ್ಲದೇ,ಬುರ್ಜ್ ಖಲೀಫಾದ ಒಳಗೂ ಸಾಹಸ ದೃಶ್ಯಗಳ ಶೂಟಿಂಗ್ ನಡೆಯಲಿದೆ.

ಬುರ್ಜ್‌ ಖಲೀಫಾದೊಳಗೆ ಚಿತ್ರೀಕರಣ ಮಾಡುತ್ತಿರುವ ಮೊದಲ ಇಂಡಿಯನ್ ಸಿನಿಮಾ ಆಗಲಿದೆ ಪಠಾಣ್.ಹೌದು, ಈವರೆಗೂ ಹಾಲಿವುಡ್ ನ ಮಿಶನ್ ಇಂಪಾಸಿಬಲ್,ಫಾಸ್ಟ್ ಅಂಡ್ ಫ್ಯೂರಿಯಸ್ ಅಷ್ಟೇ ಬುರ್ಜ್‌ ಒಳಗೆ ಚಿತ್ರೀಕರಣ ಮಾಡಿರುವ ಸಿನಿಮಾಗಳು.ಈಗ ಆ ಸಾಲಿಗೆ ಪಠಾಣ್ ಕೂಡ ಸೇರಿ ಬುರ್ಜ್‌ ಖಲೀಫಾದಲ್ಲಿ ಶೂಟಿಂಗ್ ಮಾಡ್ತಿರುವ ಪ್ರಪ್ರಥಮ ಇಂಡಿಯನ್ ಸಿನಿಮಾ ಎಂಬ ಹೆಗ್ಗಳಿಕೆ ಪಠಾಣ್ ಸಿನಿಮಾಗೆ ಸಿಗಲಿದೆ. ಶಾರುಖ್ ಖಾನ್,ದೀಪಿಕಾ ಪಡುಕೋಣೆ ಅಲ್ಲದೇ ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಹೃತಿಕ್ ರೋಶನ್ ಕೂಡ ಪಠಾಣ್ ಚಿತ್ರದಲ್ಲಿ ನಟಿಸಲಿದ್ದಾರೆ.ಅಲ್ಲದೇ ಈ ಚಿತ್ರದಲ್ಲಿ ಶಾರುಖ್ ಡಿಟೆಕ್ಟಿವ್‌.ತಮಗೆ ಬಾದ್ಶಾ ಟೈಟಲ್ ಕೊಟ್ಟ ಬಾದ್ಶಾ ಸಿನಿಮಾದಲ್ಲೂ ಶಾರುಖ್ ಡಿಟೆಕ್ಟಿವ್‌ ಆಗಿದ್ರು.ಇಷ್ಟೆಲ್ಲ ಅಚ್ಚರಿಗಳಿರುವ ಸಿನಿಮಾ ಪ್ರೇಕ್ಷಕರನ್ನು ಹುಚ್ಚೆಬ್ಬಿಸೋದ್ರಲ್ಲಿ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯೋದ್ರಲ್ಲಿ ಅನುಮಾನವೇ ಇಲ್ಲ.

ಪಠಾಣ್ ಚಿತ್ರವನ್ನ ವಾರ್ ಸಿನಿಮಾ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಜೂನ್ ಅಷ್ಟರಲ್ಲಿ ಶೂಟಿಂಗ್ ಮುಗಿಸಿ ದೀಪಾವಳಿಗೆ ಪಠಾಣ್ ರಿಲೀಸ್‌ಗೆ ರೆಡಿಯಾಗುತ್ತೆ. ಈ ಸಿನಿಮಾದ ಬಳಿಕ ತ್ರೀ ಇಡಿಯಟ್ಸ್ ಖ್ಯಾತಿಯ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಾರೆ ಶಾರುಖ್. ಶಾರುಖ್ ಸಿನಿಮಾದ ಚಿತ್ರೀಕರಣದ ಜೊತೆಗೆ ಅವರ ಅಭಿಮಾನಿಯೊಬ್ಬರು ಅವರ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಟ್ರಿಬ್ಯೂಟ್ ಕೊಡುವ ವಿಶೇಷ ಕಾರ್ಯಕ್ರಮ ಸಂಯೋಜನೆ ಮಾಡಿದ್ರು.ಬುರ್ಜ್ ಖಲೀಫಾ ವತಿಯಿಂದ ಅದೇ ಬುರ್ಜ್ ಖಲೀಫಾದ ಮೇಲೆ ಶಾರುಖ್ ಅವರ ಹೆಸರು ಫೋಟೋ ಹಾಕಿ ಶುಭಾಶಯ ಕೋರಿ ಗೌರವ ನೀಡಲಾಯಿತು.ಶಾರುಖ್ ಅವರ ಸಿನಿಮಾದ ಕೆಲವು ದೃಶ್ಯಗಳನ್ನು ಕೂಡ ಪ್ರಸಾರ ಮಾಡಲಾಯಿತು.ಅಭಿಮಾನಿಯೊಬ್ಬರು ಶಾರುಖ್ ಹುಟ್ಟುಹಬ್ಬಕ್ಕೆ ಈ ರೀತಿಯ ಉಡುಗೊರೆ ಕೊಟ್ಟರು.

Leave a Reply

%d bloggers like this: