ಬಿಟಿವಿ ‘ವಸಂತ’ ಅವರು ನಿಜ ಜೀವನದಲ್ಲಿ ಯಾವ ರೇಂಜಿಗೆ ಇದಾರೆ ಗೊತ್ತಾ? ಫೋಟೋ ಶೂಟ್ ನೋಡಿ ಒಮ್ಮೆ

ಕನ್ನಡದ ಸುದ್ದಿವಾಹಿನಿಗಳಲ್ಲಿ ಇತ್ತೀಚೆಗೆ ಮಹಿಳಾ ವಾರ್ತಾವಾಚಕಿಯರದ್ದೇ ಹವಾ ಎಂಬತಾಗಿದೆ. ಏಕೆಂದರೆ ಇಂದು ಕನ್ನಡದ ಬಹುತೇಕ ಸುದ್ದಿ ವಾಹಿನಿಗಳಲ್ಲಿ ಮಹಿಳೆಯರದ್ದೇ ಮೇಲುಗೈ. ಇದು ಉತ್ತಮ ಬೆಳವಣಿಗೆಯೇ ಸರಿ. ಆದರೆ ಕೆಲವು ನಿರೂಪಕಿಯರು ಮಾಡುವ ಅತಿಯಾದ ವೈಭವೀಕರಣದ ಸುದ್ದಿ ನಿರೂಪಣೆ ಇಂದು ರಾಜ್ಯದ ಬಹುತೇಕ ಜನರಿಗೆ ಅಸಮಾಧಾನ ತರಿಸಿರುವುದು ಮಾತ್ರ ಅಷ್ಟೇ ಸತ್ಯ. ಕನ್ನಡದ ಸುದ್ದಿ ವಾಹಿನಿಗಳಲ್ಲಿ ಜನಪ್ರಿಯ ವಾರ್ತಾ ವಾಚಕಿಯರು ಅಂದರೆ ಬಿ.ಟಿವಿಯ ಹಿರಿಯ ಸಂಪಾದಕಿ ಮತ್ತು ಸುದ್ದಿ ನಿರೂಪಕಿ ಆಗಿರುವ ರಾಧಾ ಹಿರೇಗೌಡರ್. ಇವರು ಈ ಹಿಂದೆ ಪಬ್ಲಿಕ್ ಟಿವಿ ಯಲ್ಲಿ ಎಚ್.ಆರ್. ರಂಗನಾಥ್ ಅವರ ಜೊತೆ ಬಿಗ್ ಬುಲೆಟಿನ್ ಪ್ರೈಮ್ ನ್ಯೂಸ್ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದರು. ಇದೀಗ ಇವರ ಜಾಗದಲ್ಲಿ ನಿರೂಪಕಿ ದಿವ್ಯಜ್ಯೋತಿ ಇದ್ದಾರೆ.

ಸದ್ಯಕ್ಕೆ ದಿವ್ಯಾ ಜ್ಯೋತಿ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಡಿಂಪಿ ಎಂದೇ ಹೆಸರುವಾಸಿಯಾಗಿದ್ದಾರ. ಸೋಶಿಯಲ್ ಮೀಡಿಯಾದಲ್ಲಿ ದಿವ್ಯ ಜ್ಯೋತಿ ಅವರ ಬಗ್ಗೆ ಆಗಾಗ ಟ್ರೋಲ್ ಆಗುತ್ತಲೇ ಇರುತ್ತವೆ. ಅದರಂತೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾದ ಸುದ್ದಿ ನಿರೂಪಕಿ ಅಂದರೆ ಅದು ದಿವ್ಯಾ ವಸಂತ. ಕೆಲವೊಮ್ಮೆ ದೃಶ್ಯ ಮಾಧ್ಯಮಗಳು ತಮ್ಮ ಮಾಧ್ಯಮ ಕ್ಷೇತ್ರದ ಕರ್ತವ್ಯ ಜವಬ್ದಾರಿಯ ಚೌಕಟ್ಟನ್ನು ಮೀರಿ ಅನಗತ್ಯ ಸುದ್ದಿಗಳನ್ನು ವೈಭವೀಕರಿಸಿ ಪ್ರಸಾರ ಮಾಡಿದರೆ ಸಾರ್ವಜನಿಕರಿಂದ ಯಾವ ರೀತಿಯಾಗಿ ಟೀಕೆಗಳಿಗೆ ಒಳಪಡಬೇಕಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ಬಿ.ಟಿವಿ ಸಾಕ್ಷಿಯಾಗಿದೆ.

ಇತ್ತೀಚೆಗೆ ಕೆಲವು ದಿನಗಳ ಹಿಂದೆ ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ತಾಯಿ ಆಗುತ್ತಿರುವ ವಿಚಾರವನ್ನು ಬಿ. ಟಿ ವಿಯಲ್ಲಿ ತುಂಬಾ ವೈಭವೀಕರಿಸಿ ಅಮೂಲ್ಯ ತಾಯಿ ಆಗುತ್ತಿರುವುದು ಇಡೀ ರಾಜ್ಯವೇ ಖುಷಿ ಪಡುವಂತಹ ಸುದ್ದಿ ಎಂದು ಬಿತ್ತರಿಸಿತ್ತು.ಬಿ.ಟಿ.ವಿ ಯ ಡಿಜಿಟಲ್ ಮೀಡಿಯಾ ಹೆಡ್ ಆಗಿರುವ ದಿವ್ಯಾ ವಸಂತ ಅವರು ತಾವೇ ನಿರೂಪಕಿಯಾಗಿ ಅಮೂಲ್ಯ ಅವರು ತಾಯಿ ಆಗುತ್ತಿರುವುದು ಇಡೀ ರಾಜ್ಯವೇ ಸಂತೋಷ ಪಡುವ ವಿಷಯ ಎಂದು ಸುದ್ದಿ ನಿರೂಪಣೆ ಮಾಡಿದರು. ಈ ಸುದ್ದಿ ನಿರೂಪಣೆ ವಿಶ್ಲೇಷಣೆಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಯಿತು. ಸೋಶಿಯಲ್ ಮೀಡಿಯಾದಲ್ಲಂತೂ ನಿರೂಪಕಿ ದಿವ್ಯಾ ವಸಂತ ಅವರಿಗೆ ಭಾರಿ ತರಾಟೆಗೆ ತೆಗೆದುಕೊಂಡರು.

ಇನ್ನು ಟ್ರೋಲ್ ಪೇಜಸ್ ಗಳು ದಿವ್ಯಾ ವಸಂತ ಅವರ ವೈಯಕ್ತಿಕ ಫೋಟೋ ಬಳಸಿ ಅವರಿಗೆ ಮುಜುಗರವಾಗುವಂತೆ ಹಿಗ್ಗಮುಗ್ಗಾ ಜಾಡಿಸಿದವು. ಇದಾದ ಬಳಿಕ ಟ್ರೋಲ್ ಪೇಜಸ್ ಗಳ ಕುರಿತು ದಿವ್ಯಾ ವಸಂತ ಮತ್ತೊಂದು ಪ್ರೋಗ್ರಾಂ ಮಾಡಿದರು. ಇದರಲ್ಲಿ ಅವರು ಬಿಟ್ಟಿ ನೆಟ್ ಇದೆ ಅಂತ ಇಷ್ಟ ಬಂದ ಹಾಗೆ ಮನಬಂದಂತೆ ಕಮೆಂಟ್ ಮಾಡುವುದು ಟ್ರೋಲ್ ಮಾಡುವುದು ಟ್ಯಾಲೆಂಟ್ ಅಲ್ಲ ಎಂದು ಮತ್ತೆ ಟ್ರೋಲ್ ಗಳ ವಿರುದ್ಧವೇ ಕಿಡಿಕಾರಿದರು. ಇದರಿಂದ ಮತ್ತಷ್ಟು ಕೋಪಗೊಂಡ ಟ್ರೋಲ್ ಪೇಜಸ್ ಗಳು ಬಿಟ್ಟಿ ನೆಟ್ ಯಾರು ಕೊಡುತ್ತಾರೆ ಎಂದು ವೈಯಕ್ತಿಕ ಟೀಕಾ ಪ್ರಹಾರಕ್ಕೆ ಮುಂದಾದವು. ಹೀಗೆ ಬಿಟಿವಿ ಸುದ್ದಿ ನಿರೂಪಕಿ ದಿವ್ಯಾ ವಸಂತ ಸದ್ಯಕ್ಕೆ ರಾಜ್ಯದ್ಯಂತ ಸುದ್ದಿಯಾಗಿ ಜನಪ್ರಿಯತೆಯನ್ನ ಕೂಡ ಗಳಿಸಿಬಿಟ್ಟಿದ್ದಾರೆ.

ಯಾರೇ ಎಷ್ಟೇ ಟ್ರೋಲ್ ಮಾಡಿದರು ನಾನು ಇರೋದೇ ಹೀಗೆ ಅಂತ ದಿವ್ಯಾ ವಸಂತ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಲೈಫ್ ಸ್ಟೈಲ್ ಹೇಗಿದೆ ಎಂಬುದಕ್ಕೆ ತಮ್ಮ ಒಂದಷ್ಟು ಸ್ಟೈಲೀಶ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಜೊತೆಗೆ ರೀಲ್ಸ್ ಕೂಡ ಮಾಡಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಇದರ ನಡುವೆ ಟ್ರೋಲ್ ಪೇಜಸ್ ಗಳು ದಿವ್ಯಾ ವಸಂತ ಅವರು ಟ್ರೋಲ್ ಪೇಜಸ್ ಗಳಿಂದ ಜನಪ್ರಿಯರಾಗಿ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದಾರೆ. ಆದರೆ ಈ ಸುದ್ದಿಯ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ಇಲ್ಲ. ಇದೂ ಕೂಡ ಟ್ರೋಲ್ ಪೇಜಸ್ ಗಳೇ ದಿವ್ಯಾ ವಸಂತ ಅವರಿಗೆ ವ್ಯಂಗ್ಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.