ಅಣ್ಣ ರಾಜ್ಯಕ್ಕೆ ಮುಖ್ಯಮಂತ್ರಿ ಆದ್ರೆ ತಂಗಿ ರಸ್ತೆಬದಿಯಲ್ಲಿ ಟೀ ಮಾರುತ್ತ ಜೀವನ ನಡೆಸುತ್ತಿದ್ದಾಳೆ

ತನ್ನ ಸೋದರ ರಾಜ್ಯ ವೊಂದರ ಮುಖ್ಯಮಂತ್ರಿ ಆಗಿದ್ದರು ಕೂಡ ತಾನು ಮಾತ್ರ ಬೀದಿ ಬದಿಯಲ್ಲಿ ಕಾಫಿ ಟೀ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಹಳ್ಳಿಯೊಂದರ ಗ್ರಾಮ ಪಂಚಾಯತಿ ಸದಸ್ಯನಾದರೆ ಸಾಕು,ತನ್ನ ಇಡೀ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನೆ ಉತ್ತುಂಗ ಮಟ್ಟಕ್ಕೆ ತಲುಪಿಸಿಬಿಡುತ್ತಾರೆ. ಹಣ ಅಧಿಕಾರ ಸಿಕ್ಕರೆ ಸಾಕು ತನ್ನ ಇಡೀ ಕುಟುಂಬದವರಿಗೆ ಸರಕಾರದ ಎಲ್ಲಾ ಸೌಕರ್ಯವನ್ನ ಮೀಸಲಿಟ್ಟು ಬಿಡುತ್ತಾರೆ. ಆದರೆ ತನ್ನ ಅಣ್ಣ ಮುಖ್ಯಮಂತ್ರಿಯಾಗಿದ್ದರು ಕೂಡ ತನ್ನ ಅಣ್ಣನಿಂದ ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೇ ಯಾವುದೇ ರೀತಿಯ ಸಹಾಯವನ್ನ ಪಡೆದುಕೊಳ್ಳದೆ ತನ್ನ ಸ್ವಂತ ಶ್ರಮದಿಂದ ಬದುಕು‌ ಕಟ್ಟಿಕೊಂಡಿದ್ದಾರೆ.ಇದು ಯಾವುದೇ ಬೇರೆ ದೇಶದ ಸ್ಟೋರಿಯಲ್ಲ,ನಮ್ಮ ಭಾರತದ ಅತೀ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಕಥೆ ಇದು.

ಸಾಮಾನ್ಯವಾಗಿ ರಾಜ್ಯ ರಾಜಕಾರಣದಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣ ಅಂತಸ್ತು ಪದವಿಯ ವ್ಯಾಮೋಹ ಇದ್ದೇ ಇರುತ್ತದೆ. ಆಧ್ಯಾತ್ಮದ ಒಲವಿನಿಂದ ತನ್ನ ಕುಟುಂಬವನ್ನ ತೊರೆದು ಹೊರಬಂದ ಯೋಗಿ ಆದಿತ್ಯನಾಥ್ ಆದ್ಯಾತ್ಮಕ ಚಿಂತನೆಗಳಿಗೆ ಒಳಗಾಗಿ ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ಯೋಗಿ ಆದಿತ್ಯನಾಥ್ ಮತ್ತೆ ಹಿಂದಿರುಗಿ ನೋಡಿದವರಲ್ಲ. ಯೋಗಿ ಆದಿತ್ಯಾ ನಾಥ್ ಇಂದಿಗೂ ಕೂಡ ತನ್ನ ಕುಟುಂಬದ ಸ್ಥಿತಿ-ಗತಿಗಳ ಬಗ್ಗೆ ಗಮನಹರಿಸಿಲ್ಲ.ಶಶಿ ದೇವಿ ತನ್ನ ಸ್ವಂತ ಸಹೋದರಿ ಎಂಬುದರ ಬಗ್ಗೆ ಯೋಗಿ ಆದಿತ್ಯನಾಥ್ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಆದಿತ್ಯನಾಥ್ ಅವರ ಕೊನೆಯ ತಂಗಿ ಎನ್ನಲಾಗುತ್ತಿರುವ ಶಶಿ ದೇವಿಯವರು ಪುಣ್ಯ ಕ್ಷೇತ್ರವಾದಂತಹ ಋಷಿಕೇಶದಲ್ಲಿ ಎರಡು ಚಹಾದ ಅಂಗಡಿಗಳನ್ನ ನಡೆಸಿಕೊಂಡು ಬರುತ್ತಿದ್ದಾರೆ. ಒಂದು ಋಷಿಕೇಶದ ಭುವನೇಶ್ವರಿ ಮಂದಿರದ ಹತ್ತಿರ ಮತ್ತೊಂದು ನೀಲಕಂಠೇಶ್ವರ ಮಂದಿರದ ಬಳಿ ವ್ಯಾಪಾರ ಮಾಡುತ್ತಿದ್ದಾರೆ.

ಕೇವಲ ಕಾಫಿ ಟೀ ಮಾತ್ರವಲ್ಲದೆ ಹೂ ಹಣ್ಣು ದಿನಪತ್ರಿಕೆಗಳನ್ನು ಕೂಡ ಮಾರಾಟ ಮಾಡುತ್ತಿದ್ದಾರೆ. ತನ್ನ ಅಣ್ಣ ರಾಜ್ಯದ ಮುಖ್ಯಮಂತ್ರಿ ಯಾಗಿದ್ದು ನಮಗೆ ನೆರವು ನೀಡಿಲ್ಲದಿದ್ದರು ಕೂಡ ನಮ್ಮ ಹಳ್ಳಿಯ ಗುಡ್ಡಗಾಡು ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನ ಮಾಡಿಕೊಟ್ಟರೆ ಅಷ್ಟೇ ಸಾಕು.ನನಗೆ ನನ್ನ ಅಣ್ಣನನ್ನು ಭೇಟಿ ಮಾಡಬೇಕು ಎಂಬ ಮಹಾದಾಸೆ ಹೊಂದಿದ್ದರು ಕೂಡ ಇದಕ್ಕೆ ಯಾವುದೇ ರೀತಿಯ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಕೇವಲ ಸಾಮಾನ್ಯ ಒಂದು ಅಧಿಕಾರ ಸಿಕ್ಕರೆ ಸಾಕು ದರ್ಪದಿಂದ ಮೆರೆಯುವ ಜನರ ನಡುವೆ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಆದರ್ಶ ಬದುಕು‌ ನಡೆಸುತ್ತಿರುವ ಶಶಿದೇವಿ ರವರು ಆದರ್ಶವಾಗಿದ್ದಾರೆ.

Leave a Reply

%d bloggers like this: