ವಯಸ್ಸು ಇನ್ನೂ ಕೂಡ ಹದಿನೈದು ದಾಟಿಲ್ಲ.ಆದರೆ ಈ ಅಣ್ಣ ತಂಗಿಯರ ಆದಾಯ ತಿಂಗಳಿಗೆ 20 ಲಕ್ಷಕ್ಕೂ ಹೆಚ್ಚು. ಅದು ಹೇಗೆ ನೋಡಿ

ವಯಸ್ಸು ಇನ್ನೂ ಕೂಡ ಹದಿನೈದು ದಾಟಿಲ್ಲ.ಆದರೆ ಈ ಅಣ್ಣ ತಂಗಿಯರ ಆದಾಯ ತಿಂಗಳಿಗೆ ಹದಿನೈದು ಲಕ್ಷಕ್ಕೂ ಹೆಚ್ಚು.ಇವರು ಆದಾಯ ಗಳಿಸುವುದು ಹೇಗೆ ಗೊತ್ತಾ.ಗಣಿಗಾರಿಕೆ ಮಾಡಿ,ಅರೇ ಈ ಚಿಕ್ಕ ವಯಸ್ಸಿಗೆ ಇವರೇನು ಗಣಿಗಾರಿಕೆ ಮಾಡುತ್ತಾರೆ ಅಂದುಕೊಳ್ಳಬಹುದು.ಈ ಬ್ರದರ್ ಅಂಡ್ ಸಿಸ್ಟರ್ ಮಾಡುತ್ತಿರುವುದು ಕಂಪ್ಯೂಟರ್ ಗಣಿಗಾರಿಕೆ.ಅರೇ,ಈ ಕಂಪ್ಯೂಟರ್ ನಲ್ಲಿ ಅದೆಂತಹ ಗಣಿಗಾರಿಕೆ.ಈ ವಿಶೇಷ ಅಚ್ಚರಿಯ ಸುದ್ದಿಯನ್ನು ನೀವು ಓದಲೇಬೇಕು.ಸಾಮಾನ್ಯವಾಗಿ ಕೆಲವು ಮಕ್ಕಳು ಬಾಲ್ಯದಲ್ಲಿ ತಮ್ಮಲ್ಲಿರುವ ವಿಶೇಷ ಪ್ರತಿಭೆಯ ಮೂಲಕ ಸಾಧನೆ ಮಾಡಿ ಸುದ್ದಿಯಾಗುತ್ತಾರೆ.ಆದರೆ ಭಾರತೀಯ ಮೂಲದ ಈ ಇಬ್ಬರು ಅಮೇರಿಕಾದ ಅಣ್ಣ ತಂಗಿಯರು ಕ್ರಿಪ್ಟೋ ಕರೆನ್ಸಿ ಗಣಿಗಾರಿಕೆ ಮಾಡುವ ಮೂಲಕ ತಿಂಗಳಿಗೆ ಬರೋಬ್ಬರಿ ಇಪ್ಪತ್ತೆರಡು ಲಕ್ಷಕ್ಕೂ ಅಧಿಕ ಆದಾಯ ನೋಡಿ ಅಮೇರಿಕಾದಲ್ಲಿ ಬಹುತೇಕರು ಅಚ್ಚರಿಯಾಗಿದ್ದಾರೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ಭಾರತೀಯರಿಗೆ ಅಷ್ಟಾಗಿ ಪರಿಚಯವಾಗಿಲ್ಲವಾದರು ಕೂಡ ಕೊಂಚ ಮಟ್ಟಿಗೆ ಶೇರು ಆನ್ಲೈನ್ ಟ್ರೇಡಿಂಗ್ ನಲ್ಲಿರುವ ಒಂದಷ್ಟು ಮಂದಿಗೆ ಇದರ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ.

ಈ ಕ್ರಿಪ್ಟೋ ಕರೆನ್ಸಿ ಅಭೌತಿಕ ಸ್ವರೂಪವಾದದ್ದು,ಇದು ಜಗತ್ತಿನಾದ್ಯಂತ ತನ್ನದೇಯಾದ ಹವಾ ಸೃಷ್ಟಿ ಮಾಡಿದೆ.ವಿನಿಮಯ ಕೇಂದ್ರಗಳಲ್ಲಿ ಈ ಕ್ರಿಪ್ಟೋ ಕರೆನ್ಸಿ ಭಾರಿ ಬೇಡಿಕೆಯನ್ನು ಒಳಗೊಂಡಿದೆ.ಈ ಕ್ರಿಪ್ಟೋ ಕರೆನ್ಸಿಗೆ ಪ್ರಬಲ ಪೈಪೋಟಿಯಾಗಿ ಮತ್ತೊಂದು ಡಿಜಿಟಲ್ ಕರೆನ್ಸಿಯಾಗಿರುವ ಬಿಟ್ ಕಾಯಿನ್ ಕೂಡ ಆನ್ಲೈನ್ ನಲ್ಲಿ ಲಕ್ಷಾಂತರ ರೂ.ಗಳ ವಹಿವಾಟು ನಡೆಸುತ್ತಿದೆ. ಇನ್ನು ಕ್ರಿಪ್ಟೋ ಕರೆನ್ಸಿ ಗಣಿಗಾರಿಕೆ ಅಂದರೆ ಕ್ರಿಪ್ಟೋ ಕರೆನ್ಸಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಕ್ರಿಪ್ಟೋ ಮೈನಿಂಗ್ ಎನ್ನಲಾಗುತ್ತದೆ.ಇದನ್ನು ಮನೆಯಲ್ಲಿಯೇ ಕುಳಿತು ಕಂಪ್ಯೂಟರ್ ಮೂಲಕ ಮಾಡಬಹುದಾಗಿದೆ.ಈ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡುವ ಮೂಲಕ ಲಕ್ಷಾಂತರ ರೂ.ಗಳ ವಹಿವಾಟು ನಡೆಸುವ ಉದ್ಯಮವೇ ಹೆಚ್ಚಾಗಿವೆ.

ಫೆಬ್ರವರಿ ತಿಂಗಳಿನಲ್ಲಿ ಈ ಕ್ರಿಪ್ಟೋ ಕರೆನ್ಸಿಯ ಮೌಲ್ಯವು ದಿಢೀರ್ ಏರಿಕೆ ಕಾಣುತ್ತಿದ್ದನ್ನು ಗಮನಿಸಿದ ಈ 14 ವರ್ಷದ ಇಶಾನ್ ಮತ್ತು 9 ವರ್ಷದ ಆನ್ಯಾ ಇಬ್ಬರು ಆಸಕ್ತಿಯಿಂದ ಕ್ರಿಪ್ಟೋ ಕರೆನ್ಸಿಯನ್ನ ಕೊಳ್ಳುವ ಆಲೋಚನೆ ಮಾಡುತ್ತಾರೆ.ಆದರೆ ಅದನ್ನ ಕೊಳ್ಳಲು ಅಗತ್ಯವಾಗಿದ್ದ ಹಣ ಇರದ ಕಾರಣ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ.ಇದಕ್ಕೆ ತಾವು ಗೇಮ್ ಆಡುತ್ತಿದ್ದ ಕಂಪ್ಯೂಟರ್ ಅನ್ನು ಸೂಕ್ತ ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ. ಈ ಕ್ರಿಪ್ಟೋ ಮೈನಿಂಗ್ ಆರಂಭಿಸಿದ ದಿನಗಳಲ್ಲಿ ಪ್ರತಿದಿನ ಮೂರು ಡಾಲರ್ ಆದಾಯ ಬರುತ್ತಿರುತ್ತದೆ.ಅದು ದಿನದಿಂದ ದಿನಕ್ಕೆ ಬೆಳೆದು ಇದೀಗ ತಿಂಗಳಿಗೆ ಬರೋಬ್ಬರಿ ಇಪ್ಪತ್ತೆರಡು ಲಕ್ಷ ರೂ.ಗಳ ಗಳಿಕೆ ಆಗುವ ಮಟ್ಟಿಗೆ ಬೆಳೆದು ನಿಂತಿದೆ.ಒಟ್ಟಾರೆಯಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಅಣ್ಣ- ತಂಗಿಯರು ಲಕ್ಷಾಂತರ ರೂ.ಗಳ ಆದಾಯ ಗಳಿಸುತ್ತಿರುವುದನ್ನ ಕಂಡು ಅಮೆರಿಕಾದ ಬಹಳಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: