ಬ್ರಹ್ಮಾಸ್ತ್ರ ಚಿತ್ರವು ಕೆಜಿಎಫ್ ಚಾಪ್ಟರ್2 ಚಿತ್ರದ ಮೊದಲ ದಿನದ ದಾಖಲೆ ಮುರಿಯಲಿದೆ ಎಂದು ಹೇಳಿದ್ದ ಸಿನಿಪಂಡಿತರು, ಆದರೆ ಆಗಿದ್ದೆ ಬೇರೆ

ಬಾಲಿವುಡ್ ಸಕ್ಸಸ್ ಫುಲ್ ಖ್ಯಾತ ನಟಿ ಆಲಿಯಾ ಭಟ್ ಮತ್ತು ನಟ ರಣ್ ಬೀರ್ ಕಪೂರ್ ನಟನೆಯ ಪ್ಯಾನ್ ಇಂಡಿಯಾ ಬ್ರಹ್ಮಾಸ್ತ್ರ ಸಿನಿಮಾ ಇಂದು ಸೆಪ್ಟೆಂಬರ್ 9ರಂದು ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ಈಗಾಗಲೇ ರಿಲೀಸ್ ಆಗಿದ್ದ ಬ್ರಹ್ಮಾಸ್ತ್ರ ಸಿನಿಮಾದ ಟ್ರೇಲರ್ ಕಂಡು ಗ್ರಾಫಿಕ್ಸ್ ಬಗ್ಗೆ ಕಳಪೆ ಆಗಿವೆ ಎಂದು ಟೀಕೆಗಳು ಕೇಳಿ ಬಂದಿದ್ವು. ಈಗಾಗಲೇ ಸಾಲು ಸಾಲು ಹಿಂದಿ ಸಿನಿಮಾಗಳು ನೆಲಕಚ್ಚಿವೆ. ಹಾಗಾಗಿ ಈ ಬ್ರಹ್ಮಾಸ್ತ್ರ ಸಿನಿಮಾದ ಟ್ರೇಲರ್ ನೋಡಿದ್ರೆ ಇದು ಕೂಡ ಸೋಲುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ರಿಲೀಸ್ಗೂ ಮುನ್ನವೇ ಬ್ರಹ್ಮಾಸ್ತ್ರ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ 23 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇವತ್ತಿನ ಶೋ ಕಲೆಕ್ಷನ್ ನಲ್ಲಿಯೇ ಹನ್ನೊಂದು ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ.

ತೆಲುಗು ಅವತರಣಿಕೆಯ ಬ್ರಹ್ಮಾಸ್ತ್ರ ಸಿನಿಮಾ ಮೊದಲ ದಿನವೇ ಏಳು ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಆದ್ರೇ ಬ್ರಹ್ಮಾಸ್ತ್ರ ಸಿನಿಮಾ ಕನ್ನಡ ಕೆಜಿಎಫ್2 ಸಿನಿಮಾ ಮಾಡಿದ ಕಲೆಕ್ಷನ್ ಅಂತೂ ಮಾಡಿಲ್ಲ. ಕೆಜಿಎಫ್2 ಹಿಂದಿ ವರ್ಶನ್ ನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಬರೋಬ್ಬರಿ ನಲವತ್ತು ಕೋಟಿ ಬಾಚಿ ಮೊದಲ ದಿನವೇ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಒಟ್ಟಾರೆಯಾಗಿ ಕೆಜಿಎಫ್2 ಸಿನಿಮಾ ಹಿಂದಿಯಲ್ಲಿ ಒಂದು ಸುನಾಮಿ ಅಲೆ ಎಬ್ಬಿಸಿತು. ಆದರೆ ಬಾಲಿವುಡ್ ಕ್ಯುಟ್ ಕಪಲ್ ಅಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಅಭಿನಯದ ಪ್ಯಾನ್ ಇಂಡಿಯಾ ಬ್ರಹ್ಮಾಸ್ತ್ರ ಸಿನಿಮಾ ಎಷ್ಟು ಕೋಟಿ ಗಳಿಕೆ ಮಾಡಲಿದೆ ಅನ್ನೋದು ಮತ್ತು ಚಿತ್ರದ ಬಗ್ಗೆ ಸ್ಪಷ್ಟ ಅಭಿಪ್ರಾಯ ಇಂದು ಸಂಜೆಯ ನಂತರ ತಿಳಿಯಲಿದೆ. ಬ್ರಹ್ಮಾಸ್ತ್ರ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಆಗಿರೋ ಸಿನಿಮಾ.

ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ದಂಪತಿಗಳಿಬ್ಬರು ಈ ಚಿತ್ರದ ಪ್ರಚಾರಕ್ಕಾಗಿ ಭಾರಿ ಶ್ರಮ ಹಾಕಿದ್ದಾರೆ. ಅದರಲ್ಲಿ ನಟಿ ಆಲಿಯಾ ಭಟ್ ಅವರು ತಾವು ಗರ್ಭಿಣಿ ಆಗಿದ್ರು ಕೂಡ ಚಿತ್ರದ ಶೂಟಿಂಗ್ ಮತ್ತು ಪ್ರಮೋಶನ್ ಕೆಲ್ಸದಲ್ಲಿ ತೊಡಗಿಸಿಕೊಂಡಿದ್ದರು. ಈ ಬ್ರಹ್ಮಾಸ್ತ್ರ ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕರಣ್ ಜೋಹರ್, ಅಯನ್ ಮುಖರ್ಜಿ, ಅಪೂರ್ವ ಮೆಹ್ತಾ ಮತ್ತು ನಮಿತ್ ಮಲ್ಹೋತ್ರಾ ಜೊತೆಗೆ ನಾಯಕ ನಟ ರಣ್ ಬೀರ್ ಕಪೂರ್ ಕೂಡ ಬಂಡವಾಳ ಹೂಡಿದ್ದಾರೆ. ತಾರಾ ಬಳಗದಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಸೇರಿದಂತೆ ಮುಂತಾದವರು ನಟಿಸಿದ್ದಾರೆ.