ಬ್ರಹ್ಮಾಸ್ತ್ರ ಚಿತ್ರಕ್ಕೆ ರಣಬೀರ್ ಹಾಗೂ ಆಲಿಯಾ ಭಟ್ ಅವರಿಗೆ ಸಿಕ್ತು ಇಷ್ಟು ದೊಡ್ಡ ಮೊತ್ತದ ಸಂಭಾವನೆ

ಬಾಲಿವುಡ್ ನಲ್ಲಿ ಸದ್ಯಕ್ಕೆ ಸಖತ್ ಸುದ್ದಿಯಲ್ಲಿರೋದು ಅಂದ್ರೆ ಅದು ಬ್ರಹ್ಮಾಸ್ತ್ರ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್. ಬಾಲಿವುಡ್ ಅನೇಕ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ನಟನೆಯ ಪ್ಯಾನ್ ಇಂಡಿಯಾ ಮೂವಿ ಬ್ರಹಾಸ್ತ್ರ ಚಿತ್ರ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಬಾಕ್ಸ್ ಆಫೀಸ್ ನಲ್ಲಿ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಹಾಗಾಗಿ ಬಾಲಿವುಡ್ ಕೂಡ ಕೊಂಚ ನಿಟ್ಟುಸಿರು ಬಿಟ್ಟಿದೆ. ಈ ಚಿತ್ರದ ಬಗ್ಗೆ ಇಡೀ ಬಾಲಿವುಡ್ ರಂಗವೇ ಭಾರಿ ನಿರೀಕ್ಷೆ ಇಟ್ಕೊಂಡು ಕಾಯ್ತಿತ್ತು. ಅದ್ರಂತೆ ಬ್ರಹ್ಮಾಸ್ತ್ರ ಸಿನಿಮಾ ಎಲ್ಲರ ನಿರೀಕ್ಷೆಯಂತೆ ಯಶಸ್ವಿಯಾಗಿದೆ. ಇದೀಗ ಎಲ್ಲರಿಗೂ ಕಾಡುತ್ತಿರೋ ಪ್ರಶ್ನೆ ಅಂದರೆ ಬರೋಬ್ಬರಿ 650 ಕೋಟಿ ವೆಚ್ಚದಲ್ಲಿ ತಯಾರಾದ ಈ ಪ್ಯಾನ್ ಇಂಡಿಯಾ ಸಿನಿಮಾದ ಭಾರತೀಯ ಚಿತ್ರರಂಗದ ದಿಗ್ಗಜ ನಟರೇ ಕಾಣಿಸಿಕೊಂಡಿದ್ದಾರೆ.

ಅಂದ್ಮೇಲೆ ಈ ನಟ ನಟಿಯರಿಗೆ ಎಷ್ಟೆಷ್ಟು ಸಂಭಾವನೆ ನೀಡಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದಾರೆ. ಅದಕ್ಕೆ ಉತ್ತರ ಇಲ್ಲಿದೆ. ಬ್ರಹ್ಮಾಸ್ತ್ರ ಸಿನಿಮಾದ ನಾಯಕ ರಣ್ ಬೀರ್ ಕಪೂರ್ ಈ ಚಿತ್ರದ ನಟನೆಗೆ ಬರೋಬ್ಬರಿ 25-30 ಕೋಟಿ ಸಂಭಾವನೆ ಪಡೆದಿದ್ದಾರಂತೆ. ನಾಯಕಿ ಆಲಿಯಾ ಭಟ್ ಅವರಿಗೆ ಈ ಚಿತ್ರದ ನಟನೆಗೆ 10-12 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಇನ್ನು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ 8-10 ಕೋಟಿ, ಟಾಲಿವುಡ್ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ 9-10 ಕೋಟಿ, ಅದೇ ರೀತಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಮೌನಿ ರಾಯ್ ಅವರಿಗೂ ಕೂಡ ಮೂರು ಕೋಟಿಗೂ ಅಧಿಕ ಸಂಭಾವನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬ್ರಹ್ಮಾಸ್ತ್ರ ಸಿನಿಮಾಗಾಗಿ ನಿರ್ದೇಶಕ ಅಯಾನ್ ಮುಖರ್ಜಿ ಅವರು ಸರಿ ಸುಮಾರು ಆರೇಳು ವರ್ಷಗಳ ಅವಿರತ ಶ್ರಮ ಹಾಕಿದ್ದರು. ಅವರ ಶ್ರಮಕ್ಕೆ ತಕ್ಕ ಹಾಗೇ ಇದೀಗ ಪ್ರತಿಫಲ ಸಿಕ್ಕಿದೆ. ಒಟ್ಟಾರೆಯಾಗಿ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದು, ಇಡೀ ಚಿತ್ರ ತಂಡ ಫುಲ್ ಖುಷ್ ಆಗಿದೆ.

Leave a Reply

%d bloggers like this: