ಬ್ರಹ್ಮಾಸ್ತ್ರ ಚಿತ್ರ ಮಾಡಿರುವ ಗಳಿಕೆ ಬಗ್ಗೆ ಸತ್ಯ ಬಯಲು ಮಾಡಿದ ಬಾಲಿವುಡ್ ಸ್ಟಾರ್ ನಟಿ

ಇತ್ತೀಚೆಗೆ ಕಳೆದ ವಾರ ತಾನೇ ವರ್ಲ್ಡ್ ವೈಡ್ ರಿಲೀಸ್ ಆಗಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರೋ ಬ್ರಹ್ಮಾಸ್ತ್ರ ಸಿನಿಮಾದ ಯಶಸ್ಸಿನ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣೌತ್ ಕುಹಕ ಮಾಡಿದ್ದಾರೆ. ಹೌದು ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಮುಖ್ಯ ಭೂಮಿಕೆಯ ಬ್ರಹ್ಮಾಸ್ತ್ರ ಸಿನಿಮಾ ಕಳೆದ ವಾರ ಸೆಪ್ಟೆಂಬರ್ 9ರಂದು ಪಂಚ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಬ್ರಹ್ಮಾಸ್ತ್ರ ಸಿನಿಮಾದ ತೆಲುಗು ಅವತರಣಿಕೆ ಮತ್ತು ದಕ್ಷಿಣ ಭಾರತದಲ್ಲಿ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಪ್ರೆಸೆಂಟ್ ಮಾಡಿದ್ರು. ಇದಕ್ಕಾಗಿ ಅವರು ಬರೋಬ್ಬರಿ ಹತ್ತು ಕೋಟಿ ಸಂಭಾವನೆಯನ್ನ ಕೂಡ ಪಡೆದುಕೊಂಡಿದ್ರು. ಅದ್ರಂತೆ ಸಿನಿಮಾ ದೇಶಾದ್ಯಂತ ಉತ್ತಮ ಮೆಚ್ಚುಗೆ ಕೂಡ ಪಡೆದುಕೊಂಡು ಭರ್ಜರಿಯಾಗಿ ಪ್ರದರ್ಶನ ಕಾಣ್ತಿದೆ.

ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೆ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿದೆ ಎಂದು ಹೇಳಲಾಗ್ತಿದೆ. ಬ್ರಹ್ಮಾಸ್ತ್ರ ಚಿತ್ರದ ಈ ಕಲೆಕ್ಷನ್ ಬಗ್ಗೆ ಬಾಲಿವುಡ್ ಖ್ಯಾತ ನಟಿ ಕಂಗನಾ ರಣೌತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬ್ರಹ್ಮಾಸ್ತ್ರ ಸಿನಿಮಾ 400 ಕೋಟಿ ವೆಚ್ಚದಲ್ಲಿ ತಯಾರಾದ ಸಿನಿಮಾ. ಇದುವರೆಗೆ ಮೂಲಗಳ ಪ್ರಕಾರ ಬರೀ ನಿವ್ವಳ 144 ಕೋಟಿ ಗಳಿಕೆ ಮಾಡಿದೆ. ಹೀಗೀರೋವಾಗ ಇದು ಹೂಡಿಕೆ ಮಾಡಲಾದ ಬಂಡವಾಳದ ಅರ್ಧದಷ್ಟು ಹಣವನ್ನು ಕೂಡ ಕಲೆಕ್ಷನ್ ಮಾಡಿಲ್ಲ. ಹೀಗಾಗಿ ಬ್ರಹ್ಮಾಸ್ತ್ರ ಸಿನಿಮಾವನ್ನ ಅದೇಗೆ ಸೂಪರ್ ಹಿಟ್ ಸಿನಿಮಾ ಎಂದು ಪರಿಗಣಿಸಲಾಯಿತು. ಇದು ಒಂದು ರೀತಿಯಾಗಿ ಮೂವಿ ಮಾಫಿಯಾ ಹೇಗೆ ನಡೆಯುತ್ತದೆ ಅನ್ನೋದನ್ನ ತೋರಿಸುತ್ತದೆ.

ಬಾಲಿವುಡ್ ನಲ್ಲಿ ಯಾವ ಸಿನಿಮಾವನ್ನ ಹಿಟ್ ಮತ್ತು ಪ್ಲಾಫ್ ಎಂದು ಘೋಷಿಸಬೇಕು ಅನ್ನೋದನ್ನ ಅವರೇ ಸ್ವತಃ ನಿರ್ಣಯ ಮಾಡಿರುತ್ತಾರೆ ಅನಿಸುತ್ತೆ ಎಂದು ಬ್ರಹ್ಮಾಸ್ತ್ರ ಸಿನಿಮಾದ ಯಶಸ್ಸಿನ ಬಗ್ಗೆ ಕಲೆಕ್ಷನ್ ಬಗ್ಗೆ ಕಂಗನಾ ರಣೌತ್ ಕುಹಕ ವ್ಯಂಗ್ಯವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಂಗನಾ ಅವರ ಈ ಪೋಸ್ಟ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಮಾಡಿತ್ತು. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Leave a Reply

%d bloggers like this: