ಬಾಯ್ ಫ್ರೆಂಡ್ ಜೊತೆ ಇಸ್ಲಾಮಿಕ್ ಪದ್ದತಿಯಲ್ಲಿ ಮದುವೆಯಾದ ಬಿಲ್ ಗೇಟ್ಸ್ ಮಗಳು.. ಮದುವೆ ಸಂಭ್ರಮದಲ್ಲಿ ಡೈವರ್ಸ್ ಆದ ತಂದೆ ತಾಯಿ ಬಾಗಿ..

ಮಗಳ ಮದುವೆಯಲ್ಲಿ ಡಿವೋರ್ಸ್ ಆಗಿದ್ದ ದಂಪತಿಗಳು ಒಟ್ಟಿಗೆ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಹೌದು ಇತ್ತೀಚೆಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಮೈಕ್ರೋಸಾಫ್ಟ್ ಸ್ಥಾಪಕರಾದ ಬಿಲ್ ಗೇಟ್ಸ್ ಮತ್ತು ಮಿಲಿಂದಾ ತಮ್ಮ 27 ವರ್ಷಗಳು ಸುದೀರ್ಘ ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಬಿಲ್ ಗೇಟ್ಸ್ ಮತ್ತು ಮೆಲಿಂದಾ ದಂಪತಿಗಳು ಒಬ್ಬರಿಗೊಬ್ಬರು ಪರಸ್ಪರ ಅನ್ಯೂನ್ಯತೆಯಿಂದಾನೆ ಜೀವನ ಸಾಗಿಸುತ್ತಿದ್ದರು. ಮಿಲಿಂದಾ ಅವರು ಬಿಲ್ ಗೇಟ್ಸ್ ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ನೆರವಾಗುವುದರ ಜೊತೆಗೆ ತಾವೂ ಕೂಡ ಒಂದಷ್ಟು ವ್ಯವಹರದಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಷ್ಟಿತ ಮ್ಯಾಗ್ ಜಿ಼ನ್ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಬಿಲ್ ಗೇಟ್ಸ್ ಅವರು ಬರೋಬ್ಬರಿ 124 ಶತ ಕೋಟಿ ಆಸ್ತಿ ಮೌಲ್ಯ ಹೊಂದುವ ಮೂಲಕ ತಮ್ಮ ಉದ್ಯಮದಲ್ಲಿ ಯಶಸ್ಸನ್ನು ಕಂಡರು.

ಆದರೆ ತಮ್ಮ ಸಾಂಸಾರಿಕ ಜೀವನದಲ್ಲಿ ಅಂತಿಮ ಘಟ್ಟದಲ್ಲಿ ಎಡವಿದರು ಎನ್ನಬಹುದು. ಇದಕ್ಕೆ ಕಾರಣ ಅಂದರೆ ಬಿಲ್ ಗೇಟ್ಸ್ ಅವರು ಚೆರ್ರೀ ಎಂಬ ಮಹಿಳೆ ಜೊತೆ ಸಂಬಂಧ ಹೊಂದಿದ್ದರಂತೆ.2013 ರಿಂದಲೂ ಚೆರ್ರೀ ಜೊತೆ ಬಾಂಧವ್ಯ ಹೊಂದಿದ್ದ ಬಿಲ್ ಗೇಟ್ಸ್ ಅವರಿಗೆ ಮಿಲಿಂದಾ ಅವರು ಎಚ್ಚರಿಕೆ ನೀಡಿದರು ಸಹ ತನ್ನ ವ್ಯಕ್ತಿತ್ವ ಬದಲಾಯಿಸಿಕೊಳ್ಳಲಿಲ್ಲ. ಹೀಗಾಗಿ ಮಿಲಿಂದಾ ಅವರು ಬಿಲ್ ಗೇಟ್ಸ್ ಅವರಿಗೆ ವಿಚ್ಚೇದನ ನೀಡಿದರು. ಇದೀಗ ಮತ್ತೆ ಬಿಲ್ ಗೇಟ್ಸ್ ಮತ್ತು ಮಿಲಿಂದಾ ತಮ್ಮ ಮಗಳ ಮದುವೆಯಲ್ಲಿ ಒಟ್ಟಾಗಿ ಭಾಗವಹಿಸಿದ್ದಾರೆ.

ಹೌದು ಬಿಲ್ ಗೇಟ್ಸ್ ಮತ್ತು ಮಿಲಿಂದಾ ದಂಪತಿಗಳ ಮೊದಲ ಪುತ್ರಿ ಜೆನ್ನಿಫರ್ ಕ್ಯಾತರಿನ್ ಗೇಟ್ಸ್ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ತಮ್ಮ ಗೆಳೆಯ ಕುಲೀನ ನೈಲ್ ನಾಸರ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಜೆನ್ನಿಫರ್ ಕ್ಯಾತರಿನ್ ಅವರು ಮದುವೆ ಆಗಿರುವ ಕುಲೀನ ನೈಲ್ ಅವರು ಇಸ್ಲಾಂ ಧರ್ಮದವರಾಗಿದ್ದಾರೆ. ಆದ್ದರಿಂದ ಜೆನ್ನಿಫರ್ ಬಿಲ್ ಗೇಟ್ಸ್ ಮತ್ತು ನಯಲ್ ಅವರ ವಿವಾಹವು ಇಸ್ಲಾಂ ಧರ್ಮದ ಸಂಪ್ರದಾಯದಂತೆ ನಡೆಯಿತು ಎಂದು ತಿಳಿದುಬಂದಿದೆ. ಇವರಿಬ್ಬರು ಒಟ್ಟಿಗೆ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿಯಲ್ಲಿ ಅಧ್ಯಾಯನ ಮಾಡಿದ್ದಾರೆ. ನಯಲ್ ನಾಸರ್ ಅವರು ಅಮೆರಿಕಾದ ಪ್ರಸಿದ್ದ ಕುದುರೆ ಸವಾರರಲ್ಲಿ ಒಬ್ಬರಾಗಿದ್ದಾರೆ.