ಬಾಕ್ಸಿಂಗ್ ಆಟಗಾರನ 4 ಕೋಟಿ ರೂಪಾಯಿಯ ಸ್ಪೋರ್ಟ್ಸ್ ಕಾರು ಹರಾಜಿನಲ್ಲಿ ಬರೋಬ್ಬರಿ 33 ಕೋಟಿಗೆ ಮಾರಾಟ

ಹರಾಜಿನಲ್ಲಿ ಮಾಜಿ ಬಾಕ್ಸರ್ ಮೈಕ್ ಟೈಸನ್ ಉಪಯೋಗಿಸುತ್ತಿದ್ದ ಫೆರಾರಿ ಎಫ್50 ಕಾರು ಬರೋಬ್ಬರಿ 4.2 ಮಿಲಿಯನ್ ಯುಎಸ್ ಡಾಲರ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಹೌದು ಅಮೆರಿಕನ್ ಮಾಜಿ ಬಾಕ್ಸರ್ ಮೈಕ್ ಟೈಸನ್ 1985 ರಿಂದ 2005 ರವರೆಗೆ ಬಾಕ್ಸಿಂಗ್ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿದವರು. ಮೈಕ್ ಟೈಸನ್ ಅವರನ್ನ ಐರನ್ ಮೈಕ್ ಮತ್ತು ಕಿಡ್ ಡೈನಾಮೈಟ್ ಎಂದೂ ಕರೆಯಲಾಗುತ್ತದೆ. ಹೆವಿ ವೇಯ್ಟ್ ಬಾಕ್ಸರ್ ಆಗಿರೋ ಮೈಕ್ ಟೈಸನ್ ಅವರು ಇತ್ತೀಚೆಗೆ ತೆರಕಂಡ ಪುರಿ ಜಗನ್ನಾಥ್ ಅವರ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಕ್ಸಿಂಗ್ ಕ್ರೀಢಾಧಾರಿತ ಸಿನಿಮಾವಾಗಿರೋ ಈ ಲೈಗರ್ ಚಿತ್ರದಲ್ಲಿ ವಿಜಯ್ ದೇವರ ಕೊಂಡ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದು, ಮೈಕ್ ಟೈಸನ್ ಕೂಡ ಸಾಥ್ ನೀಡಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.

ಆದರೆ ಚಿತ್ರ ನಿರೀಕ್ಷೆ ಮಟ್ಟಕ್ಕೆ ಕಮಾಲ್ ಮಾಡಿಲ್ಲ. ಇದೆಲ್ಲದರ ನಡುವೆ ಇದೀಗ ಮೈಕ್ ಟೈಸನ್ ಅವರ ಹೆಸರು ಭಾರಿ ಸುದ್ದಿ ಆಗಿದೆ. ಯಾಕಪ್ಪಾ ಅಂದರೆ ಇತ್ತೀಚೆಗೆ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಅವರು ಉಪಯೋಗಿಸುತ್ತಿದ್ದಂತಹ ಫೆರಾರಿ ಎಫ್50 ಕಾರನ್ನ ಇತ್ತೀಚೆಗೆ ಹರಾಜಿಗೆ ಇಡಲಾಗಿತ್ತು. ಎಲ್ಲರಿಗೂ ಅಚ್ಚರಿ ಅಂದರೆ ಈ ಫೆರಾರಿ ಎಫ್50 ಕಾರು ಬರೋಬ್ಬರಿ 4.2 ಮಿಲಿಯನ್ ಯುಎಸ್ ಡಾಲರ್ ಗೆ ಮಾರಾಟವಾಗಿದೆ. ಭಾರತೀಯ ರುಪಾಯಿಗಳಲ್ಲಿ ಇದು ಸರಿ ಸುಮಾರು 33 ಕೋಟಿ ರೂ.ಮೌಲ್ಯವನ್ನೊಂದಿದೆ ಎಂದು ತಿಳಿದು ಬಂದಿದೆ. ಈ ಫೆರಾರಿ ಎಫ್50 ಕಾರಿನ ಬಗ್ಗೆ ತಿಳಿಯೋದಾದ್ರೆ ಈ ಕಾರು ಕೇವಲ 349 ಯುನಿಟ್ ಉತ್ಪಾದನೆಗೆ ಮಾತ್ರ ಸೀಮಿತವಾಗಿತ್ತು. ಅದರಲ್ಲಿ ಕೇವಲ 73 ಯುನಿಟ್ ಗಳು ಮಾತ್ರ ಯುಎಸ್ ಮಾರುಕಟ್ಟೆಗೆ ರಿಸರ್ವ್ ಮಾಡಲಾಗಿತ್ತು.

ಈ ಕಾರು ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಆಕರ್ಷಕ ಫೀಚರ್ ಗಳನ್ನ ಒಳಗೊಂಡಿದೆ. 60 ವಾಲ್ಟ್ 4.7 ಎಲ್ 65 ಡಿಗ್ರಿ 12 ಪವರ್ ಪ್ಲಾಂಟ್ ಅನ್ನ ಒಳಗೊಂಡಿದ್ದು, ಇದು 8,500 ಆರ್.ಪಿ.ಎಂ.ನಲ್ಲಿ 513 ಹಾರ್ಸ್ ಪವರ್ ಗರಿಷ್ಠ ಶಕ್ತಿಯನ್ನ ಉತ್ಪಾದನೆ ಮಾಡುತ್ತದೆ. ಈ ಕಾರಿನ ವೇಗವನ್ನ ತಿಳಿಯುವುದಾದರೆ ಇದು ಕೇವಲ 3.6 ಸೆಕೆಂಡುಗಳಲ್ಲಿ ಬರೋಬ್ಬರಿ 100 ಕಿಮೀ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಲೈಗರ್ ಚಿತ್ರದ ಮೂಲಕ ಸುದ್ದಿಯಾಗಿದ್ದ ಮಾಜಿ ಬಾಕ್ಸರ್ ಮೈಕ್ ಟೈಸನ್ ಅವರು ಇದೀಗ ತಾವು ಬಳಸುತ್ತಿದ್ದ ಫೆರಾರಿ ಎಫ್50 ಕಾರು ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟ ಆಗುವ ಮೂಲಕ ಸುದ್ದಿ ಆಗಿದ್ಧಾರೆ.

Leave a Reply

%d bloggers like this: